ಹುಬ್ಬಳ್ಳಿ: ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಇಲ್ಲಿನ ಜೆಸಿ ನಗರದ ಮಹಿಳಾ ಮಹಾವಿದ್ಯಾಲಯದ ಸಾನಿಕಾ ರವಿಶಂಕರ ಗುಂಡೂರಾವ್(593) ರಾಜ್ಯಕ್ಕೆ ಮೂರನೇ ರ್ಯಾಂಕ್ ಪಡೆದಿದ್ದಾರೆ.
ಪ್ರಾಚಾರ್ಯೆ ಅನುರಾಧಾ ಹೊಸಕೋಟೆ: ಇದು ಅವಿಸ್ಮರಣೀಯ ಘಳಿಗೆ. ದೊಡ್ಡ ಸಾಧನೆ ನಮ್ಮ ಕಾಲೇಜಿನಲ್ಲಿ. ಅವಳು ಅದ್ಭುತ ಮಗು. ಮೊದಲ ವರ್ಷದಲ್ಲಿಯೂ ಉತ್ತಮವಾಗಿ ಅಧ್ಯಯನ ಮಾಡುತ್ತಿದ್ದಳು. ಅವಳ ಪರಿಶ್ರಮವೇ ಈ ಸಾಧನೆಗೆ ಕಾರಣ.
ಎರಡನೇ ವರ್ಷದಲ್ಲಿ ಅವಳ ಕ್ಲಾಸ್ ತೆಗೆದುಕೊಂಡಾಗ, ಪ್ರಶ್ನೆಗೆ ಉತ್ತರ ಗೊತ್ತಿದ್ದರೂ ಸುಮ್ಮನೆ ಇರುತ್ತಿದ್ದಳು. ಚಿನ್ಮಯದಲ್ಲಿ ಅವಳು ರ್ಯಾಂಕ್ ಹೋಲ್ಡರ್. ಆರ್ಟ್ಸ್ ಯಾಕೆ ಮಾಡುತ್ತಿದ್ದೀಯ ಅಂದಾಗ, ಲಾ ಮಾಡಬೇಕು ಅಂದು ಅರ್ಟ್ ತಗೊಂಡಿದ್ದೇನೆ ಅನ್ನುತ್ತಿದ್ದಳು ಎಂದರು.
ಪ್ರೊಫೆಸರ್ ಅಶ್ವಿನಿ: ಡೌಟ್ ಬಂದರೆ ಕ್ಲಾಸ್ ಲ್ಲಿ ಕೇಳ್ತಾ ಇರಲಿಲ್ಲ. ಹೊರಗಡೆ ಬಂದು ಕೇಳುತ್ತಿದ್ದಳು. ಅವಳು ಅಧ್ಯಯನಶೀಲ ಹುಡುಗಿ. ರ್ಯಾಂಕ್ ಬಂದಾಗಲೂ ಅವಳ ವರ್ತನೆ ಬದಲಾಗಿಲ್ಲ. ಅವಳು ಸಹನಾಶೀಲ ಹುಡುಗಿ. ಇಂಗ್ಲೀಷ್ ಮಿಡಿಯಂ ವಿದ್ಯಾರ್ಥಿ ಆದರೂ ಕನ್ನಡ ಮಿಡೀಯಂ ವಿದ್ಯಾರ್ಥಿಗಳ ಜೊತೆಗೆ ಬೆರೆಯುತ್ತಿದ್ದಳು ಎಂದರು.
ರಾಜ್ಯಶಾಸ್ತ್ರ ಪ್ರಾಧ್ಯಾಪಕ ಎಲ್.ಕೆ. ಹೊಸಮನಿ: ರಾಜ್ಯಶಾಸ್ತ್ರದಲ್ಲಿ 100 ಕ್ಕೆ ನೂರು ಅಂಕ ಪಡೆದಿದ್ದಾಳೆ. ವಿದ್ಯೆ ಇದ್ದಲ್ಲಿ ವಿನಯ ಇರುತ್ತದೆ ಎನ್ನಲು ಸಾನಿಕಾ ಉತ್ತಮ ಉದಾಹರಣೆ.
ಇತಿಹಾಸದಲ್ಲಿ 99 ಅಂಕ ಪಡೆದಿದ್ದಾಳೆ. ಎಕಾನಮಿಕ್ಕ 99, ರಾಜ್ಯಶಾಸ್ತ್ರ 100, ಸೈಕಾಲಜಿ 100, ಇಂಗ್ಲೀಷ್ 95, ಹಿಂದಿ 100
ಸಾನಿಕಾ ಮಾತನಾಡಿ ಈ ಸಂದರ್ಭ ನಿರೀಕ್ಷಿಸಲಿಲ್ಲ. ಲಾ ಮಾಡಬೇಕು ಎಂದು ಆರ್ಟ್ ತಗೊಂಡೆ. ಕಾಲೇಜಿನ ಎಲ್ಲ ಶಿಕ್ಷಕ ವೃಂದದಕ್ಕೆ ನಾನು ಋಣಿ. ವೈಯಕ್ತಿಕವಾಗಿ ನನ್ನ ಬಗ್ಗೆ ಕೇರ್ ತಗೊಂಡು ಪ್ರೋತ್ಸಾಹ ನೀಡಿದರು. ಸ್ನೇಹಿತರ ಸಹಕಾರ ಮುಖ್ಯವಾಗಿದೆ. ನಿಮ್ಮೆಲ್ಲರ ಸಹಕಾರದಿಂದ ರ್ಯಾಂಕ್ ಬರಲು ಸಾಧ್ಯವಾಗಿದೆ ಎಂದರು.
ಸಾನಿಕಾ ತಾಯಿ ರಾಜೇಶ್ವರಿ: ಮಗಳ ಸಾಧನೆಗೆ ಹೆಮ್ಮೆ ಇದೆ. ಫಾದರ್ಸ್ ಡೇಗೆ ಒಳ್ಳೆಯ ಉಡುಗೊರೆ ನೀಡಿದ್ದಾಳೆ. ಕಾಲೇಜಿನ ಶಿಕ್ಷಕರ ವೃಂದದ ಪ್ರೋತ್ಸಾಹದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ.
