Breaking News

ಉತ್ತರ ಕೊರಿಯಾದಲ್ಲಿ ಇದೀಗ ಉದರಕ್ಕೆ ಸಂಬಂಧಿಸಿದ ಹೊಸ ಸಾಂಕ್ರಾಮಿಕ ರೋಗ ಪತ್ತೆ

Spread the love

ಸಿಯೋಲ್: ಉತ್ತರ ಕೊರಿಯಾದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ನಡುವೆಯೇ ಮತ್ತೊಂದು ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
ನೈರುತ್ಯ ಹೇಜು ನಗರದಲ್ಲಿ ಉದರಕ್ಕೆ ಸಂಬಂಧಿಸಿದ ರೋಗ ಕಂಡುಬಂದಿದ್ದು, ಎಷ್ಟು ಮಂದಿಯಲ್ಲಿ ಕಾಣಿಸಿಕೊಂಡಿದೆ ಮತ್ತು ಇದರ ಗಂಭೀರತೆ ಏನೆಂಬುದು ಸ್ಪಷ್ಟವಾಗಿಲ್ಲ. ಅಂತಾರಾಷ್ಟ್ರೀಯ ವೀಕ್ಷಕರ ಪ್ರಕಾರ, ಇದು ಟೈಫಾಯಿಡ್, ಭೇದಿ ಅಥವಾ ಕಾಲಾರಾದಂತಹ ರೋಗ ಇರಬಹುದು ಎನ್ನಲಾಗ್ತಿದೆ. ಕಲುಷಿತ ಆಹಾರ ಮತ್ತು ನೀರಿನ ಸೇವನೆಯಿಂದ ಈ ರೋಗ ಬರುತ್ತಿದೆ ಎಂದು ತಿಳಿದುಬಂದಿದೆ.
ವಿಚಿತ್ರ ಅನ್ನಿಸುವ ರೋಗಗಳು ಉತ್ತರ ಕೊರಿಯಾದಲ್ಲಿ ಆಗಾಗ ಕಂಡುಬರುತ್ತಲೇ ಇವೆ. ಇದಕ್ಕೆ ಕಾರಣ ಉತ್ತಮ ನೀರಿನ ಸಂಸ್ಕರಣಾ ಘಟಕಗಳ ಕೊರತೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯೂ ಸೂಕ್ತ ರೀತಿಯಲ್ಲಿಲ್ಲ. ಉತ್ತರ ಕೊರಿಯಾವು ಹೊಸ ಸ್ವರೂಪದ ಜ್ವರದ ಲಕ್ಷಣಗಳನ್ನು ಹೊಂದಿರುವ ಹೆಚ್ಚು ರೋಗಿಗಳ ಸಂಖ್ಯೆಯನ್ನು ವರದಿ ಮಾಡಿದ ನಂತರ, ದಕ್ಷಿಣ ಕೊರಿಯಾದ ಗೂಢಚಾರಿಕೆ ಸಂಸ್ಥೆಯು ಆ ಜ್ವರದ ಪ್ರಕರಣಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ದಡಾರ, ಟೈಫಾಯಿಡ್ ಮತ್ತು ಪೆರ್ಟುಸಿಸ್‌ನಂತಹ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದೆ.
ಉತ್ತರ ಕೊರಿಯಾದಲ್ಲಿ ಒಟ್ಟು 26 ದಶಲಕ್ಷ ಜನಸಂಖ್ಯೆ ಇದೆ. ಈ ಪೈಕಿ 4.5 ದಶಲಕ್ಷಕ್ಕೂ ಹೆಚ್ಚು ಜನರು ಜ್ವರದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಇಲ್ಲಿಯವರೆಗೆ 73 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ದೇಶದಲ್ಲಿ ಪರೀಕ್ಷಾ ಕಿಟ್‌ಗಳ ಕೊರತೆ ಉಂಟಾಗಿದೆ. ಹೀಗಾಗಿ, ಕೊರೊನಾ ವೈರಸ್ ಪ್ರಕರಣಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ.


Spread the love

About Karnataka Junction

    Check Also

    ಸಚಿವರಾಗಿ ಬಂದ ಮೊದಲ ದಿನವೇ ಆಡಳಿತಯಂತ್ರಕ್ಕೆ ಚುರುಕು ಮುಟ್ಟಿಸಿದ ಕೇಂದ್ರ ಸಚಿವ ಜೋಶಿ

    Spread the loveಸಚಿವರಾಗಿ ಬಂದ ಮೊದಲ ದಿನವೇ ಆಡಳಿತಯಂತ್ರಕ್ಕೆ ಚುರುಕು ಮುಟ್ಟಿಸಿದ ಕೇಂದ್ರ ಸಚಿವ ಜೋಶಿ ಕಿಮ್ಸ್ ಆಸ್ಪತ್ರೆ ನಿರ್ದೇಶಕರಿಗೆ …

    Leave a Reply

    error: Content is protected !!