ಹುಬ್ಬಳ್ಳಿ;
ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಇಡಿ ನೋಟಿಸ್ ನೀಡುವುದು ಬಿಜೆಪಿ ಷಡ್ಯಂತ್ರ. ರಾಜಕೀಯ ದುರುದ್ದೇಶದಿಂದ ಈ ರೀತಿ ಕಿರುಕುಳ ನೀಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಾ ಹೇಳಿದರು.
ನಗರದ ಗೋಕುಲ ರಸ್ತೆಯ ವಿಮಾನ ನಿಲ್ದಾಣದ ಆವರಣದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆಗೆ ಮಾತನಾಡಿದರು
ಈ ಪ್ರಕರಣದ ಬಗ್ಗೆ ಈ ಹಿಂದೆಯೇ ತನಿಖೆ ಮಾಡಿ, ರಿಪೋರ್ಚ್ ಹಾಕಿದ್ದರು. ನ್ಯಾಷನಲ್ ಹೆರಾಲ್ಡ… ಪತ್ರಿಕೆ 1938ರಲ್ಲಿ ನೆಹರೂ ಪ್ರಾರಂಭ ಮಾಡಿದ್ದು. ಅದರಲ್ಲಿ ಈ ಹಿಂದೆ ರಾಜೀವ್ ಗಾಂಧಿ, ಈಗ ಸೋನಿಯಾ ಹಾಗೂ ರಾಹುಲ್ ಎಲ್ಲರೂ ಟ್ರಸ್ಟಿಗಳಾಗಿದ್ದಾರೆ. ವಿಚಾರಣೆಯಲ್ಲಿ ಇರೋದು ಕೇವಲ ರಾಜಕೀಯ ದುರುದ್ದೇಶ ಅಷ್ಟೇ. ಅವರ ರಾಜಕೀಯ ವರ್ಚಸ್ಸು ಕಡಿಮೆ ಮಾಡಲು ಹೀಗೆ ಮಾಡುತ್ತಿದ್ದಾರೆ. ಹೀಗಾಗಿ, ಪ್ರತಿಭಟನಾನಿರತರನ್ನು ಪೊಲೀಸರ ಮೂಲಕ ಕೇಂದ್ರ ಸರ್ಕಾರ ಅರೆಸ್ಟ್ ಮಾಡಿಸುತ್ತಿದೆ ಎಂದು ಆರೋಪಿಸಿದರು. ಯಂಗ್ ಇಂಡಿಯಾ ದಂತ ಸಂಘಟನೆ ಮೂಲಕ ದೇಶಕ್ಕಾಗಿ ಹೋರಾಟ ಮಾಡಿದೆ. ಭಾರತೀಯ ಜನತಾ ಪಕ್ಷ ಅನಗತ್ಯವಾಗಿ ಆರೋಪ ಮಾಡುತಿದೆ ಎಂದು ಸಿದ್ದರಾಮಯ್ಯಾ ಗಂಭೀರ ಸ್ವರೂಪದ ಆರೋಪಿ ಮಾಡಿದರು
ಶಾಸಕ ಅಬ್ಬಯ್ಯಾ ಪ್ರಸಾದ್, ಶಾಸಕಿ ಕುಸುಮಾವತಿ ಶಿವಳ್ಳಿ, ಬಸವರಾಜ ಗುರಿಕಾರ, ಸದಾನಂದ ಡಂಗಣವರ, ರಜತ್ ಉಳ್ಳಾಗಡ್ಡಿಮಠ, ನಾಗರಾಜ್ ಗೌರಿ, ದೀಪಕ್ ಚಿಂಚೋರೆ, ವಿನೋದ್ ಅಸೂಟಿ, ಬಸವರಾಜ ಗುರಿಕಾರ,
ರಾಜಶೇಖರ ಮೆಣಸಿನಕಾಯಿ ಸೇರಿದಂತೆ ಉಪಸ್ಥಿತರಿದ್ದರು
