ಹುಬ್ಬಳ್ಳಿ; ಕೇಂದ್ರ ಸರ್ಕಾರದ ನೇತೃತ್ವದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಘೋಷಣೆ ಮಾಡಿರುವ ಅಗ್ನಿಪಥ ಯೋಜನೆ ದೇಶದಲ್ಲಿ ಉದ್ಯೋಗ ನೀಡುವ ಹೆಸರಲ್ಲಿ ದೇಶಕ್ಕೆ ಬೆಂಕಿ ಹಾಕುವ ಕಾರ್ಯಕ್ಕೆ ಮುಂದಾಗಿದೆ. ಈ ನಿರ್ಧಾರವನ್ನು ಕೈ ಬಿಡಬೇಕು ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಹೇಳಿದರು.
ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, 1954ರ ನೇಮಕಾತಿ ತಿದ್ದುಪಡಿ ಹಿನ್ನೆಲೆಯಲ್ಲಿ ಖಾಲಿ ಇರುವ ಲಕ್ಷಾಂತರ ಹುದ್ದೆಗಳಿಗೆ ನೇಮಕಾತಿ ಮಾಡಬೇಕು ಅದನ್ನು ಬಿಟ್ಟು ಅಗ್ನಿಪಥ ಹೆಸರಲ್ಲಿ ಯುವಕರಿಗೆ ನಾಲ್ಕು ವರ್ಷ ತರಬೇತಿ ನೀಡಿ ದೇಶದಲ್ಲಿ ಬೆಂಕಿ ಹಾಕಿಸುವ ಕಾರ್ಯಕ್ಕೆ ಬಿಜೆಪಿ ಮುಂದಾಗಿರುವುದು ನಿಜಕ್ಕೂ ಸಾರ್ವಜನಿಕ ವಿರೋಧದ ನಿರ್ಧಾರವಾಗಿದೆ ಎಂದು ಅವರು ಕಿಡಿಕಾರಿದರು.
ಬಿಜೆಪಿ ಸರ್ಕಾರದ ಈ ನಿರ್ಧಾರದ ಹಿಂದೆ ಬಹುದೊಡ್ಡ ಹುನ್ನಾರವಿದೆ. ನಾಲ್ಕು ವರ್ಷ ತರಬೇತಿ ನೀಡಿ ಶ್ರೀರಾಮಸೇನೆ, ಆರ್.ಎಸ್.ಎಸ್ ಹಾಗೂ ಭಜರಂಗದಳ ಮಾಡುವ ಮೂಲಕ ದೇಶದಲ್ಲಿ ಗಲಭೆ ಎಬ್ಬಿಸುವ ಷಡ್ಯಂತ್ರವನ್ನು ಈ ಬಿಜೆಪಿ ಮಾಡುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.
