Breaking News

ಹುಬ್ಬಳ್ಳಿ; ಸಿಎಂ ದೆಹಲಿ ಪ್ರವಾಸ ಕುರಿತು ವಿಶೇಷ ಅರ್ಥ ಬೇಡಾ- ಜಗದೀಶ್ ಶೆಟ್ಟರ್

Spread the love

ಹುಬ್ಬಳ್ಳಿ;
ನ್ಯಾಶನಲ್ ಹೆರೆಲ್ಡಾ ಹಗರಣದಲ್ಲಿ ತಮ್ಮದು ತಪ್ಪು ಇಲ್ಲದಿದ್ದರೆ ಕಾನೂನು ಪ್ರಕಾರ ಹೋರಾಟ ಮಾಡಬೇಕಿತ್ತು ಯಾಕೆ ಬೀದಿಗಳಿದು ಪ್ರತಿಭಟನೆ ಮಾಡಿದ್ದು ಇದು ತಪ್ಪನ್ನು ಮುಚ್ಚಿಕೊಳ್ಳಲು ಮಾಡುವ ಹೋರಾಟ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಿಡಿ ಕಾರಿದರು.
ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದರು‌
ಏನೇ ಆಗಲಿ ಆರೋಪ ಬಂದಾಗ ಅದನ್ನು ಸಮರ್ಥನೆ ಮಾಡಿಕೊಳ್ಳಲು ಯಾವ ರೀತಿ ಹೋರಾಟ ಮಾಡಬೇಕು ಗೊತ್ತಿಲ್ಲ ಅವರಿಗೆ ಕಾನೂನು ಇದೇ ಆ ಮೂಲಕ ಹೋರಾಟ ಮಾಡಲಿ ಎಂದು ಸಲಹೆ ನೀಡಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನಾಳೆ ಬೆಂಗಳೂರಿಗೆ ಬರುವ ಕಾರಣ ಇಂದು ಜಿಎಸ್​​​​​ಟಿ ಕೌನ್ಸಿಲ್ ಸಭೆ ಹಿನ್ನೆಲೆಯಲ್ಲಿ ದೆಹಲಿಗೆ ಹೋದಾಗ ಹೈಕಮಾಂಡ್​ನ ಯಾವುದೇ ನಾಯಕರನ್ನು ಭೇಟಿಯಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ ಅವರೇ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ಈ ಪ್ರವಾಸದ ವೇಳೆ ಹೈಕಮಾಂಡ್​ನ ಯಾವುದೇ ನಾಯಕರನ್ನು ಭೇಟಿ ಆಗುತ್ತಿಲ್ಲ, ನಾಳೆ ನಮ್ಮ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಇಲ್ಲಿಯೇ ಬರುತ್ತಾರೆ ಎಂದರು. .
*ಇನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಂಡಿಲ್ಲ*
ಕೇಂದ್ರ ತಂದಿರುವ ಹೊಸ ಅಗ್ನಿಪಥ್ ಯೋಜನೆ​ ವಿರುದ್ಧ ದೇಶಾದ್ಯಂತ ಪ್ರತಿಭಟನೆ ಕಾವು ಹೆಚ್ಚಾಗುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಜಗದೀಶ್ ಶೆಟ್ಟರ್ ಹೇಳಿದರು.
ಕೇಂದ್ರ ಸರ್ಕಾರ ಈ ಹೊಸ ಸೇನಾ ಯೋಜನೆಯನ್ನು ಹಿಂತೆಗೆದುಕೊಂಡು ಮೊದಲಿನ ರೀತಿಯಲ್ಲೇ ಸೇನಾ ನೇಮಕಾತಿ ಮಾಡಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು ಇದು ಸರಿಯಲ್ಲ. ಇದೊಂದು ಒಳ್ಳೆಯ ಯೋಜನೆ ಎಂದರು.
*ಸಿಎಜಿ ವರದಿ ಚರ್ಚೆ ಮಾಡಬೇಕಿತ್ತು*
ಸಾಕಷ್ಟು ಚರ್ಚೆಗೆ ಗ್ರಾಸವಾದ ಸಿಎಜಿ ವರದಿ ಪ್ರತಿಪಕ್ಷಗಳು
ಚರ್ಚೆ ಮಾಡಬೇಕಿತ್ತು ಅದನ್ನ ಬಿಟ್ಟು ತಮಗೆ ಮನಬಂದಂತೆ ಹೇಳುವುದ ಸರಿಯಾದ ಕ್ರಮವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕ ಅರವಿಂದ ಬೆಲ್ಲದ ‌ಮುಂತಾದವರಿದ್ದರು.


Spread the love

About Karnataka Junction

    Check Also

    ಬಹುದೊಡ್ಡ ಪ್ರಮಾಣದಲ್ಲಿ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗುತ್ತೆ- ಟೆಂಗಿನಕಾಯಿ

    Spread the loveಬಹುದೊಡ್ಡ ಪ್ರಮಾಣದಲ್ಲಿ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗುತ್ತೆ- ಟೆಂಗಿನಕಾಯಿ ಹುಬ್ಬಳ್ಳಿ: ಈ ಸಲ ಮೂರನೇ ಬಾರಿಗೆ ಪ್ರಧಾನಿ ನರೇಂದ್ರ …

    Leave a Reply

    error: Content is protected !!