Breaking News

21 ಸರ್ಕಾರಿ ಅಧಿಕಾರಿಗಳ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳ ಹಿನ್ನೆಲೆಯಲ್ಲಿ ಎಸಿಬಿ ದಾಳಿ

Spread the love

ಹುಬ್ಬಳ್ಳಿ; ಶುಕ್ರವಾರ ಬೆಳಂಬೆಳಗ್ಗೆ ರಾಜ್ಯಾದ್ಯಂತ ಎಸಿಬಿ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳು, ಅವರ ಸಂಬಂಧಿಕರ ಮನೆ ಹಾಗೂ ಕಚೇರಿ ಅವರ ಒಡನಾಡಿಗಳ ಮನೆ ಮೇಲೆ ದಾಳಿ ನಡೆಸಿದ್ದು ಅಪಾರ ಪ್ರಮಾಣದ ನಗದು, ಚಿನ್ನಾಭರಣ ಹಾಗೂ ಬ್ಯಾಂಕ್ ಖಾತೆ ಸೇರಿದಂತೆ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಎಸಿಬಿ 21 ಸರ್ಕಾರಿ ಅಧಿಕಾರಿಗಳ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳ ಮೇಲೆ ದಾಳಿ ನಡೆಸಿದ್ದು, 80 ಸ್ಥಳಗಳಲ್ಲಿ ಶೋಧ ನಡೆಸಿ 300 ಅಧಿಕಾರಿಗಳು ಮತ್ತು ಸಿಬ್ಬಂದಿಯ ತಂಡದಿಂದ ದಾಖಲೆಗಳ ಪರಿಶೀಲನೆ ಆರಂಭಿಸಲಾಗಿದೆ. ಬೆಂಗಳೂರು ಸೇರಿದಂತೆ 10 ಜಿಲ್ಲೆಗಳಲ್ಲಿ ದಾಳಿ ಮಾಡಲಾಗಿದೆ. ಬೆಂಗಳೂರಿನಲ್ಲಿ ಶಿವಲಿಂಗಯ್ಯ ಬಿಡಿಎ ಗಾರ್ಡೇನಿಯರ್, ಜೆಪಿ ನಗರ, ಬಸವನಗುಡಿ ಹಾಗೂ ದೊಡ್ಡಕಲ್ಲಸಂದ್ರದಲ್ಲಿ ದಾಳಿ ನಡೆದಿದೆ.
ದಾಳಿಗೊಳಗಾದ ಭ್ರಷ್ಟರ ವಿವರ ನೋಡಿ.
1.ಭೀಮಾ ರಾವ್ ವೈ ಪವಾರ್, ಸೂಪರಿಂಟೆಂಡೆಂಟ್ ಆಫ್ ಇಂಜಿನಿಯರ್. ಬೆಳಗಾವಿ.
2.ಹರೀಶ್.ಸಹಾಯಕ ಇಂಜಿನಿಯರ್.ಸಣ್ಣ ನೀರಾವರಿ.ಉಡುಪಿ.
3.ರಾಮಕೃಷ್ಣ ಎಚ್ .ವಿ. , ಎಇಇ ಮೈನರ್ ನೀರಾವರಿ.ಹಾಸನ.
4.ರಾಜೀವ್ ಪುರಸಯ್ಯ ನಾಯಕ್,ಸಹಾಯಕ ಇಂಜಿನಿಯರ್.PWD.ಕಾರವಾರ.
5.ಬಿ ಆರ್ ಬೋಪಯ್ಯ,ಜೂನಿಯರ್ ಇಂಜಿನಿಯರ್.ಪೊನ್ನಂಪೇಟೆ ಜಿಲ್ಲಾ ಪಂಚಾಯತ್.
6 .ಮಧುಸೂಧನ್.ಜಿಲ್ಲಾ ನೋಂದಣಾಧಿಕಾರಿ.IGR ಕಛೇರಿ. ಬೆಳಗಾವಿ.
7.ಪರಮೇಶ್ವರಪ್ಪ.ಸಹಾಯಕ ಇಂಜಿನಿಯರ್.ಸಣ್ಣ ನೀರಾವರಿ.ಹೂವಿನಹಡಗಲಿ.
8.ಯಲ್ಲಪ್ಪ ಎನ್ ಪಡಸಾಲಿ ಆರ್ ಟಿಓ ಬಾಗಲಕೋಟೆ.
9.ಶಂಕರಪ್ಪ ನಾಗಪ್ಪ ಗೋಗಿ.ಯೋಜನಾ ನಿರ್ದೇಶಕರು .ನಿರ್ಮಿತಿ ಕೇಂದ್ರ .ಬಾಗಲಕೋಟೆ.
10 .ಪ್ರದೀಪ್ ಎಸ್ ಆಲೂರ್.ಪಂಚಾಯತ್ ಗ್ರೇಡ್ ಎರಡು ಕಾರ್ಯದರ್ಶಿ.ಆರ್ ಡಿಪಿಆರ್ .ಗದಗ.
11.ಸಿದ್ದಪ್ಪ ಟಿ .ಉಪ ಮುಖ್ಯ ವಿದ್ಯುತ್ ಅಧಿಕಾರಿ, ಬೆಂಗಳೂರು.
12.ತಿಪ್ಪಣ್ಣ ಪಿ ಸಿರಸಗಿ.ಜಿಲ್ಲಾ ಕಾರ್ಯಕ್ರಮಾಧಿಕಾರಿ ಬೀದರ್.
13.ಮುರುತುಂಜಯ ಚೆನ್ನಬಸಯ್ಯ ತಿರಾಣಿ.ಸಹಾಯಕ ಕಂಟ್ರೋಲರ್.ಕರ್ನಾಟಕ ಪಶುವೈದ್ಯಕೀಯ, ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ. ಬೀದರ್.
14.ಮೋಹನ್ ಕುಮಾರ್.ಕಾರ್ಯನಿರ್ವಾಹಕ ಇಂಜಿನಿಯರ್. ನೀರಾವರಿ .ಚಿಕ್ಕಬಳ್ಳಾಪುರ ಜಿಲ್ಲೆ.
15. ಶ್ರೀಧರ್. ಜಿಲ್ಲಾ ನೋಂದಣಾಧಿಕಾರಿ ಕಾರವಾರ .
16. ಮಂಜುನಾಥ್ ಜಿ.ನಿವೃತ್ತ ಇಇ. ಪಿಬ್ಲೂಡಿ,
17.ಶಿವಲಿಂಗಯ್ಯ. ಗುಂಪು C. ಬಿಡಿಎ.
18. ಉದಯ ರವಿ .ಪೊಲೀಸ್ ಇನ್ಸ್‌ಪೆಕ್ಟರ್.ಕೊಪ್ಪಳ.
19.ಬಿ. ಜಿ.ತಿಮ್ಮಯ್ಯ.ಕೇಸ್ ವರ್ಕರ್.ಕಡೂರು ಪುರಸಭೆ.
20.ಚಂದ್ರಪ್ಪ ಸಿ ಹೋಳೇಕರ್.ಯುಟಿಪಿ ಕಛೇರಿ. ರಾಣೆಬೆನ್ನೂರು.
21. ಜನಾರ್ದನ್.ನಿವೃತ್ತ ರಿಜಿಸ್ಟ್ರಾರ್ ಮೌಲ್ಯಮಾಪನಗಳು (ಭೂಮಿ).
ಕಲಬುರಗಿ ನಗರದಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳ ದಾಳಿ
ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಯೋಜನಾಧಿಕಾರಿ ತಿಪ್ಪಣ್ಣ ಸಿರಸಗಿ ಅವರ ಕಲಬುರಗಿ ಕೆಹೆಚ್ಬಿ ಕಾಲೋನಿಯ ಮನೆ ಮೇಲೆ ಮತ್ತು ಕಲಬುರಗಿ, ಬೀದರ್ ನಗರದಲ್ಲಿನ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿ ದಾಖಲೆ ಪರಿಶೀಲನೆ ಮಾಡಲಾಗುತ್ತಿದೆ. ತಿಪ್ಪಣ್ಣ ಸಿರಸಗಿ ಬೀದರ್ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅನೇಕರಿಗೆ ಉದ್ಯೋಗ ಕೊಡಿಸೋದಾಗಿ ಹೇಳಿ ಮಹಿಳೆಯರಿಂದ ಲಕ್ಷಾಂತರ ಹಣ ಪಡೆದಿದ್ದ ಆರೋಪ ಕೇಳಿ ಬಂದಿದೆ.


Spread the love

About Karnataka Junction

[ajax_load_more]

Check Also

ವಲಯ ಅರಣ್ಯಧಿಕಾರಿ ಸೇವಾಲಾಲ ಮಾಲಾಧಾರಿಗಳು ಅವಾಚ್ಯವಾಗಿ ನಿಂಧಿಸಿದ್ದಾರೆ ಎಂದು ಆರೋಪಿಸಿ: ಮನವಿ

Spread the love ಕಲಘಟಗಿ: ಫೆ. 15 ರಂದು ಜರುಗುವ ಸಂತ ಸೇವಾಲಾಲ ಜಯಂತಿ ಅಂಗವಾಗಿ ಸೇವಾಲಾಲ ಮಾಲಾಧಾರಿಗಳು ಅರಣ್ಯ …

Leave a Reply

error: Content is protected !!