ಎಸ್ ಎಸ್ ಎಲ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

Spread the love

ಹುಬ್ಬಳ್ಳಿ; ನಗರದ ಕಮಲಾಪುರದ
ಶ್ರೀ ಕರಿಸಿದ್ದೇಶ್ವರವಿದ್ಯಾಸಂಸ್ಥೆಯ ಶ್ರೀ ಮಹಾಂತೇಶ ಪ್ರಾಥಮಿಕ ಮತ್ತು ಪ್ರೌಢಶಾಲೆ ಗುರುವಾರದಂದು ಎಸ್ ಎಸ್ ಎಲ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾಗಿತ್ತು. 2022 n ನೇ ಏಪ್ರಿಲ್ ತಿಂಗಳಲ್ಲಿ ನಡೆದ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳಾದ ಕೀರ್ತಿ ನೀಲವಾಣಿ, ದೀಪಾ ಹೊಸಮನಿ, ಶಾಂತಾ ಗಿರಿಯಪ್ಪನವರ, ಲಕ್ಷ್ಮಿ ಸಾಮೋಜಿ, ಶ್ರೀದೇವಿ ತೋಟಣ್ಣವರ ಅವರನ್ನುಸನ್ಮಾನಿಸಲಾಯಿತು. ಇದೇ ವೇಳೆ ಪ್ರಥಮ, ದ್ವಿತೀಯ, ತೃತೀಯ, ಚತುರ್ಥ ಸ್ಥಾನ ಪಡೆದೆ ವಿದ್ಯಾರ್ಥಿಗಳಿಗೆ ಎಮ್.ಬಿ. ಹನವಾಳ ಶಿಕ್ಷಕರು ನಗದು ಬಹುಮಾನ ನೀಡಿ ಗೌರವಿಸಿದರು.
ಹುಬ್ಬಳ್ಳಿ- ಧಾರವಾಡ ವಲಯ ನಂಬರ್-1 ರಲ್ಲಿ ನೂತನ ಸಹಾಯ ಆಯುಕ್ತರರಾಗಿ ಅಧಿಕಾರ ಸ್ವೀಕರಿಸಿದ ಅಧಿಕಾರಿಗಳಾದ ಫಕ್ಕೀರಪ್ಪ ಇಂಗಳಗಿ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಆರ್. ಎಫ್. ಜಾಂಬೋಟಿಕರ , ಶಿಕ್ಷಕರಾದ ಲೋಗೋಗೋಳ,
ಶಾಲೆಯ ಆಡಳಿತ ಮಂಡಳಿಯ ಸದಸ್ಯರು, ಸ್ಥಳೀಯರು, ಶಾಲಾ ಸಿಬ್ಬಂದಿ ವರ್ಗ ಮುಂತಾದವರಿದ್ದರು. ಮುಖ್ಯೋಪಾಧ್ಯಾಯರು ಅಧ್ಯಕ್ಷತೆ ವಹಿಸಿದ್ದರು. ಎಮ್.ಬಿ. ಹನವಾಳ ಗುರುಗಳು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಜಿ ಭಟ್
ಸ್ವಾಗತಿಸಿದರು. ಎಮ್.ಎಚ್. ಮಾದರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ ಎಫ್ ನವಲಗುಂದ ಗುರುಗಳು ಸನ್ಮಾನಿತ ಅಧಿಕಾರಿಯವರನ್ನ ಪರಿಚಯಿಸಿದರು, ಶ್ರೀ ಆರ್ ಸಿ ಸಿದ್ದಮನಿ ಗುರುಗಳು ವಂದಿಸಿದರು.


Spread the love

About gcsteam

    Check Also

    ಪಿಯುಸಿಯಲ್ಲಿ ರಾಜ್ಯಕ್ಕೆ 3ನೇ ರಾಂಕ್: ವಿದ್ಯಾನಿಕೇತನ ಕಾಲೇಜಿನ ವಿದ್ಯಾರ್ಥಿ ಮಹತ್ವದ ಸಾಧನೆ

    Spread the loveಹುಬ್ಬಳ್ಳಿ: ಅದು ವಾಣಿಜ್ಯನಗರಿ ಹುಬ್ಬಳ್ಳಿಯ ಪ್ರತಿಷ್ಠಿತ ವಿದ್ಯಾಸಂಸ್ಥೆ. ಈ ಸಂಸ್ಥೆ ಒಂದಿಲ್ಲೊಂದು ರೀತಿಯಲ್ಲಿ ಸಾಧನೆ ಮಾಡುತ್ತ ಬಂದಿದೆ. …

    Leave a Reply