Breaking News

ಕರುಳ ಬಳ್ಳಿಯನ್ನೇ ಕಿತ್ತು ಹೊಗೆಯಲು ಮುಂದಾದ ನೀಚ ತಾಯಿ

Spread the love

ಹುಬ್ಬಳ್ಳಿ: ಈ ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರುತ್ತಾರೆ ಎಂಬುದು ಗೊತ್ತು ಆದರೆ ಕೆಟ್ಟ ತಾಯಿ ಇರುತ್ತಾರೆ ಎಂಬುದು ಕೇಳಿದಿಲ್ಲ‌. ಈ ಇಲ್ಲೊಬ್ಬಳ್ಳು ಕೆಟ್ಡ ತಾಯಿ ತನ್ನ ಕ್ರೌರ್ಯಕ್ಕೆ ಮಗುವನ್ನು ಬಲಿ ಕೊಡಲು ಮುಂದಾದ ಕರಳು ಹಿಚುಕುವ ರಿಯಲ್ ಸ್ಟೋರಿ ಇದು.
ಹೆತ್ತವರಿಗೆ ಹೆಗ್ಗಣ ಮುದ್ದು ಎಂಬ ಮಾತಿದೆ. ತನಗೆ ಹುಟ್ಟಿದ ಮಗು ಚೆನ್ನಾಗಿಲ್ಲ, ಅನಾರೋಗ್ಯದಿಂದ ಬಳಲುತ್ತಿದೆ ಎಂಬ ಕಾರಣಕ್ಕೆ ಕರುಳ ಬಳ್ಳಿಯನ್ನು ಕಸದ ಬುಟ್ಟಿಗೆ ಎಸೆದು, ಮಗು ಕಳುವಾಗಿದೆ ಎಂದು ಡ್ರಾಮಾ ಸೃಷ್ಟಿಸಿ ಈಗ ಸಿಕ್ಕಿಬಿದ್ದಿದ್ದಾರೆ. ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಮಗು ಕಳ್ಳತನ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದ್ದು, ಕಿಮ್ಸ್‌ನಲ್ಲಿ ಮಗುವಿನ ಕಳ್ಳತನವೇ ನಡೆದಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ. ತಾನೇ ಹೆತ್ತ ಕಂದನಿಗೆ ಹೆತ್ತ ತಾಯಿಯೇ ವಿಲನ್ ಆಗಿದ್ದಾಳೆ ಎಂಬುದನ್ನು ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಕಳೆದ ಸೋಮವಾರದಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಿಸಿದ್ದ ಮಗುವನ್ನು ಕಿತ್ತುಕೊಂಡು ಹೋಗಿದ್ದಾರೆಂದು ಕುಂದಗೋಳ ಮೂಲದ ತಾಯಿ ಸಲ್ಮಾ ಶೇಖ್ ಹೈ ಡ್ರಾಮಾ ಸೃಷ್ಟಿಸಿದ್ದಳು. ಮಗುವನ್ನು ಎತ್ತಿಕೊಂಡು ನಿಂತಿದ್ದೆ, ಯಾರೋ ಕಿಡಿಗೇಡಿ ಬಂದು ಕೈಯಲ್ಲಿ ಇದ್ದ ಮಗುವನ್ನು ಕಸಿದುಕೊಂಡು ಹೋಗಿದ್ದಾನೆ‌ ಎಂದು ನಾಟವಾಡಿದ್ದಳು. ತಾಯಿಯ ಹೇಳಿಕೆ ಪಡೆದಿದ್ದ ಹುಬ್ಬಳ್ಳಿ ಪೊಲೀಸರು ತನಿಖೆ ಆರಂಭಿಸಿದರು.
ಆದರೆ ಮಂಗಳವಾರ ಮುಂಜಾನೆ ಕಿಮ್ಸ್ ಹಿಂಭಾಗದಲ್ಲಿ ಕಳುವಾಗಿದ್ದ ಮಗು ಪತ್ತೆಯಾಗಿತ್ತು. ಮಕ್ಕಳ ವಾರ್ಡ್‌ನ ಹಿಂಭಾಗದಲ್ಲಿ ಮಗವ ಆಳುವ ಶಬ್ದ ಕೇಳಿದವರು ಮಗುವನ್ನು ಪತ್ತೆ ಮಾಡಿದ್ರು. ಆದರೇ ತಾಯಿ ಕೈಯಲ್ಲಿ ಇದ್ದ ಮಗು ಆಸ್ಪತ್ರೆಯ ಹಿಂಭಾಗದಲ್ಲಿ ಹೋಗಿದ್ದ ಹೇಗೆ? ಎಂಬ ವಿಚಾರ ಪೊಲೀಸ್ ತನಿಖೆ ನಡೆಸಿದಾಗ ಪ್ರಕರಣದ ಅಸಲಿ ವಿಚಾರ ಬೆಳಕಿಗೆ ಬಂದಿತ್ತು. ಅನಾರೋಗ್ಯ ಹೊಂದಿದ್ದ ಮಗುವನ್ನು ತಾಯಿಯೇ ಎಸೆದಿದ್ದಳು ಎಂಬುದನ್ನು ತಿಳಿದು ಒಂದು ಕ್ಷಣ ದಂದಾಗಿದ್ದರು‌.
ಮಗುವನ್ನು ಹಾಲುಣಿಸುವ ನೆಪದಲ್ಲಿ ಐಸಿಯುನಿಂದ ಹೊರ ತಂದಿದ್ದ ತಾಯಿ, ಶೌಚಾಲಯಕ್ಕೆ ಹೋಗು ಬರುವ ನೆಪದಲ್ಲಿ ಮಗುವನ್ನು ಕಿಟಿಕಿಯಿಂದ ಎಸೆದು‌ ಹೋಗಿದ್ದಳು ಡ್ರಾಮಾ ಮಾಡಿದ್ದಳು. ಬಳಿಕ‌ ಮಗು ಕಳುವಿನ ನಾಟಕವಾಡಿದ್ದಳು‌. ಈ ವಿಲನ್ ತಾಯಿಯು ಮಾಡಿದ್ದ ನಾಟಕವನ್ನು ಅವಳಿನಗರದ ಪೊಲೀಸರು ಬಯಲು ಮಾಡಿದ್ದಾರೆ. ಕಿಮ್ಸ್ ಸಿಸಿಟಿವಿಯಲ್ಲಿ ತಾಯಿ ಸಲ್ಮಾ ಮಗು ಎಸದಿರುವುದು ಬೆಳಕಿಗೆ‌ ಬಂದಿದೆ. ತನಗೆ ಹುಟ್ಟಿದ ಮಗುವಿನ ತಲೆ ಅತಿಯಾಗಿ ದೊಡ್ಡದಿದ್ದು, ಅದನ್ನು ತಾನೇ 103 ವಾರ್ಡಿನ ಶೌಚಾಲಯದ ಪಕ್ಕದ ಕಿಟಕಿಯಿಂದ ಹೊರಗೆ ಒಗೆದಿದ್ದಾಳೆ.
ಅದೃಷ್ಟವಶಾತ್ ಮಗು ಹುಲ್ಲಿನ ಮೇಲೆ ಬಿದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದೆ. ತನ್ನದೇ ಕರುಳು ಬಳ್ಳಿಯನ್ನು ಕೊಲೆ ಮಾಡಲು ಯತ್ನಿಸಿದಳಾ ತಾಯಿ? ಎಂಬುವಂತ ಅನುಮಾನ ಸೃಷ್ಟಿಯಾಗಿದೆ.ಒಟ್ಟಿನಲ್ಲಿ ದೊಡ್ಡದೊಂದು ಡ್ರಾಮಾ ಕ್ರಿಯೇಟ್ ಮಾಡಿರುವಳೆನ್ನಲಾದ ರಕ್ಕಸಿ ತಾಯಿಯ ಅಸಲಿಯತ್ತು ಬಯಲಾಗಿದ್ದು, ತಾನು ಹೆತ್ತ ಮಗವಿಗೆ ತಾನೇ ವಿಲನ್ ಆಗಿರುವ ಘಟನೆಯೊಂದು ನಡೆದಿದ್ದು, ಜೀವ ಕೊಟ್ಟವಳು ಜೀವ ತೆಗೆಯಲು ಮುಂದಾಗಿರುವುದು ನಿಜಕ್ಕೂ ಅಮಾನವೀಯ ಕೃತ್ಯಕ್ಕೆ ಸಾಕ್ಷಿಯಾಗಿದೆ.


Spread the love

About Karnataka Junction

[ajax_load_more]

Check Also

ಎನ್ ಸಿಎಚ್ ಆರ್ ಎಸ್ ನೂತನ ಪದಾಧಿಕಾರಿಗಳ ಆಯ್ಕೆ

Spread the loveಹುಬ್ಬಳ್ಳಿ;ರಾಷ್ಟ್ರೀಯ ಅಪರಾಧ ಭ್ರಷ್ಟಾಚಾರ ನಿಯಂತ್ರಣ ಮತ್ತು ಮಾನವ ಹಕ್ಕುಗಳ ರಕ್ಷಣಾದಳದ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ರಾಷ್ಟ್ರೀಯ …

Leave a Reply

error: Content is protected !!