https://youtu.be/C1JK4n1jirM
ಬಂಕಾಪುರ ಚೌಕ್ ಬಳಿಯ ಜಿಗಳೂರು ಪೆಟ್ರೋಲ್ ಬಂಕ್ ಎದುರು ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ
100 ನಾಟ್ ಔಟ್” ಬೃಹತ್ ಪ್ರತಿಭಟನೆಯ ನೇತೃತ್ವ ವಹಿಸಿ ಚಕ್ಕಡಿ ಗಾಡಿ ಓಡಿಸಿ, ಹಗ್ಗ ಕಟ್ಟಿ ಬೈಕ್ ಎಳೆದು, ಸೈಕಲ್ ತುಳಿದು ವಿಶಿಷ್ಠ ಪ್ರತಿಭಟನೆ
ಡೀಸೆಲ್ ಮೇಲೆ 31.84 ರೂ., ಪೆಟ್ರೋಲ್ ಮೇಲೆ 31.98 ರೂ. ತೆರಿಗೆ ವಸೂಲಿ ಮಾಡುತ್ತಿದ್ದು, ರಾಜ್ಯ ಸರ್ಕಾರ ಶೇ. 24 ಮತ್ತು 35ರಷ್ಟು ಮಾರಾಟ ತೆರಿಗೆ ವಿಧಿಸುತ್ತಿದೆ
ಹುಬ್ಬಳ್ಳಿ: ಇಂಧನಗಳ ಮೇಲೆ ಸರ್ಕಾರ ವಿಧಿಸುತ್ತಿರುವ ಅವೈಜ್ಞಾನಿಕ ಮಾರಾಟ ಹಾಗೂ ಅಬಕಾರಿ ತೆರಿಗೆಗಳನ್ನು ಕಡಿಮೆ ಮಾಡಬೇಕು ಮತ್ತು ಇಂಧನವನ್ನೂ ಜಿ.ಎಸ್.ಟಿ. ವ್ಯಾಪ್ತಿಗೆ ಸೇರಿಸಬೇಕು ಎಂದು ಶಾಸಕ ಪ್ರಸಾದ ಅಬ್ಬಯ್ಯ ಒತ್ತಾಯಿಸಿದರು.
ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ ಖಂಡಿಸಿ ಇಲ್ಲಿನ ಬಂಕಾಪುರ ಚೌಕ್ ಬಳಿಯ ಜಿಗಳೂರು ಪೆಟ್ರೋಲ್ ಬಂಕ್ ಎದುರು ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿದ್ದ “100 ನಾಟ್ ಔಟ್” ಬೃಹತ್ ಪ್ರತಿಭಟನೆಯ ನೇತೃತ್ವ ವಹಿಸಿ ಚಕ್ಕಡಿ ಗಾಡಿ ಓಡಿಸಿ, ಹಗ್ಗ ಕಟ್ಟಿ ಬೈಕ್ ಎಳೆದು, ಸೈಕಲ್ ತುಳಿದು ವಿಶಿಷ್ಠ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು.
ಡಾ. ಮನಮೋಹನ ಸಿಂಗ್ ಸರ್ಕಾರದ ಅವಧಿಯಲ್ಲಿ ಕಚ್ಛಾ ತೈಲ ದರ 120 ರಿಂದ 145 ಡಾಲರ್ ಇದ್ದರೂ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಇತ್ತು. ಕೇಂದ್ರ ಸರ್ಕಾರ ಡೀಸೆಲ್ ಮೇಲೆ 3.45 ರೂ., ಪೆಟ್ರೋಲ್ ಮೇಲೆ 9.21 ರೂ. ಅಬಕಾರಿ ತೆರಿಗೆ ವಿಧಿಸುತ್ತಿತ್ತು. ಈಗ ಡೀಸೆಲ್ ಮೇಲೆ 31.84 ರೂ., ಪೆಟ್ರೋಲ್ ಮೇಲೆ 31.98 ರೂ. ತೆರಿಗೆ ವಸೂಲಿ ಮಾಡುತ್ತಿದ್ದು, ರಾಜ್ಯ ಸರ್ಕಾರ ಶೇ. 24 ಮತ್ತು 35ರಷ್ಟು ಮಾರಾಟ ತೆರಿಗೆ ವಿಧಿಸುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಧಿಸುತ್ತಿರುವ ತೆರಿಗೆ ಮತ್ತು ಏಜೆಂಟ್ ಕಮೀಶನ್ ಸೇರಿ 60-65 ರೂ. ಹಣ ಹರಿದು ಹೋಗುತ್ತಿದೆ. ಇಂಧನ ಮೂಲ ಬೆಲೆ 35 ರೂ. ಇದ್ದರೆ ಬಿಜೆಪಿ ತೆರಿಗೆ 65 ಸೇರಿ ಒಟ್ಟು 100 ರೂ.ಲೀ.ನಂತೆ ಗ್ರಾಹಕರಿಗೆ ಪೆಟ್ರೋಲ್ ಸಿಗುತ್ತಿದೆ ಎಂದರು.
ಯುಪಿಎ ಸರ್ಕಾರದ ಅವಧಿಯಲ್ಲಿ ತೈಲ ಬೆಲೆ 1 ರೂ. ಏರಿಕೆ ಆದರೂ ರಸ್ತೆಗಿಳಿದು ವಿಧವಿಧವಾಗಿ ಪ್ರತಿಭಟನೆ ನಡೆಸುತ್ತಿದ್ದ ಅಂದಿನ ಬಿಜೆಪಿಯ ಮಹಾನ್ ನಾಯಕರಾದ ನರೇಂದ್ರ ಮೋದಿ, ಪ್ರಕಾಶ ಜಾವಡೇಕರ್, ಸ್ಮøತಿ ಇರಾನಿ, ಇತರರು ಇಂದು ಎಲ್ಲಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಬೆಲೆ ಏರಿಕೆ ನಿಯಂತ್ರಿಸಿ ಸ್ವರ್ಗ ಸೃಷ್ಠಿಸುತ್ತೇವೆ ಎಂದು “ಅಚ್ಚೇ ದಿನ್ ಆಯೇಂಗೆ” ಮೂಲಕ ಜನರಿಗೆ ಮಂಕು ಬೂದಿ ಎರಚಿ ಅಧಿಕಾರಕ್ಕೆ ಬಂದ ಬಿಜೆಪಿ, ಈಗ ಅಚ್ಛೇ ದಿನ್ ಬಗ್ಗೆ ಕಿಂಚಿತ್ತೂ ಮಾತನಾಡುತ್ತಿಲ್ಲ. ದಿನೇ ದಿನೇ ಅಡುಗೆ ಅನಿಲ ಹಾಗೂ ತೈಲ ದರ ಏರಿಕೆ ಮಾಡಿ ಜನರಿಗೆ ಇನ್ನಿಲ್ಲದ ತೆರಿಗೆ ಹೊರೆ ಹೊರಿಸಿ ನರಕದ ದಿನಗಳನ್ನು ಸೃಷ್ಠಿಸುತ್ತಿದೆ. ಇಂಧನ ದರ ನೆರೆಯ ರಾಷ್ಟ್ರಗಳಾದ ಶ್ರೀಲಂಕಾದಲ್ಲಿ 59 ರೂ., ಪಾಕಿಸ್ತಾನದಲ್ಲಿ 52 ರೂ. ಇದ್ದರೆ ಭಾರತದಲ್ಲಿ ಮಾತ್ರ 100 ರೂ. ಇದೆ. ಇಂಧನಕ್ಕೆ ವಿಶ್ವದಲ್ಲೇ ಅತಿ ಹೆಚ್ಚು ತೆರಿಗೆ ವಿಧಿಸುತ್ತಿರುವ ದೇಶ ಭಾರತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಪೆಟ್ರೋಲ್-ಡೀಸೆಲ್ ದರ ಪ್ರತಿ ಲೀ.ಗೆ 100ರ ಗಡಿ ದಾಟಿದೆ. ಕಳೆದ 1 ವರ್ಷದಿಂದ ಈಚೆಗೆ ಇಂಧನ ಬೆಲೆ ಶೇ. 30ರಷ್ಟು ಹೆಚ್ಚಳವಾಗಿದ್ದು, ಪಶ್ಚಿಮ ಬಂಗಾಳ ಸೇರಿ ಪಂಚ ರಾಜ್ಯಗಳ ಚುನಾವಣೆ ಮುಗಿದ ನಂತರ 19 ಬಾರಿ ದರ ಏರಿಕೆ ಮಾಡಿದೆ. ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ ಲೀ.ಗೆ 150 ರೂ. ತಲುಪಿದರೂ ಆಶ್ಚರ್ಯವಿಲ್ಲ ಎಂದ ಶಾಸಕರು, ಕೊರೋನಾ ಲಾಕ್ ಡೌನ್‍ನಿಂದ ಜನಜೀವನ ನಡೆಸುವುದೇ ಕಷ್ಟವಾಗಿದೆ. ಇಂಥ ಸಂಕಷ್ಟದ ಸಮಯದಲ್ಲಿ ತೆರಿಗೆ ಇಳಿಸುವ ಮೂಲಕ ಜನರ ನೆರವಿಗೆ ಧಾವಿಸಬೇಕಾದ ಸರ್ಕಾರ ಪ್ರತಿದಿನ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿ ಜನರನ್ನು ಇನ್ನಷ್ಟು ಸಂಕಷ್ಟಕ್ಕೀಡು ಮಾಡುತ್ತಿದೆ ಎಂದು ಹೇಳಿದರು.
ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಹುಡಾ ಮಾಜಿ ಅಧ್ಯಕ್ಷ ಅನ್ವರ್ ಮುಧೋಳ, ವಾಯವ್ಯ ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ ಡಂಗನವರ ಮಾತನಾಡಿದರು.
ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ರಾಜಶೇಖರ ಮೆಣಸಿನಕಾಯಿ, ಬ್ಲಾಕ್ ಅಧ್ಯಕ್ಷರುಗಳಾದ ಮೆಹಮೂದ್ ಕೋಳೂರು, ಪ್ರಸನ್ನ ಮಿರಜಕರ್, ಪಾಲಿಕೆ ಮಾಜಿ ಸದಸ್ಯರಾದ ಮೋಹನ ಅಸುಂಡಿ, ದಶರಥ ವಾಲಿ, ಯಮನೂರು ಜಾಧವ್, ಯಮನೂರು ಗುಡಿಹಾಳ, ಅಲ್ತಾಫ್ ಕಿತ್ತೂರು, ವಿಜನಗೌಡ ಪಾಟೀಲ, ಮುಖಂಡರಾದ ಕುಮಾರ ಕುಂದನಹಳ್ಳಿ, ಮಹೇಂದ್ರ ಸಿಂಘಿ, ಶಫೀ ಮುದ್ದೇಬಿಹಾಳ, ನಿರಂಜನ ಹಿರೇಮಠ, ಶಾರುಖ್ ಮುಲ್ಲಾ, ಆಸೀಫ್ ಬಳ್ಳಾರಿ, ಅಕ್ಬರ್ ಕುಮಟಾಕರ್, ಶ್ರೀನಿವಾಸ ಬೆಳದಡಿ, ಮಂಜುನಾಥ ಉಪ್ಪಾರ, ಬಾಷಾ ಪುಲದಿನ್ನಿ, ಮೈನುದ್ದಿನ್ ಮುಚ್ಚಾಲೆ, ಶರೀಫ್ ಅದೋನಿ, ವಾದಿರಾಜ ಕುಲಕರ್ಣಿ, ಯಲ್ಲಪ್ಪ ಮಡಿವಳರ, ವೀರಣ್ಣ ಹಿರೇಹಾಳ, ಮಂಜುನಾಥ ಮಟ್ಟಿ, ಬಾಬಾಜಾನ್ ಕಾರಡಗಿ, ಬಸು ಮೆಣಸಿಗಿ, ಶಾಬೀರಾ ಬೆಣ್ಣಿ, ರಾಜೇಶ್ವರಿ ಬಿಲಾನಾ, ಪುಷ್ಪಾ ಅರಳಿಕಟ್ಟಿ, ಇತರರು ಇದ್ದರು.