ರಾಯಚೂರು: ಕಲುಷಿತ ನೀರು ಸೇವಿಸಿ ಮತ್ತೋರ್ವ ಮಹಿಳೆ ಸಾವನ್ನಪ್ಪಿದ್ದಾರೆ. ನಗರದ ಮಚ್ಚಿ ಬಜಾರ್ ನಿವಾಸಿ ಶಮೀಮ್ ಬೇಗಂ (48) ಮೃತರು. ಈ ಮೂಲಕ ಸಾವನ್ನಪ್ಪಿದವರ ಸಂಖ್ಯೆ 7ಕ್ಕೇರಿದೆ.
ಶಮೀಮ್ ಬೇಗಂ ನಿರಂತರ ವಾಂತಿ ಭೇದಿ ಆಗುತ್ತಿತ್ತು. ಇದನ್ನು ಗಮನಿಸಿ ಮನೆಯವರು ಆಂಬ್ಯುಲೆನ್ಸ್ ಮೂಲಕ ಮೇ29 ರಂದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕಲುಷಿತ ನೀರು ಸರಬರಾಜಿಗೆ ನಿಖರವಾದ ಕಾರಣ ಇನ್ನು ಕಂಡು ಹಿಡಿಯಲು ಅಧಿಕಾರಿಗಳಿಗೆ ಆಗಿಲ್ಲ. ಇದರ ಜೊತೆಗೆ ಇದೇ ಪ್ರಕರಣದಲ್ಲಿ ಅಮಾನತು ಆದ ಅಧಿಕಾರಿಗಳ ರಕ್ಷಣೆಗೆ ರಾಜಕಾರಣಿಗಳ ಲಂಗಾಗಳು ಅವರಿಂದ ಮುಸುರಿ ತಿಂದು ಕಾಪಾಡಲು ಮುಂದಾದರೇ ಇನ್ನೊಂದು ಕಡೆ ತಪ್ಪಿತಸ್ಥ ಅಧಿಕಾರಿಗಳ ರಕ್ಷಣೆಗೆ ಸ್ವತಃ ಯಾರು ವ್ಯವಸ್ಥೆ ಸುಧಾರಿಸಬೇಕಾದ ಜನಪ್ರತಿನಿಧಿಗಳು ಭ್ರಷ್ಟ ಅಧಿಕಾರಗಳ ಬೆನ್ನಿಗೆ ನಿಂತಿದ್ದಾರೆ ಎಂಬ ಅಸಮಾಧಾನ ಸಾರ್ವಜನಿಕ ವಲಯದಲ್ಲಿ ಕಾರಣವಾಗಿದೆ.
