ಹುಬ್ಬಳ್ಳಿ : ಪಶ್ಚಿಮ ಶಿಕ್ಷಕರ ಕ್ಷೇತ್ರದ ಪರಿಷತ್ ಚುನಾವಣೆಯಲ್ಲಿ ಮತ್ತೆ ಬಸವರಾಜ ಹೊರಟ್ಟಿ ದಾಖಲೆಯ ಜಯ ಸಾಧಿಸಿದ್ದಾರೆ. ಇವರ ಈ ದಾಖಲೆ ಗೆಲುವಿನ ಜೊತೆಗೆ ಅಂಬಾಸಿಡರ್ ಕಾರಿನ ಮೇಲೆ ಅವರು ಇಟ್ಟ ನಂಬಿಕೆಯೂ ಗೆದ್ದಿದೆ.
ಬಸವರಾಜ್ ಹೊರಟ್ಟಿ ಅವರ ಅದೃಷ್ಟವನ್ನು ಅವರ ನೆಚ್ಚಿನ ಅಂಬಾಸಿಡರ್ ಕಾರು ಮತ್ತೊಮ್ಮೆ ಸಾಬೀತು ಮಾಡಿದೆ. ಇದೇ ಅಂಬಾಸಿಡರ್‌ನಲ್ಲಿ ಬಂದು ಹೊರಟ್ಟಿ ಅವರು ನಾಮಪತ್ರ ಸಲ್ಲಿಸಿದ್ದರು. ಈ ಕಾರಿನೊಡನೆ ಭಾವನಾತ್ಮಕ ಸಂಬಂಧವನ್ನು ಹೊಂದಿರುವ ಹೊರಟ್ಟಿ ಅವರು ಶುಭ ಕಾರ್ಯಗಳಿಗೆ ಈ ಕಾರ್ನಲ್ಲಿ ಹೋಗುತ್ತೇನೆಂದು ತಿಳಿಸಿದ್ದರು.ಪ್ರಥಮ ಚುನಾವಣೆಯಿಂದ ಈ ಚುನಾವಣೆವರೆಗೂ ಇದೇ ಕಾರನ್ನು ಹೊರಟ್ಟಿ ಅವರು ಉಪಯೋಗ ಮಾಡಿದ್ದಾರೆ. ಇದೇ ಕಾರಿನಲ್ಲಿ ಬಂದು ನಾಮಪತ್ರ ಸಲ್ಲಿಸಿದ್ದಾರೆ. ಆ ಕಾರಣಕ್ಕಾಗಿ ಬಸವರಾಜ ಹೊರಟ್ಟಿ ಅವರಿಗೆ ಈ ಕಾರು ಲಕ್ಕಿ ಎಂದು ಸಾಬೀತಾಗಿದೆ. ಈಗಾಗಲೇ ಈ ಕಾರು 8 ಲಕ್ಷ ಕಿ.ಮೀ ಓಡಿದೆ. 5757 ಅಂದ್ರೆ ಎಲ್ಲರಿಗೂ ಪರಿಚಯ. ಈ ಕಾರಿನಲ್ಲಿ ಹೋದರೆ ಹೊರಟ್ಟಿ ಬಂದ್ರು ಎನ್ನುತಿದ್ದರು.
ನೆಚ್ಚಿನ ಅಂಬಾಸಿಡರ್ ಕಾರಿನಲ್ಲಿ ಬಂದು ನಾಮಪತ್ರ ಸಲ್ಲಿಸುತ್ತಾ ಬಸವರಾಜ ಹೊರಟ್ಟಿ ಬಂದಿದ್ದಾರೆ ಅದೇನೋ ಕಾರಿನ ಮೇಲೆ ಒಂದು ಭಾವನಾತ್ಮಕ ಸಂಬಂಧ ಇದ್ದು ಕಾರಿನ ಮೇಲಿನ ಪ್ರೀತಿಗಾಗಿ ಅದರಲ್ಲಿ ಪ್ರತಿ ಚುನಾವಣೆಯಲ್ಲಿ ಬರುತ್ತಾರೆ.. ಶುಭ ಕಾರ್ಯಕ್ಕೆ ಅಂಬಾಸಿಡರ್ ಕಾರನ್ನು ಉಪಯೋಗಿಸುವ ಅವರು. ಹೀಗಾಗಿ ಆ ಕಾರನ್ನು ತಂದು ನಾಮಪತ್ರ ಸಲ್ಲಿಕೆ ಮಾಡಲು ತರುವುದನ್ನ ಮರೆಯುವುದಿಲ್ಲ
Check Also
ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ವಿರುದ್ದ FIR ದಾಖಲು
Spread the loveಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ಮೈಸೂರಿನ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿದೆ. ಕೇಸ್ ನಂಬರ್ …