Breaking News

ಶಿಕ್ಷಕರ ಕಟ್ಟಾಳು ಬಸವರಾಜ ಹೊರಟ್ಟಿ ವೈಯಕ್ತಿಕ ವರ್ಚಸ್ಸೇ ಗೆಲುವಿಗೆ ರಹದಾರಿ

Spread the love

ಹುಬ್ಬಳ್ಳಿ: ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮತ್ತೆ ಬಸವರಾಜ ಹೊರಟ್ಟಿ ಮಾಸ್ಟರ್‌ ವೈಯಕ್ತಿಕ ವರ್ಚಸ್ಸನಿಂದ ಗೆದ್ದು ದಾಖಲೆಯ ಗದ್ದುಗೆ ಏರಿದ್ದಾರೆ. ಪ್ರಮುಖ ಮೂರು ಪಕ್ಷಗಳು, ಪಕ್ಷೇತರರು ಸೇರಿದಂತೆ ಏಳು ಅಭ್ಯರ್ಥಿಗಳು ಕಣದಲ್ಲಿದ್ದರು. ಬಿಜೆಪಿ-ಕಾಂಗ್ರೆಸ್‌ ನಡುವಿನ ಸಮರ ಪ್ರಮುಖವಾಗಿದ್ಸರಯ, ಇದರಲ್ಲಿ ಗೆಲುವು ಯಾರದು ಎಂಬ ನಿರೀಕ್ಷೆ ಹೆಚ್ಚಿದೆ.
ಪಶ್ಚಿಮ ಶಿಕ್ಷಕರ ಕ್ಷೇತ್ರದ ಈ ಬಾರಿಯ ಚುನಾವಣೆ ಕೆಲವೊಂದು ವಿಶೇಷಗಳಿಗೆ ವೇದಿಕೆಯಾಗಲಿದ್ದು, ದಾಖಲೆ ಬರೆಯುವ ಚುನಾವಣೆಯಾಯಿತು. ಇಡೀ ಚುನಾವಣೆ ಪ್ರಕ್ರಿಯೆಯ ವಿದ್ಯಮಾನ ಗಮನಿಸಿದರೆ ಪಕ್ಷಗಳ ಕುರಿತ ಟೀಕೆಗಳಿಗಿಂತ ವ್ಯಕ್ತಿ ಕೇಂದ್ರಿಕೃತವಾಗಿ ಟೀಕೆ-ಆರೋಪಗಳು ಕೇಳಿ ಬಂದವು. ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಪಕ್ಷೇತರ ಅಭ್ಯರ್ಥಿಗಳು, ಪಕ್ಷಗಳ ನಾಯಕರು ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರನ್ನೇ ಕೇಂದ್ರವಾಗಿಸಿಕೊಂಡು ಆರೋಪಗಳ ಸುರಿಮಳೆ ಮಾಡಿದರು., ಇದಕ್ಕೆ ಪ್ರತಿಯಾಗಿ ಹೊರಟ್ಟಿ ಹಾಗೂ ಬಿಜೆಪಿ ನಾಯಕರು ಉತ್ತರ ನೀಡಿಕೆಗೆ ಚುನಾವಣೆ ವೇದಿಕೆಯಾಗಿತ್ತು. ಆದರೆ ಇಲ್ಲಿ ಪಕ್ಷದ ವರ್ಚಸ್ಸುಗಿಂತ ಬಸವರಾಜ ಹೊರಟ್ಟಿ ಅವರು ದಾಖಲೆಗೆ ಗೆಲುವಿಗೆ ವೈಯಕ್ತಿಕ ವರ್ಚಸ್ಸು ಕಾರಣವಾಗಿದೆ. ಇನ್ನು ಜಾತ್ಯಾತೀತ ಜನತಾದಳಲ್ಲಿದ್ದಾಗ ಸಹ ಬಸವರಾಜ ಹೊರಟ್ಟಿ ಅವರು ಪಕ್ಷದ ವೇದಿಕೆ ಬಳಸಿಕೊಳ್ಳದೇ ಜಯ ಸಾಧಿಸುತಿದ್ದರು.‌

ಸತತ 8 ನೇ ಬಾರಿಗೆ ಗೆಲುವು ಸಾಧಿಸುವ ಮೂಲಕ ವಿಧಾನ ಪರಿಷತ್ ಚುನಾವಣೆಯಲ್ಲಿ ದಾಖಲೆಯನ್ನು ನಿರ್ಮಿಸಿದ್ದಾರೆ. ಬೆಳಗಾವಿ, ಧಾರವಾಡ, ಹಾವೇರಿ, ಗದಗ 4 ಜಿಲ್ಲೆಗಳನ್ನು ಒಳಗೊಂಡಿರುವ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ 11,000ನಲ್ಲಿ 7070 ಮತಗಳನ್ನು ಪಡೆದು ಗಳಿಸಿದ್ದಾರೆ.
ಹೊರಟ್ಟಿ ವಿಜಯದ ಹಿನ್ನೆಲೆಯಲ್ಲಿ ಅಭಿಮಾನಿಗಳಿಂದ ಬೆಳಗಾವಿಯ ಮತ ಎಣಿಕೆ ಕೇಂದ್ರದ ಹೊರಗಡೆ ವಿಜಯೋತ್ಸವ ನಡೆದಿದೆ. ಬಸವರಾಜ ಹೊರಟ್ಟಿ ಅವರ ಭಾವಚಿತ್ರ ಹಿಡಿದು ಸಂಭ್ರಮಿಸಿದ್ದಾರೆ.


Spread the love

About Karnataka Junction

[ajax_load_more]

Check Also

ಕರ್ನಾಟಕ ರೈಲ್ವೆಗೆ ಕೇಂದ್ರ ಸರ್ಕಾರದಿಂದ ಯುಪಿಎ ಅವಧಿಗಿಂತ 9 ಪಟ್ಟು ಹೆಚ್ಚಿನ ಬಜೆಟ್*

Spread the love*- ಯುಪಿಎ ಸರ್ಕಾರ 5 ವರ್ಷದಲ್ಲಿ ವಾರ್ಷಿಕ 835 ಕೋಟಿ ನೀಡಿದ್ದರೆ; ಮೋದಿ ಸರ್ಕಾರದಿಂದ ಪ್ರಸ್ತುತ ಬಜೆಟ್ …

Leave a Reply

error: Content is protected !!