ಪರಿಷತ್ ಚುನಾವಣೆಯಲ್ಲಿ ಒಂದು ವಾತಾವರಣ ಕ್ರಿಯೆಟ್ ಆಗಿದೆ ಎಂದುಧಾರವಾಡದಲ್ಲಿ ಕೈ ಅಭ್ಯರ್ಥಿ ಬಸವರಾಜ ಗುರಿಕಾರ

Spread the love

‌ಧಾರವಾಡ;ಪಶ್ಚಿಮ ಶಿಕ್ಷಕರ ಕ್ಷೇತ್ರದ ಪರಿಷತ್ ಚುನಾವಣೆಯಲ್ಲಿ ಒಂದು ವಾತಾವರಣ ಕ್ರಿಯೆಟ್ ಆಗಿದೆ ಎಂದುಧಾರವಾಡದಲ್ಲಿ ಕೈ ಅಭ್ಯರ್ಥಿ ಬಸವರಾಜ ಗುರಿಕಾರ ಹೇಳಿದರು.
ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ನಾನು ಸಾಕಷ್ಟು ಶಿಕ್ಷಕರ ಸಲುವಾಗಿ ಕೆಲಸ ಮಾಡಿದ್ದೇನೆ ನಿರಂತರವಾಗಿ ಶಿಕ್ಷಕರ ಜೊತೆಗೆ ಇದ್ದೇನೆ. ಸಾಕಷ್ಟು ಶಿಕ್ಷಕರ ಸಮಸ್ಯೆಗಳ ಕುರಿತು ಧ್ವನಿ ಎತ್ತಿದ್ದೇನೆ. ಕಾರಣ ಕ್ಷೇತ್ರದ ಮತದಾರರು ಬದಲಾವಣೆಯ ನಿರ್ಣಯ ಮಾಡಿದ್ದಾರೆ ಕಾರಣ ಬದಲಾವಣೆ ಆಗಿಯೇ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು .
*ಮೊದಲ ಸುತ್ತಿನಲ್ಲೇ ನನ್ನ ಆಯ್ಕೆಯಾಗುತ್ತೆಂಬ ಆತ್ಮವಿಶ್ವಾಸವಿದೆ*
ನಾನು ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮೊದಲ ಸುತ್ತಿನಲ್ಲೇ ನನ್ನ ಆಯ್ಕೆಯಾಗುತ್ತೆಂಬ ಆತ್ಮವಿಶ್ವಾಸವಿದೆ‌‌ ಎಂದ ಅವರು,
ಶಿಕ್ಷಕರ ಸಮಸ್ಯೆ ಬಗೆಹರಿಸಲು ಹೊಸ ನಾಯಕತ್ವ ಬೇಕಿದೆ‌ ಈ ನಿಟ್ಟಿನಲ್ಲಿ
ಶಿಕ್ಷಕರು ಹೊಸ ನಾಯಕತ್ವದ ವಿಚಾರ ಮಾಡಿದ್ದಾರೆ ಎಂದು ಹೇಳಿದರು ‌.
*ಹೊರಟ್ಟಿ ಗೆದ್ದರೆ ಹೊಸ ದಾಖಲೆಯಾಗುವ ವಿಚಾರ*
ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರು ಈ ಸಲ ಚುನಾವಣೆಯಲ್ಲಿ ನಾನು ಗೆದ್ದರೆ ಎಂಟನೇ ಸಲ ಆಗುತ್ತದೆ ಇದೊಂದು ಐತಿಹಾಸಿಕ ದಾಖಲೆಯಾಗು ಎಂಬ ಕುರಿತು ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಶಿಕ್ಷಕರ ಕ್ಷೇತ್ರ ಇರೋದು
ಪರಿಷತ್ ಇರೋದು ದಾಖಲೆ ಮಾಡಲು ಅಲ್ಲ ಎಂದ ಅವರು,
ಶಿಕ್ಷಕರ ಸಮಸ್ಯೆ ಬಗೆಹರಿಸಲು ಈ ಕ್ಷೇತ್ರ ಇದೆ ಆದ್ದರಿಂದ
ಆ ಸಮಸ್ಯೆಗಳನ್ನು ಬಗೆಹರಿಸಲು ಇಲ್ಲಿಯವರೆಗೂ ಸಾಧ್ಯವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಮತ ಸೇರಿ ಗೆಲುವಿನ ಅಂತರ ಹೆಚ್ಚುತೆಂಬ ಹೊರಟ್ಟಿ ಹೇಳಿಕೆ ವಿಚಾರ ಬುಡೇಮೇಲಾಗುತ್ತದೆ. ಕಾರಣ ಶಿಕ್ಷಕರು ಪಕ್ಷಾತೀತವಾಗಿದ್ದಾರೆ . ಯಾವುದೇ ಕಾರಣಕ್ಕೋ ಅವರು ನನಗೆ ಮತ ಹಾಕುತ್ತಾರೆ. ಪಕ್ಷಾತೀತವಾಗಿ ಮತ ಚಲಾಯಿಸುತ್ತಾರೆಹೀಗಾಗಿ ಹೊರಟ್ಟಿ ಲೆಕ್ಕಾಚಾರ ಈ ಸಲ್ಲ ತಪ್ಪುತ್ತದೆ ಎಂದರು.
*ಲೆಕ್ಕಾಚಾರ ತಲೆಕೆಳಗಾಗುತ್ತದೆ*
ಬಸವರಾಜ ಹೊರಟ್ಟಿ ಅವರ ಲೆಕ್ಕಾಚಾರ ಈ ಸಲ ತಲೆ ಕೆಳಗಾಗುತ್ತದೆ, ಸಮಸ್ಯೆಗಳ ದಾಖಲೆಗಳಿವೆ ಆದ್ದರಿಂದ ಆ ದಾಖಲೆ ಮುರಿಯಲು ಶಿಕ್ಷಕರು ನಿರ್ಣಯಿಸಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು ‌


Spread the love

About gcsteam

    Check Also

    ವಾಮ ಮಾರ್ಗದಿಂದ ಅಧಿಕಾರ ಹಿಡಿಯಲು ಹೊರಟ ಕಾಂಗ್ರೆಸ್ ಗೆ ಮುಖಭಂಗ- ಬಿಜೆಪಿ ವಕ್ತಾರ ರವಿ ನಾಯಕ

    Spread the loveಹುಬ್ಬಳ್ಳಿ :ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಳೆದ 15 ವರ್ಷಗಳಿಂದ ಭಾರತೀಯ ಜನತಾ ಪಾರ್ಟಿ ಅಧಿಕಾರವನ್ನು …

    Leave a Reply