ಬೀದರ್; ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣ ದಲ್ಲಿಂದು ಮಠಾಧೀಶರ ನಡಿಗೆ ಅನುಭವ ಮಂಟಪದ ಕಡೆಗೆ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಐವತ್ತಕ್ಕು ಹೆಚ್ಚಿನ ಸ್ವಾಮಿಗಳು ಭಾಗಿಯಾಗಿ ಮೂಲ ಅನುಭವ ಮಂಟಪ ಸರ್ಕಾರ ವಶಕ್ಕೆ ಪಡೆದು ಅಭಿವೃದ್ಧಿ ಪಡೆಸುವಂತೆ ಮನವಿ ಸರ್ಕಾರಕ್ಕೆ ಸಂದೇಶ ರವಾನಿಸಿದ್ದರು. ಜಿಲ್ಲಾಡಳಿತ ಕೊನೆ ಗಳಿಗೆಯಲ್ಲಿ ಮೂಲ ಅನುಭವ ಮಂಟಪವಾದ ಪೀರ್ ಪಾಶಾ ಬಂಗ್ಲೆಯತ್ತ ನಡುಗೆಗೆ ಅನುಮತಿ ನೀಡದ ಹಿನ್ನಲೆ ಸಭೆ ಥೇರ್ ಮೈದಾನಕ್ಕೆ ಸೀಮಿತ ವಾಗಿತ್ತು ಪೀರ್ ಪಾಶಾ ಬಂಗ್ಲಾ ಇಂದಿನ ಮಠಾಧಿಶರ ನಡೆ ಪೀರ್ ಪಾಶಾ ಬಂಗ್ಲಾ ಕಡೆ ಅನ್ನೋ ಕಾರ್ಯಕ್ರಮ ಕ್ಕೆ ಕೇಂದ್ರಬಿಂದು.ಕಳೆದ ಕೆಲ ದಿನಗಳ ಹಿಂದೆ ಜಿಲ್ಲೆಯ ಎಲ್ಲಾ ಮಠಾಧಿಶರು ನಿರ್ಣಯ ತೆಗೆದುಕೊಂಡು ಮೂಲ ಅನುಭವ ಮಂಟಪದ ತಾಣವಾದ ಪೀರಪಾಶ ಬಂಗ್ಲಾ ಕಡೆ ನಮ್ಮ ನಡೆ ಅನ್ನೋ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದರು. ಬೆಳಿಗ್ಗೆ ಯಿಂದ ಬಸವಕಲ್ಯಾಣ ಹೊರವಲಯದ ಬಸವ ಮಹಾಮನೆ (ಲಿಂ.ಮಾತೆಮಾಹಾದೇವಿ ಯವರ ಆಶ್ರಮದಲ್ಲಿ) ಯಲ್ಲಿ ಎಲ್ಲಾ ಮಠಾಧಿಶರ ಸೇರಿ ನಂತರ ಥೇರ್ ಮೈದಾನದ ಕಡೆ ಪಾದಯಾತ್ರೆ ಮೂಲಕ ಚಿತ್ತ ಹರಿಸಿದ್ದರು. ಸಂದರ್ಭದಲ್ಲಿ ಮಾತನಾಡಿದ ತಡೋಳಾದ ರಾಜೇಶ್ವರ ಶಿವಾಚಾರ್ಯರು ಮೂಲ ಅನುಭವ ಮಂಟಪದ ತಾಣವನ್ನ ಸರ್ಕಾರ ರಕ್ಷಿಸಿ ಅದನ್ನ ವೀರಶೈವ ಲಿಂಗಾಯತರ ಯಾತ್ರೆಯ ತಾಣ ಮಾಡಬೇಕು ಅಂತ ಸರ್ಕಾರವನ್ನ ಒತ್ತಾಯಿಸಿದ್ದರು..
ಸ್ವಾಮಿಗಳ ಜಮಾವಣೆಗೊಂಡ ಬೆನ್ನಲ್ಲೇ ಸ್ಥಳಕ್ಕೆ ಬಂದ ಶಾಸಕ ಸಲಗರ ಮೂಲ ಅನುಭವ. ಮಂಟಪ ಈ ಪೀರ್ ಪಾಶಾ ದರ್ಗಾದ ತಾಣವಾಗಿದೆ.ಇದರ ಸತ್ಯ ಅನ್ವೇಷಣೆ ಮಾಡಲು ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮಠಾಧೀಶರ ಮುಖಾಂತರ ಮನವಿ ಸಲ್ಲಿಸಿದ್ದೆನೆ.ಇನ್ನೋಂದು 15 ದಿನಗಳಲ್ಲಿ ಪುರಾತ್ವ ಇಲಾಖೆ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸಲಿದ್ದಾರೆ ಅಂತ ಹೇಳಿದ್ದರು.ಮುಖ್ಯಮಂತ್ರಿ ಗಳಿಗೆ ಮನವಿ ಕೊಟ್ಟಿದ್ದು ಅದಕ್ಕೆ ಅವರು ಸಕಾರಾತ್ಮಕ ವಾಗಿ ಸ್ಪಂಧಿಸಲಿದ್ದಾರೆ.ಈ ಹಿನ್ನಲೆಯಲ್ಲಿ ಇಂದು ನಡೆಯಬೇಕಿದ್ದ ಮಠಾಧೀಶರ ನಡೆ ಅನುಭವ ಮಂಟಪದ ಕಡೆ ಕಾರ್ಯಕ್ರಮ ಕ್ಕೆ ಅನುಮತಿ ಕೊಟ್ಟಿಲ್ಲ. ಆದ್ರೆ ಈ ಬಗ್ಗೆ ಇಲ್ಲಿನ ಥೇರ್ ಮೈದಾನದಲ್ಲಿ ಸ್ವಾಮಿಜೀಗಳು ಮೂಲ ಅನುಭವ ಮಂಟಪ ಕುರಿತು ಚಿಂತನ ಮಂಥನ ಮಾಡಲಿದ್ದಾರೆ ಅಂದ್ರು.
ನಂತರ ಥೇರ್ ಮೈದಾನದಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಸ್ವಾಮಿಗಳು ಭಾಗಿಯಾಗಿ ಮೂಲ ಅನುಭವ ಮಂಟಪದ ತಾಣವಾದ ಪೀರ್ ಪಾಶಾ ದರ್ಗಾದ ಸ್ಥಳವನ್ನ ಸರ್ಕಾರ ವಶಕ್ಕೆ ಪಡೆದು ಅದನ್ನ ಸ್ಮಾರಕದ ರೂಪದಲ್ಲಿ ಅಭಿವೃದ್ಧಿ ಪಡಿಸುವಂತೆ ಮನವಿ ಪತ್ರವನ್ನ ಸಲ್ಲಿಸಿದ್ದರು.ಒಟ್ಟಾರೆ ಇಂದು ನಡೆದ ಮಠಾಧಿಶರ ನಡೆ ಮೂಲ ಅನುಭವ ಮಂಟಪ ಕಡೆ ಪೀರ್ ಪಾಶಾ ದರ್ಗಾದತ್ತ ಮಠಾಧಿಶರುನಡೆಯದೆ ಇದ್ದರು ಅದರ ಕುರಿತು ಹತ್ತು ಹಲವು ಚರ್ಚೆಗಳು ನಡೆದಿದ್ದು ಬರುವ ದಿನಗಳಲ್ಲಿ ಪೀರ್ ಪಾಶ ಬಂಗ್ಲೆಯನ್ನ ವಶಕ್ಕೆ ಪಡೆಯುವಂತೆ ಸರ್ಕಾರದ ಮೇಲೆ ಮಠಾಧೀಶರು ಒತ್ತಡ ಹಾಕಿದ್ದಂತು ಸತ್ಯ.ಸರ್ಕಾರ ಯಾವ ಕ್ರಮಕ್ಕೆ ಮುಂದಾಗುತ್ತೆ ಕಾದು ನೋಡಬೇಕು.
