ಹುಬ್ಬಳ್ಳಿ; ಭಾರತೀಯ ಸ್ಟೇಟ್ ಬ್ಯಾಂಕ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರ ಮೇಲಿನ ದೌರ್ಜನ್ಯ ತಡೆ, ನೌಕರರ ಸರ್ವಾಂಗೀಣ ಅಭಿವೃದ್ಧಿ ಜೊತೆಗೆ ಎಲ್ಲ ವರ್ಗದ ನೌಕರರ ಕ್ಷೇಮ ಬಯಸುತ್ತದೆ ಎಂದು
ಭಾರತೀಯ ಸ್ಟೇಟ್ ಬ್ಯಾಂಕ್ ಬೆಂಗಳೂರು ಕಾರ್ಯಾ ವ್ಯಾಪ್ತಿಯ ಪ್ರಧಾನ ವ್ಯವಸ್ಥಾಪಕರಾದ ಶಾಂತಾನು ಪೆಂಡಾಶೆ ಹೇಳಿದರು.
ನಗರದ ಗೋಕುಲ ರಸ್ತೆಯ ಚಹ್ವಾನ ಗ್ರೀನ್ ಗಾರ್ಡನ್ ದಲ್ಲಿ
ಭಾರತೀಯ ಸ್ಟೇಟ್ ಬ್ಯಾಂಕ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಎರಡನೇ ವಲಯ ಸಮ್ಮೇಳನವನ್ನ ವಿಡಿಯೋ ಕಾನ್ಪೆರನ್ಸ್ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದರು.
ಭಾರತೀಯ ಸ್ಟೇಟ್ ಬ್ಯಾಂಕ್ ನ ಸಾಧನೆ, ಕಾರ್ಯವ್ಯಾಪ್ತಿ ಕುರಿತು ಸಮಗ್ರವಾಗಿ ಮಾತನಾಡಿದರು.
ಭಾರತೀಯ ಸ್ಟೇಟ್ ಬ್ಯಾಂಕ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರ
ಕ್ಷೇಮಾಭಿವೃದ್ಧಿ ಸಂಘ ಬದ್ಧವಾಗಬೇಕು ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಾ. ಸಿ. ಕೃಷ್ಣಮೂರ್ತಿ ಹೇಳಿದರು. ಕಾರ್ಯಕ್ರಮದ
ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.
ಭಾರತೀಯ ಸ್ಟೇಟ್ ಬ್ಯಾಂಕ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನೌಕರರ ಸಂಘದ ಕಾರ್ಯಾಧ್ಯಕ್ಷ ಎಂ.ನಾಗರಾಜ್, ಅತಿಥಿಗಳಾಗಿ ಹುಬ್ಬಳ್ಳಿ ಎಸ್ ಬಿಐ ನ ಆಡಳಿತ ಕಚೇರಿಯ 7,ರ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ (ಆಡಳಿತ ವಿಭಾಗ)ದ ರವಿ ರೆಡ್ಡಿ,
ವಿಶೇಷ ಆಮಂತ್ರಿತ್ರರಾಗಿ ಭಾರತೀಯ ಸ್ಟೇಟ್ ಬ್ಯಾಂಕ್ ನ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಡಿ, ಅತಿಥಿ ಉಪನ್ಯಾಸಕರಾಗಿ ಆಹಾರ ಮತ್ತು ನಾಗರಿಕ ಇಲಾಖೆಯ ನಿವೃತ್ತ ಙಂಟಿ ನಿರ್ದೇಶಕರಾದ ಸದಾಶಿವ ಮರ್ಜಿ, ಭಾರತೀಯ ಸ್ಟೇಟ್ ಬ್ಯಾಂಕ್ ನ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸೇವಾ ವೃತ್ತದ ಅಧ್ಯಕ್ಷ ವಿಜಯರಾಜ್ ಆಗಮಿಸಿದ್ದರು
ಸಂಘದ ಎರಡನೇ ಸಮಾವೇಶ ಇದಾಗಿದ್ದು ಈ ಸಮ್ಮೇಳನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಮೇಲೆ ದೌರ್ಜನ್ಯ ಚರ್ಚೆ, ನೌಕರರ ವಿವಿಧ ಬೇಡಿಕೆ ಈಡೇರಿಕೆ ಕುರಿತು ಮತ್ತು ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ಸೇರಿದಂತೆ ವಿವಿಧ ಕಾರ್ಯ ಯೋಜನೆ ಕುರಿತು ಚರ್ಚೆ ಮಾಡಲಾಗುವುದು ಎಂದರು.
ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪರಿಶಿಷ್ಟ ಮತ್ತು ಜಾತಿ ಪರಿಶಿಷ್ಟ ಪಂಗಡಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಉಪ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಅಷ್ಟೇಕರ್,
ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪರಿಶಿಷ್ಟ ಮತ್ತು ಜಾತಿ ಪರಿಶಿಷ್ಟ ಪಂಗಡಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಅಜಯ್ ತಳವಾರ, ಹರೀಶ್, ಶಂಕರ ವಕ್ಕುಂದ, ಪರಶುರಾಮ ವಾಲ್ಮೀಕಿ, ಭೀಮಪ್ಪ ರಾಠೋಡ, ಗೋವಿಂದರಾಜನ್, ಶ್ರೀಮತಿ ನಿರ್ಮಾಲಾದೇವಿ, ಬಿ. ಕೊಂಡಯ್ಯಾ,
ಮಲ್ಲಪ್ಪ ತಳವಾರ, ರವಿಕುಮಾರ್ ಮಿಶಿ, ವಿಶಾಲ ನಾಯಕ, ಗಂಗಾಧರ ಕಲಕನಿ, ಮಧುರಾ ಶಿರ್ಶಿಕರ್ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.
Check Also
ಎಪಿಎಂಸಿಗೆ ಶಾಸಕ ಟೆಂಗಿನಕಾಯಿ ಭೇಟಿ, ವರ್ತಕರ ಸಮಸ್ಯೆ ಚರ್ಚೆ
Spread the loveಹುಬ್ಬಳ್ಳಿ: ಇಲ್ಲಿಯ ಅಮರಗೋಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಬುಧವಾರ ಭೇಟಿ ನೀಡಿದ್ದ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ …