Breaking News

ಕಲುಷಿತ ನೀರು ಕುಡಿದು ಜನಕರಾಜ ಸಾವು, ಸಾವಿನ ಸಂಖ್ಯೆ 5 ಕ್ಕೆ ಏರಿಕೆ

Spread the love

ರಾಯಚೂರು: ಕಲುಷಿತ ನೀರು ಸೇವಿಸಿ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ನಗರದ ಯರಗೇರಾ ಲೇಔಟ್ ನಿವಾಸಿ ಹಾಗೂ ಸರ್ಕಾರಿ ಇಂಜಿನಿಯರ್ ಕಾಲೇಜು ಉಪನ್ಯಾಸಕ ಜನಕರಾಜ (50) ಮೃತರು. ಈ ಮೂಲಕ ಸಾವನ್ನಪ್ಪಿದವರ ಸಂಖ್ಯೆ 5ಕ್ಕೇರಿದೆ.
ಜನಕರಾಜರಿಗೆ ನಿರಂತರ ವಾಂತಿ ಭೇದಿ ಆಗುತ್ತಿತ್ತು. ಇದನ್ನು ಗಮನಿಸಿ ಪಕ್ಕದ ಮನೆಯವರು ಆಂಬ್ಯುಲೆನ್ಸ್ ಮೂಲಕ ಭಾನುವಾರ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ರೋಗಿ ತಲೆಯಲ್ಲಿ ಬ್ಲಡ್ ಕ್ಲಾಟ್ ಆಗಿ ಮೃತಪಟ್ಟಿದ್ದಾರೆ ಎಂದು ರಿಮ್ಸ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.


Spread the love

About Karnataka Junction

    Check Also

    ‘ನೇಹಾ ಕೊಲೆ: ರಾಜ್ಯದಾದ್ಯಂತ ಎಬಿವಿಪಿಯಿಂದ ಪ್ರತಿಭಟನೆ ನಾಳೆ’

    Spread the loveಹುಬ್ಬಳ್ಳಿ: ‘ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಖಂಡಿಸಿ ನಾಳೆ( ಎ. 20) ರಾಜ್ಯದಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ …

    Leave a Reply

    error: Content is protected !!