Breaking News

ಜೂನ್ 12 ರಿಂದ 18 ರವರಗೆ ಗೋವಾದಲ್ಲಿ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ- ಮೋಹನಗೌಡ

Spread the love

ಹುಬ್ಬಳ್ಳಿ: ಹಿಂದೂ ಜನಜಾಗೃತಿ ಸಮಿತಿವತಿಯಿಂದ ಜೂನ್ 12 ರಿಂದ 18 ರವರಗೆ ಗೋವಾದಲ್ಲಿ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ ಗೌಡ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅದಿವೇಶ ಕಳೆದ‌ 10 ವರ್ಷದಿಂದ ಮಾಡಲಾಗುತ್ತಿದ್ದು, ಈ ವರ್ಷದ ಅದಿವೇಶನದಲ್ಲಿ ದೇಶದ 26 ರಾಜ್ಯಗಳ ಮತ್ತು ಅಮೇರಿಕ, ಇಂಗ್ಲೆಡ್, ಹಾಂಗ್ ಕಾಂಗ್, ಸಿಂಗಾಪುರ ಮತ್ತು ನೇಪಾಲ ಸೇರಿದಂತೆ 350 ಕ್ಕೂ ಹಿಂದೂ ಸಂಘಟನೆಯ 1000 ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ ಎಂದರು.
ಈ ಅದಿವೇಶನದಲ್ಲಿ ಕಾಶಿಯ ಜ್ಞಾನವಾಪಿ ಮಸೀದಿ, ಮಥುರಾ ಮುಕ್ತಿ ಆಂದೋಲನ, ಪ್ಲೆಸಿಸ್ ಆಫ್ ವರ್ಶಿಪ್ ಆ್ಯಂಕ್ಟ್, ಕಾಶ್ಮಿರ ಹಿಂದೂಗಳ ನರಮೇಧ, ಮಸೀದಿಯಲ್ಲಿ ಧ್ವನಿ ವರ್ಧಕ ಬಳಕೆಯಿಂದ ಆಗುವ ಶಬ್ಧ ಮಾಲಿನ್ಯ, ಹಿಜಾಬ್ ಆಂದೋಲನ, ಹಲಾಲಾ ಸರ್ಟಿಫಿಕೇಟ್ ಆರ್ಥಿಕ್, ಹಿಂದೂ ಸಂರಕ್ಷಣೆ, ಮಂದಿರ ಸಂಸ್ಕೃತಿ ಇತಿಹಾಸ ಸೇರಿದಂತೆ ಅನೇಕ ವಿಷಯಗಳ ಕುರಿತು ಚರ್ಚೆ ನಡೆಯುತ್ತದೆ ಎಂದರು.
ಇನ್ನೂ‌ ಅದಿವೇಶನದಲ್ಲಿ ಸಿಬಿಐನ ಮಾಜಿ ನಿರ್ದೇಶಕ ನಾಗೇಶ್ವರ ರಾವ್ , ಹರಿಶಂಕರ ಜೈನ್, ನ್ಯಾಯಾವಾದಿ ವಿಷ್ಣು ಶಂಕರ ಜೈನ್, ಭಾಗ್ಯನಗರದ ಶಾಸಕ ಟಿ. ರಾಜಸಿಂಹ, ಯುವ ಬ್ರಿಗೇಡ್ ನ ಚಕ್ರವರ್ತಿ ಸುಲಿಬೆಲಿ, ರಾಹುಲ್ ಕೌಲ್, ನಿಲ ಮಾಧವ ದಾಸ ಸೇರಿದಂತೆ ಅನೇಕ ಚಿಂತಕರು ಹಿಂದೂ ಧರ್ಮದ ಜಾಗೃತಿಗೆ ಸಂಬಂಧಿಸಿದ ವಿಷಯಗಳ ಕುರಿತು ಸಂವಾದ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸನಾತನ ಸಂಸ್ಥೆಯ ಸೌ. ಮಿದಾಲಾ, ಸುಧಾ, ಶ್ರೀರಾಮ ಸೇನೆಯ ರಾಜ್ಯ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ಇದ್ದರು.


Spread the love

About Karnataka Junction

    Check Also

    ತಾವು ಬೇಸಿಗೆಯ ರಜೆಗಾಗಿ ವಿಶೇಷ ರೈಲುಗಳ ಸಂಚಾರ ಮಾಹಿತಿ ಇಲ್ಲಿದೆ

    Spread the loveಹುಬ್ಬಳ್ಳಿ: ಬೇಸಿಗೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ಮುಜಾಫರ್ಪುರ ಮತ್ತು ಯಶವಂತಪುರ ನಿಲ್ದಾಣಗಳ ನಡುವೆ ಎರಡು ಹೆಚ್ಚುವರಿ …

    Leave a Reply

    error: Content is protected !!