Breaking News

ಮಾಜಿ ಸಿಎಂ ಜಗದೀಶ ಶೆಟ್ಟರ್ ಮನೆ ಮುಂದೆ ಶ್ರೀರಾಮ ಸೇನೆ ಪ್ರತಿಭಟನೆ

Spread the love

ಹುಬ್ಬಳ್ಳಿ : ಸುಪ್ರೀಂಕೋರ್ಟ್ ನಿಯಮ ಪಾಲಿಸದೆ ಇರುವವರ ಮೇಲೆ ಗುಂಡಿಟ್ಟು ಹೊಡಿಯೋ ಹೇಳಿಕೆಗೆ ಈಗಲೂ ಬದ್ಧ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪುನರುಚ್ಚಾರ ಮಾಡಿದ್ದಾರೆ.
ಕೇಶ್ವಾಪೂರ ಮಧುರಾ ಕಾಲೋನಿಯಲ್ಲಿರುವ ಮಾಜಿ‌ ಸಿಎಂ ಜಗದೀಶ್ ಶೆಟ್ಟರ್ ಮನೆ ಎದುರು ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಧ್ವನಿವರ್ಧಕ ವಿಚಾರದಲ್ಲಿ ಸುಪ್ರೀಂಕೋರ್ಟ್ ನಿಯಮ ಪಾಲನೆ ಮಾಡೋಕೆ ಆಗಿಲ್ಲಾಂದ್ರೆ ರಾಜೀನಾಮೆ ಕೊಡಿ. ನನ್ನ ಕೈಗೆ ಅಧಿಕಾರ ಕೊಟ್ಟು ನೋಡಿ ಯಾರು ಕಾನೂನು ಪಾಲನೆ ಮಾಡಲು ಆಗುದಿಲ್ಲವೋ ಅವರಿಗೆ ಗುಂಡ್ಲುಪೇಟೆ ಗತಿಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ನಮ್ಮಂತಹ ಸಂಘಟನೆಗಳ ಶ್ರಮದಿಂದಲೇ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಜನಪ್ರತಿನಿಧಿಗಳಿಗೆ ಎಚ್ಚರಿಕೆ ಕೊಡಲೆಂದೇ ಇವತ್ತು ಹೋರಾಟ ಮಾಡ್ತಿದ್ದೇವೆ. ಧ್ವನಿವರ್ಧಕ ವಿಚಾರದಲ್ಲಿ ಸುಪ್ರಿಂಕೋರ್ಟ್ ಆದೇಶ ನೀಡಿ 15 ವರ್ಷಗಳಾಗಿದೆ. ಆದರೆ ಸುಪ್ರೀಂಕೋರ್ಟ್ ಆದೇಶ ಇನ್ನೂ ಜಾರಿಯಾಗ್ತಿಲ್ಲ. ನೀವು ಇದೇ ರೀತಿ ನಿರ್ಲಕ್ಷ್ಯ ಮಾಡಿದರೆ ನಿಮ್ಮ ಮನೆಗಳ ಮುಂದೆಯೇ ಭಜನೆ ಆರಂಭಿಸುತ್ತೇವೆ ಎಂದರು.

ಬಿಜೆಪಿ ಶಾಸಕರು ಮತ್ತು ಅಧ್ಯಕ್ಷರ ಮನೆ ಮುಂದೆಯೇ ಮೈಕ್ ಇಟ್ಟುಕೊಂಡು ಭಜನೆ ನಡೆಸುತ್ತೇವೆ. ಬರೀ ಹಿಂದೂಗಳ ವೋಟ್ ತೆಗೆದುಕೊಳ್ಳುವುದು ಮಾತ್ರ ಅಲ್ಲ ಹಿಂದೂಗಳ ಸಮಸ್ಯೆಯನ್ನು ಅರಿತು ಕೊಳ್ಳಬೇಕು. ಯೋಗಿ ಆದಿತ್ಯನಾಥನ ರೀತಿಯಲ್ಲಿ ಬಸವರಾಜ ಬೊಮ್ಮಾಯಿ ಅವರು ಗಟ್ಟಿಯಾಗಿ ನಿಲ್ಲಬೇಕು. ಅದರ ಬದಲಿಗೆ ಇದೇ ರೀತಿಯ ನಾಟಕ ಮಾಡಿದ್ರೆ ಸುಮ್ಮನೆ ಇರುವುದಿಲ್ಲ. ಕಣ್ಣೀರು ಒರೆಸುವ ತಂತ್ರಗಾರಿಕೆ ಬಿಡಬೇಕು ಎಂದು ಕಿಡಿಕಾರಿದರು.

ನಿಮ್ಮ ಕೈಲಿ ಆಗದೇ ಇದ್ದಲ್ಲಿ ರಾಜೀನಾಮೆ ಕೊಡಿ
ನನಗೆ ಅಧಿಕಾರ ಕೊಡಿ 24 ಗಂಟೆಯಲ್ಲಿ ಅದನ್ನು ಮಾಡಿ ತೋರಿಸುತ್ತೇನೆ. ಪಾಲಿಸದೆ ಇದ್ದವರ ಮೇಲೆ ಗುಂಡು ಹಾರಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ನೇತೃತ್ವದ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಆಜ್ಞೆಯನ್ನು ದಿಕ್ಕರಿಸುತ್ತಿದ್ದಾರೆ ಎಂದು ಆರೋಪಿಸಿ ಮಾಜಿ ಸಿಎಂ ಜಗದೀಶ ಶೆಟ್ಟರ ಮನೆ ಮುಂದೆ ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರತಿಭಟನೆ ನಡೆಸಿದರು.

ಘೋಷಣೆ ಕೂಗುವ ಮೂಲಕ ಕಾರ್ಯಕರ್ತರ ಜೊತೆಗೆ ಆಗಮಿಸಿದ ಶ್ರೀರಾಮಸೇನೆ ಸಂಸ್ಥಾಪನಾಧ್ಯಕ್ಷ ಪ್ರಮೋದ ಮುತಾಲಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕರ್ತರೊಂದಿಗೆ ಸೇರಿ ಹುಬ್ಬಳ್ಳಿಯ ಮಧುರಾ ಕಾಲೊನಿಯಲ್ಲಿರುವ ಮಾಜಿ ಸಿಎಂ ಜಗದೀಶ ಶೆಟ್ಟರ ನಿವಾಸಕ್ಕೆ ಆಗಮಿಸಿದ ಪ್ರತಿಭಟನಾಕಾರರು ಶೆಟ್ಟರ ನಿವಾಸದೆದುರು ಕುಳಿತು ಪ್ರತಿಭಟನೆ ನಡೆಸಿದರು. ಸುಪ್ರೀಂ ಕೋರ್ಟ್ ಆಜ್ಞೇಯನ್ನ ಧಿಕ್ಕರಿಸುತ್ತಿರುವ ಸರ್ಕಾರ ಎಂದು ಆರೋಪಿಸಿದ ಪ್ರತಿಭಟನಾಕಾರರು, ಅನಧೀಕೃತ ಲೌಡ ಸ್ಪೀಕರ್ ತೆರವಿಗೆ 15 ದಿನದ ಗಡುವು ನೀಡಿದ್ದರು. ಅನಧಿಕೃತ ಮೈಕ್ ತೆರವುಗಿಳಿಸದ ಹಿನ್ನೆಲೆ ಶೆಟ್ಟರ ಮನೆ ಮುಂದೆ ಪ್ರತಿಭಟನೆ‌ ನಡೆಸಿದರು.


Spread the love

About Karnataka Junction

[ajax_load_more]

Check Also

ಮಳೆ ಹಾನಿ ಪರಿಹಾರ ನೀಡಲು ಸರ್ಕಾರ ಸದಾ ಸಿದ್ದ ಏನ್ ಹೆಚ್ ಕೋನರಡ್ಡಿ

Spread the love ಹುಬ್ಬಳ್ಳಿ; ವಾಯುಭಾರ ಕುಸಿತದಿಂದ ಸುರಿದ ಭಾರಿ ಮಳೆಗೆ ರೈತರು ಬೆಳೆದ ಬೆಳೆ, ರಸ್ತೆ ಹಾಗೂ ಸೇತುವೆಗಳು …

Leave a Reply

error: Content is protected !!