ಧಾರವಾಡ; ಈಗಲ್ಲ ನಾವು ಯಾವತ್ತಿಗೂ ಕೋಮುವಾದಿಗಳನ್ನ ವಿರೋಧಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು,
ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ
ಕುಮಾರಸ್ವಾಮಿ ಅವರು ಕೋಮುವಾದಿ ಗಳನ್ನ ಸೋಲಿಸೋಕೆ ಕೈ-ತೆನೆ ಒಂದಾಗಬೇಕು ಅನ್ನೋ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು
ಜೆಡಿಎಸ್ ಗಿಂತ ಮೊದಲೇ ನಾವು ತೀರ್ಮಾನ ಮಾಡಿ ಎರಡನೇ ಅಭ್ಯರ್ಥಿ ಹಾಕಿದ್ದೇವೆ ಇದರಲ್ಲಿ ಏನು ಇದೆ ಅವರು ಮೊದಲು ತಿಳಿದುಕೊಳ್ಳಲಿ,
ನಮ್ಮ ಅಭ್ಯರ್ಥಿ ಹಾಕಿದ ಮೇಲೆ ಒಂದು ತಿಂಗಳು ಬಿಟ್ಟು ಹಾಕಿದ್ದಾರೆ ಜಾತ್ಯಾತೀತ ಜನತಾದಳದವರು
ಅವರು ಕೋಮುವಾದಿ ಅಭ್ಯರ್ಥಿ ಸೋಲಿಸಬೇಕು ಅಂತಿದ್ದರೆ ಅವರು ಅಭ್ಯರ್ಥಿ ಹಾಕಬೇಕಿರಲಿಲ್ಲ ಎಂದು ಹೇಳಿದ ಸಿದ್ದರಾಮಯ್ಯಾನವರು
ನಾವು ಅಲ್ಪಸಂಖ್ಯಾತ ಅಭ್ಯರ್ಥಿಯನ್ನ ಹಾಕಿದ್ದೇವೆ,
ಮನ್ಸೂರ್ ಅಲಿಖಾನ್ ನ್ನ ಒಮ್ಮತದ ನಮ್ಮ ಅಭ್ಯರ್ಥಿ ಯಾಗಿದ್ದು
ಅವರು ಗೆಲ್ಲಿಸಬೇಕು ಅಂತಿದ್ದರೆ ಅವರ ಅಭ್ಯರ್ಥಿ ಬಿಟ್ಟು ನಮಗೆ ವೋಟ್ ಹಾಕಲಿ ಎಂದರು .
*ದೇವೇಗೌಡರು ರಾಜ್ಯಸಭೆಗೆ ನಿಂತಾಗ ನಾವು ಅಭ್ಯರ್ಥಿ ಹಾಕಿದ್ದೇವಾ..?*
ಮಾಜಿ ಪ್ರಧಾನಿ ಎಚ್ ಡಿ
ದೇವೇಗೌಡರು ರಾಜ್ಯಸಭೆಗೆ ನಿಂತಾಗ ನಾವು ಅಭ್ಯರ್ಥಿ ಹಾಕಿದ್ದೇವಾ ಎಂದು ಪ್ರಶ್ನೆ ಮಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಾ ನವರು
ಅವರಿಗೆ ಕೇಳಿ ಪ್ರಶ್ನೆನಾ..!
ನಾವು ಹಾಕಿರಲಿಲ್ಲ ಅಂತಾ
ಕುಮಾರಸ್ವಾಮಿ ಬಳಿ 37 ಜನ ಇದ್ರು ಕೂಡ ಬಿಜೆಪಿ ಅಧಿಕಾರಕ್ಕೆ ಬರಬಾರದು ಅಂತ ಅವರನ್ನೇ ಮುಖ್ಯಮಂತ್ರಿ ಮಾಡಿದ್ದೆವು ಎಂದರು.
ದೇವೇಗೌಡರು ಪ್ರಧಾನ ಮಂತ್ರಿ ಆಗೋಕೆ ನಾವು ಬೆಂಬಲ ನೀಡಿದ್ದೇವೆ
ನಮಗೆ ಈಗ ಅವರು ಬೆಂಬಲ ಕೊಡಲಿ ಎಂದು ಖಡಕ್ ಆಗಿ ಕಡ್ಡಿ ಮುರಿದಂತೆ ಹೇಳಿದರು.
ಕೋಮುವಾದಿ ಸೋಲಿಸೋಕೆ ನಮಗೆ ಬೆಂಬಲ ಕೊಡಲಿ, ನಾವೇ ಸೋಲಿಸುತ್ತೇವೆ ನಾವು ಅನೇಕ ಸಾರಿ ಸಹಾಯ ಮಾಡಿದ್ದೇವೆ ಅವರಿಗೆ ಎಂದರು.
*ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಭೇಟಿ ವಿಚಾರ*
ನಮ್ಮದು ಹಲೋ ಹಲೋ ಅಷ್ಟೇ ಏನು ವಿಶೇಷ ಇಲ್ಲಾ
ಭೇಟಿಯಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯಾ ನವರು ಹೇಳಿದರು.
*ಗುರಿಕಾರ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ*
ನಾನು ಧಾರವಾಡಕ್ಕೆ ನಮ್ಮ ಅಭ್ಯರ್ಥಿಗುರಿಕಾರ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯಾ ನವರು ಹೇಳಿದರು
ಎಲ್ಲರೂ ಈ ಸಾರಿ ಬದಲಾವಣೆ ಬಯಸಿದ್ದಾರೆ 30 ವರ್ಷದಿಂದ ಶಿಕ್ಷಕರ ಪರವಾಗಿ ಹೋರಾಡಿದ ವ್ಯಕ್ತಿ ಅವರು ಎಂದರು.
ಮಾಜಿ ಶಾಸಕ ಎನ್ ಎಚ್ ಕೋನರೆಡ್ಡಿ ಮುಂತಾದವರಿದ್ದರು.
