Breaking News

ಬಾಯ್‌ಕಾಟ್ ಖತಾರ್ ಏರ್‌ವೇಸ್ ಆಂದೋಲನಕ್ಕೆ ಕರೆ

Spread the love

ನವದೆಹಲಿ : ಕಾನ್ಪುರದಲ್ಲಿ ನಡೆದ ಪ್ರವಾದಿ ಮೊಹಮ್ಮದ್ ನಿಂದನೆ ಆರೋಪ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅರಬ್ ರಾಷ್ಟ್ರಗಳು ಭಾರತವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿವೆ. ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳನ್ನು ಕರೆಸಿ ನೋಟಿಸ್ ನೀಡುತ್ತಿದೆ. ಭಾರತದ ಉತ್ಪನ್ನಗಳನ್ನು ಅರಬ್ ರಾಷ್ಟ್ರಗಳ ಸ್ಟೋರ್‌ಗಳಲ್ಲಿ ನಿರ್ಬಂಧಿಸಲಾಗುತ್ತಿದೆ. ಈ ಬೆಳವಣಿಗೆ ಭಾರತ ಸರ್ಕಾರ ಖಡಕ್ ಉತ್ತರ ನೀಡಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಸೇಡಿ ಸೇಡು ವ್ಯಕ್ತವಾಗುತ್ತಿದೆ. ಅರಬ್ ರಾಷ್ಟ್ರಗಳ ವಿಮಾನ ಸೇವೆ ಭಾರತದಲ್ಲಿ ನಿರ್ಬಂಧಿಸಲು ಆಂದೋಲನ ನಡೆಯುತ್ತಿದೆ. ಸದ್ಯ ಬಾಯ್‌ಕಾಟ್ ಖತಾರ್ ಏರ್‌ವೇಸ್ ಬಹಿಷ್ಕರಿಸಲು ಕರೆ ನೀಡಲಾಗಿದೆ.

ಬಾಯ್‌ಕಾಟ್ ಖತಾರ್ ಏರ್‌ವೇಸ್ ಆಂದೋಲನಕ್ಕೆ ಒಂದು ಕಾರಣವನ್ನೂ ನೀಡಲಾಗಿದೆ. ಕಾನ್ಪುರದಲ್ಲಿನ ಹಿಂಸಾಚಾರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಾದಕ್ಕೆ ಕಾರಣಾಗಿರುವುದು ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ನೀಡಿರುವ ಹೇಳಿಕೆ. ಈ ಹೇಳಿಕೆಯನ್ನೇ ಆಧಾರವಾಗಿಟ್ಟುಕೊಂಡು ಅರಬ್ ರಾಷ್ಟ್ರಗಳು ಇದು ಭಾರತ ಸರ್ಕಾರದ ನಿಲುವು ಎಂಬ ರೀತಿ ವರ್ತಿಸುತ್ತಿದೆ. ಹೀಗಾದರೆ ಚಿತ್ರಕಲಾಕಾರ ಎಂಎಫ್ ಹುಸೇನ್‌ಗೆ ಭಾರತ ಪೌರತ್ವ ನೀಡಿ ಸಲಹಿದೆ. ಆದರೆ ಹುಸೇನ್ ಹಿಂದೂ ದೇವರ ನಗ್ನ ಚಿತ್ರಗಳನ್ನು ಚಿತ್ರಿಸಿದ್ದರು. ಇದೀಗ ಅಂತವರು ನೂಪುರ್ ಹೇಳಿಕೆಯಿಂದ ಧರ್ಮನಿಂದನೆ ಆಗಿದೆ ಎಂಹ ಆರೋಪ ಮಾಡುತ್ತಿರುವುದು ಎಷ್ಟು ಸರಿ ಎಂದು ಭಾರತೀಯರು ಪ್ರಶ್ನಿಸಿದ್ದಾರೆ.

ನೂಪುರ್ ಶರ್ಮಾ ಹೇಳಿಕೆ ಕುರಿತು ತನಿಖೆ ನಡೆಯುತ್ತಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷದ ಸದಸ್ಯೆ ಹಾಗೂ ವಕ್ತಾರೆ ಈ ಹೇಳಿಕೆ ನೀಡಿದ್ದಾರೆ. ನೂಪುರ್ ಶರ್ಮಾ ಪಕ್ಷದ ವಕ್ತಾರೆ ಹೊರತು, ಸರ್ಕಾರದ ಅಧಿಕೃತ ವಕ್ತಾರೆ ಅಥವಾ ಯಾವುದೇ ಸ್ಥಾನ ಹೊಂದಿಲ್ಲ. ಇಷ್ಟೇ ಅಲ್ಲ ನೂಪುರ್ ಶರ್ಮಾ ಹೇಳಿಕೆಯನ್ನು ಭಾರತ ಸರ್ಕಾರ ಬೆಂಬಲಿಸಿಲ್ಲ. ಇದು ಭಾರತ ಸರ್ಕಾರದ ನಿಲುವಲ್ಲ. ನೂಪುರ್ ಶರ್ಮಾ ವಿರುದ್ಧ ಪಕ್ಷ ಕ್ರಮ ಕೈಗೊಂಡಿದೆ. ನೂಪುರ್ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದಾರೆ. ಇಷ್ಟಾದರೂ ತನಿಖೆ ನಡೆಯಲಿದೆ. ಹೀಗಿರುವಾಗಿ ಮಧ್ಯ ಪ್ರಾಶ್ಚ ದೇಶಗಳು ಇದು ಭಾರತ ಸರ್ಕಾರದ ನಿಲುವು ಎಂದು ಅಧಿಕಾರಿಗಳಿಗೆ ನೋಟಿಸ್ ನೀಡುತ್ತಿರುವುದು ಎಷ್ಟು ಸರಿ. ಇದೇ ಪಾಶ್ಚಿಮಾತ್ಯ, ಅರಬ್ ರಾಷ್ಟ್ರಗಳ ಹಲವರು ಹಿಂದೂ ದೇವತೆ, ಹಿಂದೂ ಆರಾಧನೆ, ಮೂರ್ತಿ ಪೂಜೆಯನ್ನು ಅದೆಷ್ಟು ಭಾರಿ ಹೀಯಾಳಿಸಿದ್ದಾರೆ ಅನ್ನೋ ಪಟ್ಟಿ ಬೇಕೆ? ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ.

ಖತಾರ್ ವಿದೇಶಾಂಗ ಸಚಿವರು ಭಾರತೀಯ ರಾಯಭಾರ ಅಧಿಕಾರಿ ದೀಪಕ್ ಮಿತ್ತಲ್‌ಗೆ ನೋಟಿಸ್ ನೀಡಿದ್ದರು. ಇದಕ್ಕೆ ದೀಪಕ್ ಮಿತ್ತಲ್ ತೀವ್ರವಾಗಿ ಖಂಡಿಸಿದ್ದರು. ಇಷ್ಟೇ ಅಲ್ಲ ಭಾರತ ವಿದೇಶಾಂಗ ಇಲಾಖೆ ಕೂಡ ಮಧ್ಯ ಪ್ರಾಶ್ಚ ರಾಷ್ಟ್ರಗಳ ಈ ನಡೆಯನ್ನು ಖಂಡಿಸಿದೆ. ಇದರ ಪರಿಣಾಮ ಸಾಮಾಜಿಕ ಜಾಲಾಣದಲ್ಲಿ ಭಾರತೀಯರು ಬಾಯ್ಕಾಟ್ ಖತಾರ್ ಏರ್‌ವೇಸ್ ಆಂದೋಲನ ಆರಂಭಗೊಂಡಿದೆ.

ಸೌದಿ ಅರೇಬಿಯಾ, ಕುವೈಟ್, ಇರಾನ್ ಸೇರಿದಂತೆ ಕೆಲ ರಾಷ್ಟ್ರಗಳು ಭಾರತ ವಿರುದ್ಧ ಕೆಂಡ ಕಾರಿದೆ. ಹೀಗಾಗಿ ಈ ದೇಶಗಳ ಕಂಪನಿಗಳನ್ನು ಭಾರತದಿಂದ ನಿಷೇಧಿಸಲು ಆಗ್ರಹಿಸಲಾಗಿದೆ. ಹೋರಾಟ ತೀವ್ರಗೊಳ್ಳುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅರಬ್ ರಾಷ್ಟ್ರಗಳ ವಿರುದ್ಧ ಆಂದೋಲನ ನಡೆಯುತ್ತಿದೆ.


Spread the love

About gcsteam

    Check Also

    ಉಣಕಲ್ ಕ್ರಾಸ್ ರಾಮಲಿಂಗೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವ

    Spread the loveಹುಬ್ಬಳ್ಳಿ- ರಾಮಲಿಂಗೇಶ್ವರ ದೇವಸ್ಥಾನ ಬಿ.ಆರ್.ಟಿ.ಎಸ್. ಯೋಜನೆಯ ಅನ್ವಯ ಸ್ಥಳಾಂತರ ಆಗುವ ವಿಷಯ ಬೇಸರದ ಸಂಗತಿ ಆದರೂ ಸರಕಾರ …

    Leave a Reply