ಸ್ಲಂ ಜನಾಂದೋಲನ ಮೂಲಕ ಕ್ರಾಂತಿಕಾರಿಕ ಸೇವೆ
ಹುಬ್ಬಳ್ಳಿ: ತಮಗೆ ಎಷ್ಟೇ ಕಷ್ಟ ಬಂದರು ಪಕ್ಷ ,ಜಾತಿ, ಮತ,ಪಂಥ ಎನ್ನದೇ ರಾಜಕಾರಣ ಬದಿಗಿಟ್ಟು ಮಾನವೀಯತೆ ನೆಲೆಯ ಮೇಲೆ ಕಷ್ಟ ಕಾಲದಲ್ಲಿರುವ ಬಡವರು-ನಿರ್ಗತಿಕರಿಗೆ ಸಹಾಯ ಹಸ್ತ ಚಾಚುತ್ತಿರುವ ಧಾರವಾಡ ಜಿಲ್ಲಾ ಸ್ಲಂ ಜನಾಂದೋಲನ ಸಮಿತಿ ಸಂಚಾಲಕರಾದ ಶೋಭಾ ಕಮತರ ಸೇವೆ ಮರೆಯಲಾಗದು. ಯಾವುದೇ ಪ್ರಚಾರ ಬಯಸದ ಶೋಭಾ ಕಮತರ ಅವರು ಹಳೆ ಹುಬ್ಬಳ್ಳಿ ನೇಕಾರ ನಗರ ಆನಂದನಗರ ಚಂದನ ಕಾಲೋನಿ,ಸೆಟ್ಲಮೆಂಟ್ ಬಾಟರ್ ಓಣಿ, ಮಾದರ ಓಣಿ ಹಾಗೂ ಹೆಗ್ಗೇರಿ ದೊಡ್ಡ ಓಣಿ
ಸುತ್ತಮುತ್ತ ಪ್ರದೇಶಗಳಲ್ಲಿ ಹಗಲಿರುಳು ಎನ್ನದೇ ಬಡವರಿಗೆ,ನಿರ್ಗತಿಕರಿಗೆ, ಕೂಲಿಕಾರ್ಮಿಕರಿಗೆ ಹಾಗೂ ಮಂಗಲಮುಖಿಯರಿಗೆ ಆಹಾರ ಕಿಟ್ ವಿತರಣೆ ಜೊತೆಗೆ ಕೋವೀಡ್ ಕುರಿತು ಜಾಗೃತಿ ಮೂಡಿಸುವ ಮಹತ್ತರ ಕಾಯಕದಲ್ಲಿ ತೊಡಗಿದ್ದಾರೆ.
ಲಾಕ್‌ಡೌನ್‌ನಂತಹ ಸಂಕಷ್ಟದ ಸಮಯದಲ್ಲಿಯೂ ಪ್ರಾಮಾಣಿಕವಾಗಿ ಹೇಗೆಲ್ಲಜನರ ಸೇವೆ ಮಾಡಬೇಕು ಎಂಬುದನ್ನು ಶೋಭಾ ಕಮತರ ತೋರಿಸಿಕೊಟ್ಟಿದ್ದಾರೆ. ಸಮಾಜ ಸೇವೆಯಲ್ಲಿ ಯಾವುದೇ ಪ್ರತಿಫಲಾಪೇಕ್ಷೇ ಇಲ್ಲದೇ ದುಡಿಯುವ ಇವರು ಸ್ಲಂ ಜನಾಂದೋಲನ ಸಂಘಟನೆ ಮೂಲಕ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಸಂಘಟನೆಯಲ್ಲಿಚಾಣಾಕ್ಷತೆ ಹೊಂದಿರುವ, ಹೋರಾಟಗಳಲ್ಲಿಮುಂಚೂಣಿಯಲ್ಲಿರುವ ಇವರು ಬಡವರು-ನಿರ್ಗತಿಕರ ಸೇವೆಗೆ 24*7 ಶ್ರಮಿಸುತ್ತಿದ್ದು, ಬಡವರ ಪಾಲಿಗೆ ಕಾಮಧೇ ನುವಾಗಿದ್ದಾರೆ. ಲಾಕ್‌ಡೌನ್ ಘೋಷಣೆಯಾಗುತ್ತಿದ್ದಂತೆ ಕೂಡಲೇ ಜಾಗೃತರಾದ ಶೋಭಾ ಆರಂಭದಲ್ಲಿ ತಾವೇ ಮನೆ ಮನೆಗೆ ಹೋಗಿ ಒಂಟಿಯಾಗಿ ಕಷ್ಟದಲ್ಲಿಸಿಲುಕಿದವರ ನೆರವಿಗೆ ಮುಂದಾದರು
ಸಾಕಷ್ಟು ಸಂಘಟನೆಗಳ ಜೊತೆ ನಿಕಟ ಸಂಪರ್ಕ ಹೊಂದಿರುವ ಇವರು ಎಲ್ಲ ಸಂಘಟನೆ ಮುಖಂಡರ ಅಭಿಪ್ರಾಯ ಪಡೆದು ತಮ್ಮದೇ ಆದ ರೀತಿಯಲ್ಲಿ ಸೇವೆ ದಲ್ಲಿ ಸಲ್ಲಿಸುತ್ತಿದ್ದಾರೆ.
ಬಡವರು-ನಿರ್ಗತಿಕರು, ವೃದ್ಧರ ಸಮಸ್ಯೆಯನ್ನು ಅರಿತುಕೊಂಡು ಎರಡನೇ ಹಂತದಲ್ಲಿಆಹಾರದ ಕಿಟ್‌ಗಳನ್ನು ವಿತರಿಸುವ ಮೂಲಕ ಹಸಿದವರಿಗೆ ಅನ್ನದಾತರು ಆದರು.
ಲಾಕ್‌ಡೌನ್ ವೇಳೆಯಲ್ಲಿಅಷ್ಟೇ ಅಲ್ಲದೇ, ಯಾವುದೇ ಸಂದರ್ಭದಲ್ಲೂತಮ್ಮ ನಿವಾಸಕ್ಕೆ ನೆರವು ಕೋರಿ ಬರುವವರಿಗೆ ಜಾತಿ, ಮತ ನೋಡದೇ ಸಹಾಯ ಮಾಡುವ ಮಾನವೀಯತೆ ಹೊಂದಿದ್ದಾರೆ. ವಿದ್ಯಾಭ್ಯಾಸ, ಆರೋಗ್ಯ, ಮದುವೆ, ಬಡತನ ಸೇರಿದಂತೆ ಇನ್ನಿತರ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಜನರಿಗೆ ಸಹಾಯ ಮಾಡುತಿದ್ದಾರೆ.
ಮಾನವೀಯತೆ ನೆಲೆಗಟ್ಟಿನ ಮೇಲೆ ಬಡವರಿಗೆ ಆಸರೆಯಾಗಿದ್ದಾರೆ. ಲಾಕ್‌ಡೌನ್‌ದಿಂದ ಅಡುಗೆ ಮಾಡುವವರು, ಬಟ್ಟೆ ತೊಳೆಯುವವರು, ಕಟ್ಟಡ ಕಾರ್ಮಿಕರು, ವಾಚ್‌ಮನ್‌ಗಳು, ಹೊರ ರಾಜ್ಯದಿಂದ ಬಂದು ಸಿಲುಕಿದ ಅಲೆಮಾರಿಗಳು, ಮಂಗಳಮುಖಿಯರು ಕೈಯಲ್ಲಿಹಣವಿಲ್ಲದೇ ಕಂಗಾಲಾಗಿದ್ದರು. ಇವರ ಸಂಕಷ್ಟಗಳನ್ನೆಲ್ಲಖುದ್ದಾಗಿ ಗಮನಿಸಿ ಅವರಿಗೆ ನೆರವು ನೀಡಿದ್ದಾರೆ.
ಕೊರೊನಾ ವೈರಸ್ ಭೀತಿಯಿಂದ ಲಾಕ್‌ಡೌನ್ ಘೋಷಣೆಯಾಗುತ್ತಿದ್ದಂತೆ, ಜನರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿಸಕ್ರಿಯರಾಗಿ ಇತರರಿಗೆ ಮಾದರಿಯಾಗಿದ್ದಾರೆ. ಬಡ ಜನರಿಗೆ ಒಂದು ತಿಂಗಳಿನಿಂದ ಅವಶ್ಯಕ ವಸ್ತುಗಳನ್ನು ಆಹಾರ ಕಿಟ್ ಉಚಿತವಾಗಿ ನೀಡಿದ್ದಾರೆ.
ಈಗಾಗಲೇ ಲಕ್ಷಾಂತರ ರೂ. ಖರ್ಚು ಮಾಡಿ ಅಗತ್ಯ ವಸ್ತುಗಳ ಆಹಾರ ಕಿಟ್‌ಗಳನ್ನು ಬಡವರು, ವೃದ್ಧರು, ನಿರ್ಗತಿಕರು, ವಿಧವೆಯರು, ಪೌರಕಾರ್ಮಿಕರು, ಆಟೋ ಚಾಲಕರು, ಮಂಗಳ ಮುಖಿಯರು ಸೇರಿದಂತೆ ಕೈಲಾದವರಿಗೆ ವಿತರಿಸಿ ಅವರಿಗೆ ನೈತಿಕ ಬೆಂಬಲ ನೀಡಿದ್ದಾರೆ.
![](https://karnatakajunction.com/wp-content/uploads/2022/09/WhatsApp-Image-2021-06-11-at-09.05.27-660x330.jpeg)