ಹುಬ್ಬಳ್ಳಿ;ಪರಮ ಪೂಜ್ಯ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳ”15″ ನೇ ವರ್ಷದ ಅಂಗವಾಗಿ ಪುಣ್ಯಾರಾದನೆ ಕಾರ್ಯಕ್ರಮ ಜರುಗಿತು. ಆನಂದ್ ನಗರ ರಸ್ತೆಯಲ್ಲಿ ಬರುವ ನಾಗಲಿಂಗ ನಗರದ
ಶ್ರೀ ರಾಜ ವಿದ್ಯಾಶ್ರಮದಲ್ಲಿ ಪೀಠಾಧಿಪತಿಗಳಾದ ಶ್ರೀ ಷಡಕ್ಷರಿ ಮಹಾಸ್ವಾಮಿಗಳ ನೇತೃತ್ವದಲ್ಲಿ ಪರಮಪೂಜ್ಯ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳ ಕರ್ತೃ ಗದ್ದುಗಿಗೆ ರುದ್ರಾಭಿಷೇಕ ಹಾಗೂ ಹೂವಿನ ಅಲಂಕಾರ, ಕಾಕಡಾ ಆರತಿ ಮಹಾ ಮಂಗಳಾರತಿ ಮಾಡುವ ಮೂಲಕ ಮಹಾ ಪೂಜೆಯನ್ನು ನೆರವೇರಿಸಲಾಯಿತು .ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಉಪ ಮಹಾ ಪೌರರಾದ ಶ್ರೀಮತಿ ಉಮಾ ಮುಕುಂದ ರವರು ಹಾಗೂ ವಾರ್ಡ ನಂ :53 ರ ಹು-ಧಾ ಮಹಾನಗರ ಪಾಲಿಕೆ ಸದ್ಯಸರಾದ ಆರಿಪ್ ಭದ್ರಾಪುರ ಅವರಿಗೆ ಶ್ರೀ ರಾಜ ವಿದ್ಯಾಶ್ರಮದ ವತಿಯಿಂದ ಸನ್ಮಾನ ಮಾಡವ ಮೂಲಕ ಗೌರವ ಸಮರ್ಪಣೆ ಮಾಡಿ ಅಭಿನಂದಿಸಿ ಆಶೀರ್ವಾದ ಮಾಡಿದರು. ಈ ಸಂದರ್ಭದಲ್ಲಿ :ಕೀರ್ತನೆ ಕೇಸರಿ ಎಂದು ಖ್ಯಾತರಾದ ಶ್ರೀ ಗುರುನಾಥ ಶಾಸ್ತ್ರಿಗಳು ಹಾಗೂ ಮಠದ ಭಕ್ತರಾದ ಶಿವಬಸಪ್ಪ. ಎಸ್. ಗಚ್ಚಿನವರ, ಶ್ರೀಮತಿ ಅಕ್ಕ ಮಹಾದೇವಿ ಬಾಗೇವಾಡಿ ಅನಿಲ್ ದೇಶಪಾಂಡೆ, ಸುರೇಶ ಹೊರಕೇರಿ, ವಂದನಾ ಕರಾಳೆ, ಶ್ರೀಮತಿ ರೂಪಾ ಮಾದಪ್ಪನವವರ, ಹಾಗೂ ಅಪಾರ ಭಕ್ತ ಸಮೂಹ . ಹಾಗೂ ನಾಗಲಿಂಗ ನಗರದ ಸಮಸ್ತ ಗುರು ಹಿರಿಯರು ಉಪಸ್ಥಿತರಿದ್ದರು
Check Also
ದಸರಾ ಹಬ್ಬದ ರಜೆ ಕೊಡದ ಕ್ರಿಶ್ಚಿಯನ್ ಶಾಲೆಗಳು: ಮುತಾಲಿಕ್ ಆಕ್ರೋಶ
Spread the loveನಾಡ ಹಬ್ಬ ದಸರಾಕ್ಕೆ ಸರ್ಕಾರವೇ 15 ದಿನಗಳ ಕಾಲ ಶಾಲೆಗೆ ಅಧಿಕೃತ ರಜೆ ಘೋಷಣೆ ಮಾಡಿದೆ. ಆದರೆ, …