ಹುಬ್ಬಳ್ಳಿ: ಜೊಮ್ಯಾಟೋವಿನಲ್ಲಿ ಚಿಕನ್ ಆರ್ಡರ್ ಮಾಡಿದ ಗ್ರಾಹಕರೊಬ್ಬರಿಗೆ ಚಿಕನ್ ಫುಡ್ನಲ್ಲಿ ಮಿಕ್ಸರ್ ಬ್ಲೇಡ್ ಪತ್ತೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಹುಬ್ಬಳ್ಳಿಯ ಮಲ್ಲಿಕಾರ್ಜುನ್ ಎಂಬುವವರು ಜೊಮ್ಯಾಟೋದಲ್ಲಿ ಫುಡ್ ಆರ್ಡರ್ ಮಾಡಿದ್ದು, ಅದನ್ನು ತಿನ್ನುವಾಗ ಅದರಲ್ಲಿ ಬ್ಲೇಡ್ ಇರುವುದನ್ನು ಗಮನಿಸಿದ್ದಾರೆ. ಹೀಗಾಗಿ ಮುಂದೆ ಆಗಬಹುದಾದ ಅನಾಹುತದಿಂದ ಅವರು ಪಾರಾಗಿದ್ದಾರೆ.
ಹಣ ಪಾವತಿಸಿದ ಜೊಮ್ಯಾಟೋ ಆ್ಯಪ್ ಮೂಲಕ ವಿದ್ಯಾನಗರದ ಪಂಜುರ್ಲಿ ಹೋಟೆಲ್ ನಲ್ಲಿ ಚಿಕನ್ ಸುಕ್ಕಾ ಆರ್ಡರ್ ಮಾಡಿದ್ದ ಮಲ್ಲಿಕಾರ್ಜುನ್ಗೆ ಊಟ ಮಾಡುವಾಗ ಚಿಕನ್ ಪೀಸ್ನಲ್ಲಿ ಈ ಮಿಕ್ಸರ್ ಬ್ಲೇಡ್ ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತುಕೊಂಡ ಅವರು ಬ್ಲೇಡ್ ತೆಗೆದಿಟ್ಟಿದ್ದಲ್ಲದೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಬಗ್ಗೆ ಜೊಮ್ಯಾಟೋ ಆ್ಯಪ್ ನ ಸಂಬಂಧಿಸಿದ ಹೋಟೆಲ್ನವರಿಗೆ ವಿಚಾರಿಸಿದರೆ ಅವರು ಹಾರಿಕೆ ಉತ್ತರ ನೀಡಿದ್ದಾರಂತೆ. ಆದರೆ, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Check Also
ಎಪಿಎಂಸಿಗೆ ಶಾಸಕ ಟೆಂಗಿನಕಾಯಿ ಭೇಟಿ, ವರ್ತಕರ ಸಮಸ್ಯೆ ಚರ್ಚೆ
Spread the loveಹುಬ್ಬಳ್ಳಿ: ಇಲ್ಲಿಯ ಅಮರಗೋಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಬುಧವಾರ ಭೇಟಿ ನೀಡಿದ್ದ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ …