Breaking News

ರಾಯಚೂರಿನಲ್ಲಿ ಕಲಷಿತ ನೀರು ಸೇವಿಸಿ ಇನ್ನೋರ್ವ ಸಾವು

Spread the love

ರಾಯಚೂರು : ನಗರಸಭೆಯಿಂದ ಪೂರೈಕೆಯಾದ ಕಲುಷಿತ ನೀರಿಗೆ ಮತ್ತೋರ್ವ ವ್ಯಕ್ತಿ ಬಲಿಯಾಗಿದ್ದಾನೆ ಎಂಬ ಆರೋಪ‌ ಕೇಳಿ ಬಂದಿದೆ. ನಗರದ ಅರಬ್ ಮೊಹಲ್ಲಾ ನಿವಾಸಿ ಆಟೋ ಡ್ರೈವರ್ ಮಹಮ್ಮದ್ ನೂರ್ (43) ಮೃತ ದುರ್ದೈವಿ
ನಗರಸಭೆಯಿಂದ ಪೂರೈಕೆಯಾದ ಕಲುಷಿತ ನೀರು‌ ಕುಡಿದು ವಾಂತಿ, ಭೇದಿಯಿಂದ ಬಳಲುತ್ತಿದ್ದ ಇವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ, ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮನೆಯ ಯಜಮಾನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ಈಗಾಗಲೇ ಮಲ್ಲಮ್ಮ ಮತ್ತು ಅಬ್ದುಲ್ ಗಫಾರ್ ಎಂಬುವರು ಕಲುಷಿತ ನೀರು ಸೇವಿಸಿ ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟಿದ್ದಾರೆ. ಈಗ ಮಹಮ್ಮದ್​​ ನೂರ್ ಬಲಿಯಾಗಿವ ಮೂಲಕ ಮೂವರು ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇನ್ನು ಕ್ರಮಕೈಗೊಳ್ಳದ ನಗರಸಭೆಯ ವಿರುದ್ಧ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.


Spread the love

About Karnataka Junction

[ajax_load_more]

Check Also

ವಿಧಾನ ಪರಿಷತ್ ಮಾಜಿ ಸದಸ್ಯೆ ಸಾವಿತ್ರಮ್ಮ ಗುಂಡಿ ನಿಧನ

Spread the loveಹುಬ್ಬಳ್ಳಿ : ಕರ್ನಾಟಕ ರಾಜ್ಯ ಸಂಯುಕ್ತ ಜನತಾ ದಳ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ , ವಕೀಲರು ಹಾಗೂ …

Leave a Reply

error: Content is protected !!