Breaking News

ಪ್ರವಾದಿ ಮಹಮ್ಮದ್ ಅವರ ನಿಂದನೆ ವಿಶ್ವದಾದ್ಯಂತ ಭಾರಿ ಆಕ್ರೋಶ

Spread the love

ಹೊಸದಿಲ್ಲಿ : ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್‌ ಶರ್ಮಾ ಎಂಬಾಕೆ ಪ್ರವಾದಿ ಮುಹಮ್ಮದ್‌(ಸ) ರ ಕುರಿತು ಅಪಮಾನಕರ ಮಾತುಗಳನ್ನಾಡಿದ ಪ್ರಕರಣದ ಕುರಿತು ಸಾಮಾಜಿಕ ತಾಣದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಹಲವೆಡೆ ಈ ಬಗ್ಗೆ ಪ್ರಕರಣಗಳನ್ನೂ ದಾಖಲಿಸಲಾಗಿತ್ತು. ಇದೀಗ ಈ ವಿಚಾರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗುರಿಯಾಗಿದೆ. ಪ್ರವಾದಿ ನಿಂದನೆಯನ್ನು ವಿರೋಧಿಸಿ ವಿಶ್ವದಾದ್ಯಂತ ಮುಸ್ಲಿಮರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶ್ವದಾದ್ಯಂತ ಹಲವಾರು ಪ್ರಮುಖ ಮಾಧ್ಯಮಗಳು ಹಾಗೂ ಹಲವಾರು ಪ್ರಮುಖ ವ್ಯಕ್ತಿಗಳು ಹೇಳಿಕೆಯನ್ನು ಖಂಡಿಸಿದ್ದು ಮಾತ್ರವಲ್ಲದೇ ವಕ್ತಾರೆಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೊತೆಗೆ ಭಾರತದೊಂದಿಗೆ ಗಲ್ಫ್‌ ರಾಷ್ಟ್ರಗಳು ಸಂಬಂಧ ಕಡಿದುಕೊಳ್ಳಬೇಕು ಹಾಗೂ ಭಾರತೀಯ ವಸ್ತುಗಳನ್ನು ಬಹಿಷ್ಕರಿಸಬೇಕಾಗಿಯೂ ಹಲವರು ಪೋಸ್ಟ್‌ ಗಳನ್ನು ಮಾಡಿದ್ದಾರೆ. ಪ್ರಧಾನಿ ಮೋದಿ ತಮ್ಮ ಮಿತಿಯನ್ನು ಮೀರುತ್ತಿದ್ದು, ದೇಶದಲ್ಲಿ ಅಲ್ಪಸಂಖ್ಯಾತರ ಶೋಷಣೆ ಹೆಚ್ಚಾಗುತ್ತಿದೆ ಎಂಬುವುದನ್ನು ಹಲವರು ಬೆಟ್ಟು ಮಾಡಿದ್ದಾರೆ. ಈಗಾಗಲೇ ಹಲವಾರು ಸೂಪರ್‌ ಮಾರ್ಕೆಟ್‌ ಗಳು ಭಾರತೀಯ ವಸ್ತುಗಳನ್ನು ತೆಗೆದುಹಾಕಿದೆ ಎಂದೂ ವರದಿಯಾಗಿದೆ.

ಸೌದಿ ಅರೇಬಿಯಾ ಸೇರಿದಂತೆ ದೇಶಗಳು ಪ್ರವಾದಿ ಮೊಹಮ್ಮದ್ ಕುರಿತು ಇಬ್ಬರು ಬಿಜೆಪಿ ನಾಯಕರು “ಇಸ್ಲಾಮೋಫೋಬಿಕ್” ಎಂದು ವಿವರಿಸಿದ ಹೇಳಿಕೆಗಳನ್ನು ಖಂಡಿಸಿವೆ. ವ್ಯಾಪಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕತಾರ್ ಪ್ರವಾಸದ ನಡುವೆ ವಿವಾದ ಭುಗಿಲೆದ್ದಿದೆ. ಸೌದಿ ಅರೇಬಿಯಾ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರ ಹೇಳಿಕೆಯನ್ನು “ಅವಮಾನಕರ” ಎಂದು ಖಂಡಿಸಿದೆ. ರಿಯಾದ್ ಶರ್ಮಾ ಅವರ ಹೇಳಿಕೆಗಳನ್ನು ಖಂಡಿಸಿದೆ. ಗಲ್ಫ್‌ನಲ್ಲಿ ಭಾರತೀಯ ಸರಕುಗಳನ್ನು ಬಹಿಷ್ಕರಿಸುವಂತೆ ಸಾಮಾಜಿಕ ತಾಣಗಳಲ್ಲಿ ಆಕ್ರೋಶದ ಅಭಿಯಾನಗಳು ಆರಂಭವಾಗಿವೆ.


Spread the love

About Karnataka Junction

    Check Also

    ಎಸ್. ಜೆ. ಎಮ್. ವಿ.ಮಹಾಂತ ಪ್ರಥಮ ದರ್ಜೆ ಕಲಾ, ವಾಣಿಜ್ಯ ಕಾಲೇಜಿನಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ

    Spread the loveಎಸ್. ಜೆ. ಎಮ್. ವಿ.ಮಹಾಂತ ಪ್ರಥಮ ದರ್ಜೆ ಕಲಾ, ವಾಣಿಜ್ಯ ಕಾಲೇಜಿನಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ …

    Leave a Reply

    error: Content is protected !!