ನವಲಗುಂದ : ಅಂದು ಶಿಕ್ಷಣ ಸೇವೆಯಾಗಿ ಕಾರ್ಯ ನ್ಮೂಖರಾಗಿದ್ದರು. ಇಂದು ಶಿಕ್ಷಣ ವ್ಯಾಪಾರಿಕರಣವಾಗಿದೆ. ತ್ಯಾಗ, ಸರಳತೆ ಹಾಗೂ ಬಡತನ ಇದ್ದರು ಶ್ರಮವಹಿಸಿ ನೀವು ಸದೃಡರಾಗಿದ್ದೀರಿ ಅದರಂತೆ ನಿಮ್ಮ ಮಕ್ಕಳಿಗೂ ಸರಳತೆ, ಗೌರವ ನೀಡುವ ಮನೋಭಾವನೆ ಇವತ್ತಿನ ಮಕ್ಕಳಲ್ಲಿ ಇಲ್ಲವಾಗಿದೆ ಎಂದು ಸಾಹಿತಿ ಮತ್ತು ಜೀವನ ಶೈಲಿ ಸಲಹೆಗಾರರಾದ ಸಿದ್ದು ಯಾಪಲಪರವಿ ಹೇಳಿದರು.
ಅವರು ಪಟ್ಟಣದ ಮಾಡೆಲ್ ಹೈಸ್ಕೂಲ್ ಸಭಾಭವನದಲ್ಲಿ ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಪುಸ್ತಕ ಓದುವ ಹವ್ಯಾಸವನ್ನು ಇವತ್ತಿನ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಇವತ್ತು ಮಾನವೀಯ ಸಂಬಂಧ ನಶಿಸಿ ಹೋಗುತ್ತಿದೆ. ಜೀವನ ಯಾವ ರೀತಿ ಇದೆಯೋ ಅದೇ ರೀತಿ ನಾವು ತೆಗೆದುಕೊಂಡು ಎದುರಿಸಬೇಕು. ಶ್ರೀಮಂತಿಕೆ, ಬಡತನ ಎರಡನ್ನು ಅಷ್ಟೇ ಸಮನಾಗಿ ತೆಗೆದುಕೊಳ್ಳಬೇಕು. ನಮ್ಮ ಮಕ್ಕಳಿಗೆ ಸರಳತೆ, ಹಿರಿಯರಿಗೆ ಗೌರವ ನೀಡುವ ಪರಂಪರೆಯನ್ನು ರೂಡಿಸಬೇಕು. ನೀವು ಕಲಿತ ಶಾಲೆ, ಊರು, ಗುರುಗಳನ್ನು ಬೇಟಿ ಮಾಡಿಸಿ ಮಾನವೀಯ ಮೌಲ್ಯಗಳನ್ನು ತಿಳಿಸಬೇಕಾಗಿದೆ.
ಇಂದಿನ ಪೀಳಿಗೆ ಸಂಬಂಧಗಳಿಂದ ದೂರ ಸರಿಯುತ್ತಿದೆ. ನಮ್ಮ ಮಕ್ಕಳು ಇಂಜಿನೀಯರ್, ಡಾಕ್ಟರ್, ಹೊರರಾಜ್ಯದಲ್ಲಿ ವ್ಯಾಸಂಗ ವ್ಯಾಮೋಹ ಇದೇ ಹೊರತು ನಮ್ಮ ಮಕ್ಕಳು ರೈತನಾಗಲಿ, ಒಳ್ಳೇಯ ವ್ಯಾಪಾರಿಯಾಗಬೇಕೆಂಬ ಗುರಿ ಇಲ್ಲದಂತಾಗಿದೆ. ಗುರುಗಳು ಎಂಬ ಭಾವನೆ ಇಟ್ಟುಕೊಂಡಿಲ್ಲ ಇಂಗ್ಲೀಷ್ ವ್ಯಾಮೋಹದಿಂದ ಸಂಸ್ಕ್ರತಿ ಮರೆದಿದ್ದಾರೆ. ಶಿಕ್ಷಕರು ಜೀವಾಳವಾಗಿ ವಿದ್ಯಾರ್ಥಿಗಳನ್ನು ರೂಪಸಿದ್ದಾರೆ. ಶಿಕ್ಷಕರು ಪ್ರಶಸ್ತಿಗಳನ್ನು ಹುಡುಕಿಕೊಂಡು ಹೋಗುವುದಕ್ಕಿಂತ ಶಿಷ್ಯ ಗುರವಿಗೆ ನೀಡುವ ಗೌರವ ಪ್ರಶಸ್ತಿಕ್ಕಿಂತ ದೊಡ್ಡದಾಗಿದೆ. ಅಭಿವೃದ್ದಿ ಹೆಸರಿನಲ್ಲಿ ಮರಗಳನ್ನು ಕಡೆಯುತ್ತಿದ್ದಾರೆ. ಪ್ರತಿಯೊಬ್ಬರ ಆರೋಗ್ಯಕ್ಕೆ ಸಸಿಗಳನ್ನು ನೆಡಬೇಕೆಂಬ ಪರಿಕಲ್ಪನೆ ಇಲ್ಲವೆಂದು ಹೇಳಿದರು.
ನಿಮ್ಮ ದ್ಯೆಯಗಳನ್ನು ಮರಿಯಬಾರದು, ಹಣ ಅಹಾಂಕಾರ ನಮ್ಮ ಜೊತೆ ಬರುದಿಲ್ಲ, ಬದುಕಿನ ಬೇರುಗಳು ಕಟ್ಟಿಯಾಗಿರಬೇಕು ಪರಿಸರವನ್ನು ಸ್ವಚ್ಚವಾಗಿಟ್ಟು, ಶಾಲಾ ಶಿಕ್ಷಕರಿಗೆ ಸಹಾಯ ಸಹಕಾರಿ ಮಾಡಿ ನೀವು ಕಲಿತ ಶಾಲೆಗೆ ನಿಮ್ಮ ಕೊಡುಗೆ ಇರಲಿ ನಿಮ್ಮ ದೈಹಿಕ ಮಾನಸಿಕ ಭಾವನಾತ್ಮಕ ಆದ್ಮಾತ್ಮಿಕ ಆರೋಗ್ಯವನ್ನು ಕಾಪಾಡಿಕೊಳ್ಳರಿಂದ ಹೇಳಿದರು.
ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎ.ಬಿ.ಕೊಪ್ಪದ ಮಾತನಾಡಿ 28 ವರ್ಷ ನಂತರ ಗುರುವಂದನೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಗುರುಗಳಿಗೆ ಸನ್ಮಾನಿಸುತ್ತಿರುವುದು ಶ್ಲಾಘನೀಯ. ಶಾಲೆಯ, ಸಂಗಾತಿಗಳು, ಗುರುಗಳ ಋಣವನ್ನು ತೀರಿಸುವ ಕಾರ್ಯಕ್ರಮ ಹೃದಯ ಸ್ಪರ್ಶ ಸಂಗಮವಾಗಿದೆ. ನಿಮ್ಮ ನಿಮ್ಮ ಬದುಕು ಕಟ್ಟಿಕೊಂಡು ಅವಿಸ್ಮರಣೆಯ ವೇದಿಕೆ ರೂಪಿಸಿದ್ದೀರಿ. ಗುರುವಿಗೆ ಶಿಷ್ಯನ ಜ್ಞಾನದ ಅಸಿವಿನ ಅರಿವೆರಬೇಕು, ಗುರುವಿಗೆ ಶಿಷ್ಯನಿಂದ ಗುರುವಿನ ಗೌರವದ ಅರ್ಥ ಇರಬೇಕಂಬುದನ್ನು ಗುರುವಂದನೆ ಸಾಕ್ಷಿಯಾಗಿದೆ.
ಅಲೆಗ್ಜಾಂಡರ್ ಜಗತ್ತಿನ್ನು ಗೆದ್ದರು ಗುರುವಾದ ಅರಿಸ್ಟಾಟಲ್ ಹತ್ತಿರ ಹೋಗಿ ಆಶೀರ್ವಾದ ಪಡೆದು ಗುರುವಿಗೆ ಗೌರವಿಸಿರುವುದು ವಾಸ್ತವಿಕ ಅರಿವುನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು. ಮಾನವಿಯ ಮೌಲ್ಯಗಳನ್ನು ದೇಶದ ಪರಂಪರೆ, ಸಂಸ್ಕ್ರತಿಯನ್ನು ಉಳಿಸಿ ಅವಿಸ್ಮಾರಣೆಯ ಕಾರ್ಯಕ್ರಮ ಮಾಡಿರುತ್ತೀರೆಂದು ಹೇಳಿದರು.
ಸಾನಿದ್ಯ ವಹಿಸಿದ್ದ ಅಜಾತ ನಾಗಲಿಂಗ ಸ್ವಾಮಿ ಮಠದ ವೀರೇಂದ್ರ ಸ್ವಾಮೀಜಿಗಳು ಮಾತನಾಡಿ ಹಿಂದಿನ ಕಾಲದ ಶಿಕ್ಷಕ ಶಿಸ್ತು, ಮೌಲ್ಯಗಳು ಇದ್ದರು ಇವತ್ತು ಅವೆಲ್ಲ ಕಡಿಮೆಯಾಗಿದ್ದಾವೆ. ವಿದ್ಯಾರ್ಥಿಗಳ ಮುಂದೆ ಶಿಕ್ಷಕರು ಸಣ್ಣತನ ತೋರಿಸಬೇಡಿ ಗುರುವನ್ನು ಮೀರಿ ಶಿಷ್ಯ ಬೆಳೆದರೆ ಗುರುವಿಗೆ ಅದೇ ಸಂತೋಷ 94 ನೇ ಇಸ್ವಿಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಮಾಡಿ ಗುರುಗಳಿಗೆ ವಂದಿಸಿದ್ದಾರೆಂದು ಹೇಳಿದರು.
ಮಾಡೆಲ್ ಹೈಸ್ಕೂಲ್ ಮುಖ್ಯೋಪಾಧ್ಯಾಯರಾದ ಎಸ್.ಕೆ.ಮಾಕಣ್ಣವರ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಹಿರಿಯ ಮುಖ್ಯೋಪಾದ್ಯಯರಾದ ಎಸ್.ಎಮ್.ಪಟ್ಟಣಶೆಟ್ಟಿ, ಕೆ.ಜಿ.ಸದರಜೋಶಿ ಮಾತನಾಡಿ ಶಾಲಾ ದಿನಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಶಾಲೆಯ ಜೊತೆ ಇದ್ದ ಬಾಂಧವ್ಯವನ್ನು ಹಂಚಿಕೊಂಡರು.
ಶಾಲಾ 94ನೇ ಸಾಲಿನ ವಿದ್ಯಾರ್ಥಿಗಳಾದ ಪಂಕಜ ಬಿಡಿ, ವಾಯ್.ಜಿ.ಗದ್ದಿಗೌಡರ, ಶೌಕತ್ತಲಿ ಲಂಬೂನವರ ಹಾಗೂ ಶ್ರೀದೇವಿ ಶಾಲೆಯ ಕುರಿತು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಮುಂಚೆ ಅನೀಲ ಮೆತ್ರಿ ಸಂಗಡಿಗರಿಂದ ಸಂಗೀತ ಸೇವೆ ನೀಡಿದರು. ಶಿವರಂಜನಿ ನಾಟ್ಯ ಸಂಘದ ವತಿಯಿಂದ ರಂಜನಾ ಕಾಮತ್ ಹಾಗೂ ಸಂಗಡಿಗರು ಭರತ ನಾಟ್ಯ ಪ್ರದರ್ಶಶಿಸಿದರು. ಇದೇ ಸಂದರ್ಭದಲ್ಲಿ ಆರು ಸಸಿಗಳನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿದು.
94 ನೇ ಇಸ್ವಿಯ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಶಿಕ್ಷಕ ಹಾಗೂ ಶಿಕ್ಷಕಿಯರಿಗೆ ಎಸ್.ಎಮ್.ಪಟ್ಟಣಶೆಟ್ಟಿ, ಎನ್.ಹೆಚ್.ಪುರಾಣಿಕ, ಆರ್.ಬಿ.ಕಮತರ, ವಿ.ಎನ್.ಪತಕಿ ಎಮ್.ಬಿ.ಮುಲ್ಲಾನವರ, ಕೆ.ಜಿ.ಸದರಜೋಶಿ, ಎಸ್.ಬಿ.ತೋಟಿ, ಎಸ್.ಎ.ಬಾರಕೇರ, ಎಸ್.ಡಿ.ಪಾಟೀಲ, ಸುನಿತಾ ಅಂಗಡಿ, ಕುಮುದಾ ರೊಟ್ಟಿ, ಎಸ್.ಆರ್.ಕುಲಕರ್ಣಿ, ಎಮ್.ಎಸ್.ಕಡಕೋಳ, ದೇವರಮನಿ ಸರ್, ಪತ್ತಾರ ಸರ್, ಅಡಿವಿ ಸರ್, ಆರ್.ಜಿ.ಬಿಡೆ, ಶಿವಪ್ಪ ಚುಳಕಿ, ವೆಂಕಣ್ಣ ದೊಡಮನಿ, ಎಸ್.ಟಿ.ರೋಣದ, ಪಿ.ಎನ್.ಗುಳೇದ, ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ದಿ. ಅನಂತ ಸುಂಕದ, ದಿ. ಎಸ್.ವಿ.ಮದ್ವರಾಯನವರ, ದಿ. ಜೆ.ಡಿ.ದೊಡಮನಿ, ದಿ. ಎಸ್.ಎಮ್.ಕದಂ, ದಿ. ಬಿ.ಬಿ.ಜಕ್ಕನಗೌಡರ, ದಿ. ವಾಸುದೇವ ಗುಡಿ, ದಿ. ಎಚ್.ಎ.ಗ್ರಾಮಪುರೋಹಿತ, ದಿ. ವಿ.ಎಸ್.ಕುಲಕರ್ಣಿ, ದಿ. ಪಿ.ಎಸ್.ದೇವಳೆ, ದಿ. ಟಿ.ಎ.ಹಳ್ಳಿಕೇರಿ, ದಿ. ಕೌಜಗೇರಿ ಹಾಗೂ ನಮ್ಮನ್ನಗಲಿದ ಮಿತ್ರರರಿಗೂ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಲಾಯಿತು.
ವಿದ್ಯಾರ್ಥಿಗಳಾದ ಮಹೇಶ ಕೊಟ್ಟರಶೆಟ್ಟರ, ಶಿವಾನಂದ ಕಮ್ಮಾರ, ವಿಜಯ ನಾಗಾವಿ, ಮಹಾಂತೇಶ ಜಿನಗಾ, ರಮೇಶ ಕುಲಕರ್ಣಿ, ಅರುಣ ಸುಂಕಾಪೂರ, ರಾಜು ಗದಗ, ಯಲ್ಲಪ್ಪ ಕಲಾಲ, ಅಪ್ಪಣ್ಣ ಕುಬಸದ, ಮುತ್ತು ಕಿರೇಸೂರ, ಅನೀಲ ಜಾಬೋಂಟಿ, ಶೌಕತ್ತ ಇಂಜೀನಿಯರ್, ವಿಶ್ವನಾಥ ದ್ಯಾವನಗೌಡರ, ಸಂತೋಷ ಪಾಟೀಲ, ಸಲೀಮ ಮುಲ್ಲಾ, ಲಕ್ಷ್ಮಣ ಬಂಡಿವಾಡ, ಜಮೀರ ಹುನಗುಂದ, ಗಂಗಾಧರ ಕಮ್ಮಾರ, ಜಯಪ್ರಕಾಶ ಮಾರನಬಸರಿ, ಮಂಜುನಾಥ ದ್ಯಾವನಗೌಡರ, ಸುನೀಲ ಸನ್ನಾಯಕ. ವಿಜಯಲಕ್ಷ್ಮೀ ಶಿದ್ರಾಮಶೆಟ್ಟರ, ಜ್ಯೋತಿ ಮಹೇಂದ್ರಕರ ಸೇರಿದಂತೆ ಇತರರು ಇದ್ದರು.
