Breaking News

ಶಿಕ್ಷಕರ ಆಪತ್ ಭಾಂದವ ಆಶಾಕಿರಣ ಹೊರಟ್ಟಿ ಪರ ಮುಖ್ಯಮಂತ್ರಿ ಬೊಮ್ಮಾಯಿ ಪ್ರಚಾರ

Spread the love

ಹುಬ್ಬಳ್ಳಿ: ಶಿಕ್ಷಕ ಜಲ್ವಂತ ಸಮಸ್ಯೆಗಳನ್ನು ಬಗೆಹರಿಸಲು
ಬಸವರಾಜ ಹೊರಟ್ಟಿ ಅವರು 40 ವರ್ಷಗಳಿಂದ ಶ್ರಮಿಸುತ್ತಿದ್ದು ಈ ಬಾರಿಯ ಚುನಾವಣೆಯಲ್ಲಿ ಹೊರಟ್ಟಿ ದಾಖಲೆಯ ಗೆಲುವು ಸಾಧಿಸಲಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಆದರ್ಶನಗರದ ಡಾ.ಜಿ.ವಿ. ಜೋಶಿ ರೋಟರಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಪರವಾಗಿ ಪ್ರಚಾರ ನಡೆಸಿದ ಅವರು, ನಂತರ ಶಿಕ್ಷಕರೊಂದಿಗೆ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
‘ಹೊರಟ್ಟಿ ಅವರ ಚುನಾವಣೆ ಎಂದರೆ ಶಿಕ್ಷಕ ಸಮೂಹದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುತ್ತದೆ. ಹೊರಟ್ಟಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳನ್ನು ನಿವಾರಿಸಿದ್ದಾರೆ. ಶಿಕ್ಷಕರಿಗೆ ನ್ಯಾಯ ಒದಗಿಸಿ, ಶಿಕ್ಷಕಸ್ನೇಹಿ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಶಿಕ್ಷಣ ಕ್ಷೇತ್ರದ ಪ್ರತಿ ಸಮಸ್ಯೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನವನ್ನು ಹೊರಟ್ಟಿ ತಮ್ಮ ಅವಧಿಯುದ್ದಕ್ಕೂ ಮಾಡಿದ್ದಾರೆ. ರಾಜ್ಯದಲ್ಲಿ ಶಿಕ್ಷಕರಿಗೆ ಎಲ್ಲಾ ರೀತಿಯ ನ್ಯಾಯ ಒದಗಿಸಿರುವ ಏಕೈಕ ನಾಯಕ ಹೊರಟ್ಟಿ. ಅವರ ಹೋರಾಟ ಹಾಗೂ ಅವರ ಕೊಡುಗೆ ಕುರಿತು ಸಂಶೋಧನೆ ನಡೆಸಬೇಕೆನ್ನುವ ಆಕಾಂಕ್ಷೆ ನನ್ನದಾಗಿದೆ’ ಎಂದರು.
ಬಸವರಾಜ ಹೊರಟ್ಟಿ ಮಾತನಾಡಿ, ‘ಶಿಕ್ಷಕರು ಹಾಗೂ ನನ್ನದು ಒಂದೇ ಕುಟುಂಬ. ನಮ್ಮ ನಡುವೆ ಅಂತಹ ಪ್ರೀತಿ ಮತ್ತು ವಿಶ್ವಾಸವಿದೆ. ಕಳೆದ ಏಳು ಚುನಾವಣೆಗಳಲ್ಲಿ ಪಕ್ಷಾತೀತವಾಗಿ ಬೆಂಬಲಿಸಿರುವ ಶಿಕ್ಷಕರು, ಈ ಬಾರಿಯೂ ನನ್ನನ್ನು ಗೆಲ್ಲಿಸುತ್ತಾರೆಂಬ ಭರವಸೆ ಇದೆ’ ಎಂದ ಹೇಳಿದರು.
ನಿತೀಶ ಲಹರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ರಾಜಾ ದೇಸಾಯಿ, ‘ಶಿಕ್ಷಕರ ಯಾವುದೇ ಸಮಸ್ಯೆಯನ್ನು ತಕ್ಷಣ ಬಗೆಹರಿಸುವ ಹೊರಟ್ಟಿ ಅವರು, ಶಿಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಚುನಾವಣೆಯಲ್ಲಿ ಅವರ ಗೆಲುವು ನಿಶ್ಚಿತ’ ಎಂದರು.
ಸಭೆಯಲ್ಲಿ ಡಾ.ಪಿ.ವಿ. ಜತ್ತಿ, ಡಾ.ಬಿ.ಆರ್. ಪಾಟೀಲ, ಮಹೇಶ ತೆಂಗಿನಕಾಯಿ, ಶಿವಾನಂದ ಹಂಡೆ, ಸುಭಾಸ ಜವಳಿ, ಎಂ.ಕೆ. ಪಾಟೀಲ, ವಸಂತ ಹೊರಟ್ಟಿ, ರಾಜಣ್ಣ ಕೊರವಿ ಹಾಗೂ ಸದಾನಂದ ಕಾಮತ ಇದ್ದರು.


Spread the love

About Karnataka Junction

[ajax_load_more]

Check Also

ಹಸು ಕೆಚ್ಚಲು ದುರ್ಘಟನೆಯಲ್ಲಿ ಜಮೀರ್ ಅಹ್ಮದ್ ನಾಟಕ ರಚನೆ ಮಾಡ್ತಿದ್ದಾರೆ – ಹೊಸ ಬಾಂಬ್ ಸಿಡಿಸಿದ ಮುತಾಲಿಕ್‌

Spread the loveಹುಬ್ಬಳ್ಳಿ: ಬೆಂಗಳೂರಿನಲ್ಲಿ ನಡೆದ ಘಟನೆ ಅತ್ಯಂತ ಶೋಚನೀಯ. ಸಚಿವ ಜಮೀರ್ ಅಹ್ಮದ್ ನಾಟಕ ರಚನೆ ಆಡುತ್ತಿದ್ದಾರೆ ಎಂದು …

Leave a Reply

error: Content is protected !!