ಹುಬ್ಬಳ್ಳಿ: ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಈ ಸಲವೊ ನನ್ನದೇ ಗೆಲುವು ಈ ಸಲ ಶೇಕಡಾ 40 ರಷ್ಟು ಮತಗಳನ್ನು ಹೆಚ್ಚು ಪಡೆದು ಗೆಲುವು ಸಾಧಿಸುತ್ತೇನೆ ಎಂದು ಭಾರತೀಯ ಜನತಾ ಪಕ್ಷದ ಪಶ್ಚಿಮ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಬಸವರಾಜ ಹೊರಟ್ಟಿ ವಿಶ್ವಾಸ ವ್ಯಕ್ತಪಡಿಸಿದರು
ನಗರದ ಖಾಸಗಿ ಹೊಟೇಲ್ ನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದರು.
ಕ್ಷೇತ್ರದ ಮೇಲೆ ತಮ್ಮದೇ ವೈಯಕ್ತಿಕ ವರ್ಚಸ್ಸು ಹೊಂದಿದ್ದು ಸತತ ಏಳು ಗೆಲುವುಗಳನ್ನು ಕಂಡಿದ್ದು 8ನೇ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿದ್ದೇನೆ . ಪ್ರತಿ ಸಲ ನನಗೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯೇ ಎದುರಾಳಿಯಾಗುತ್ತಿದ್ದರು. ಈ ಸಲ ನಾನು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿದ್ದೇನೆ ನನ್ನ ಗೆಲುವು ಅತ್ಯಂತ ಸರಳವಾಗಿದೆ. ಈ ಸಲ ಅತೀ ಹೆಚ್ಚು ಮತಗಳ ಅಂತರದಿಂದ ಗೆಲುವು ಎಂದರು.
*ಹೌದು ಕುಮಾರಸ್ವಾಮಿ ಅವರೇ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡಿದ್ದಾರೆ*
ಏಳು ಸಲ ಶಿಕ್ಷಕ ಕ್ಷೇತ್ರವನ್ನು ಬಸವರಾಜ ಹೊರಟ್ಟಿ ಅವರು ಪ್ರತಿನಿಧಿಸಿದ್ದರು ಕೂಡ ಯಾವುದೇ ಹೇಳಿಕೊಳ್ಳುವ ಕೆಲಸ ಮಾಡಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಬಸವರಾಜ ಹೊರಟ್ಟಿ ಅವರು.
ಹೌದು ಕುಮಾರಸ್ವಾಮಿ ಅವರೇ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡಿದ್ದಾರೆ ಏಕೆಂದರೆ ಅವರು ಮುಖ್ಯಮಂತ್ರಿಯಾಗಿದ್ದರು ಒಂದು ಕ್ರಿಕೆಟ್ ಟೀಂನಲ್ಲಿ ಯಾರು ನಾಯಕರು ಇರುತ್ತಾರೆ ಅವರೇ ಹೆಚ್ಚು ಶ್ರೇಯಸ್ಸು ಸಲ್ಲುತ್ತದೆ. ಅಲ್ಲಿ ಕ್ರಿಕೆಟ್ ತಂಡ ವಿಜಯಶಾಲಿಯಾದಾಗ ತಂಡದ ನಾಯಕನೇ ಪ್ರಶಸ್ತಿ ಪಡೆಯುತ್ತಾನೆ ಎಂದರು.
ನಾನು ಕೆಲಸ ಮಾಡಿಲ್ಲ ಅಂದರೆ ಶಿಕ್ಷಕರು ನನ್ನ ಏಳು ಸಲ ಆಯ್ಜೆ ಮಾಡುತಿದ್ದಿರಾ ಎಂದು ಪ್ರಶ್ನೆ ಮಾಡಿದ ಬಸವರಾಜ ಹೊರಟ್ಟಿ ಅವರು ನಾನು ಏನು ಮಾಡಿದ್ದೇನೆ ಅದನ್ನು ಸಾಧನೆ ಪುಸ್ತಕ ಹೊರತಂದಿದ್ದೇನೆ. ಶಿಕ್ಷಕರ ನೇಮಕಾತಿ, ಶಿಕ್ಷಕರ ವರ್ಗಾವಣೆ , ಶಿಕ್ಷಕರಿಗೆ ಅನೇಕ ಸೌಲಭ್ಯಗಳನ್ನು ಕೊಡಿಸಲು ಶ್ರಮಿಸಿದ್ದೇನೆ. ನಾನು ಮಾಡಿದ ಸಾಧನೆಯಲ್ಲಿ ಸುಳ್ಳು ಆದರೆ ನನ್ನ ಮೇಲೆ ಕೇಸ್ ಹಾಕಲಿ ಎಂದರು.
*17244 ಮತದಾರರು ನೊಂದಣಿ ಮಾಡಲಾಗಿದೆ*
ಪಶ್ಚಿಮ ಶಿಕ್ಷಕರ ಕ್ಷೇತ್ರ ಒಟ್ಟು ನಾಲ್ಕು ಜಿಲ್ಲೆಗಳ ವ್ಯಾಪ್ತಿಯ ಹೊಂದಿದೆ. ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಯಾಗಿವೆ. ಇದೇ ವರ್ಷದ ಜನವರಿ 1ರವರೆಗಿನ ನೋಂದಣಿ ಪ್ರಕಾರ ಕ್ಷೇತ್ರದಲ್ಲಿ ಒಟ್ಟು 17,244 ಶಿಕ್ಷಕ ಮತದಾರರಿದ್ದು, ಮೇ 26ರಂದು ಬಿಡುಗಡೆಯಾಗಲಿರುವ ಅಂತಿಮ ಹಂತದ ಮತದಾರ ಪಟ್ಟಿಯಲ್ಲಿ ಎಷ್ಟು ಜನ ಹೊಸದಾಗಿ ಸೇರ್ಪಡೆಯಾಗಿದ್ದಾರೆ ಎಂದರು.
17,244 ಮತದಾರರಲ್ಲಿ 10,601 ಶಿಕ್ಷಕರು , 6,643 ಶಿಕ್ಷಕಿಯರು ಇದ್ದಾರೆ. ನಾಲ್ಕು ಜಿಲ್ಲೆಗಳಲ್ಲಿ ಮತದಾರರ ಸಂಖ್ಯೆಯಲ್ಲಿ ಧಾರವಾಡ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಧಾರವಾಡ ಜಿಲ್ಲೆಯಲ್ಲಿ 5,889 ಮತದಾರರಿದ್ದರೆ, ಎರಡನೇ ಸ್ಥಾನದಲ್ಲಿ ಹಾವೇರಿ ಜಿಲ್ಲೆಯಲ್ಲಿ 4,630, ಉತ್ತರ ಕನ್ನಡ ಜಿಲ್ಲೆಯಲ್ಲಿ 3,499 ಹಾಗೂ ಗದಗ ಜಿಲ್ಲೆಯಲ್ಲಿ 3,226 ಮತದಾರರು ಇದ್ದಾರೆ ಎಂದರು ತಿಳಿಸಿದರು.
ಭಾರತೀಯ ಜನತಾ ಪಕ್ಷದ ಮುಖಂಡರಾದ ಲಿಂಗರಾಜ ಪಾಟೀಲ್, ಮಹೇಶ ಟೆಂಗಿನಕಾಯಿ, ರಾಜು ಕೊರವಿ, ಭಾರತೀಯ ಜನತಾ ಪಕ್ಷದ ವಕ್ತಾರ ರವಿ ನಾಯಕ, ವಸಂತ ಹೊರಟ್ಟಿ ಮುಂತಾದವರಿದ್ದರು.
Check Also
ವಿಧಾನ ಪರಿಷತ್ ಮಾಜಿ ಸದಸ್ಯೆ ಸಾವಿತ್ರಮ್ಮ ಗುಂಡಿ ನಿಧನ
Spread the loveಹುಬ್ಬಳ್ಳಿ : ಕರ್ನಾಟಕ ರಾಜ್ಯ ಸಂಯುಕ್ತ ಜನತಾ ದಳ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ , ವಕೀಲರು ಹಾಗೂ …