ಹುಬ್ಬಳ್ಳಿ; ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ಹೃದಯ ಭಾಗವಾದ ಹಳೆ ತಹಸೀಲ್ದಾರ ಕಚೇರಿ ಸಮೀಪ ಬೈಕ್ ವೊಂದಕ್ಕೆ ಪೆಟ್ರೋಲ್ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಶನಿವಾರ ರಾತ್ರಿ ನಡೆದಿದೆ.
ನವಲಗುಂದ ಪಟ್ಟಣದ ನಿವಾಸಿ ಶೀನು ಗೊಲ್ಲರ (29) ಮೃತ ಯುವಕನಾಗಿದ್ದು ಪೆಟ್ರೋಲ್ ಟ್ಯಾಂಕರ್ ನರಗುಂದದಿಂದ ಹುಬ್ಬಳ್ಳಿ ಕಡೆಗೆ ಹೋಗುತಿತ್ತು ಬೈಕ್ ಸವಾರ ನರಗುಂದ ರಸ್ತೆಯ ಪೆಟ್ರೋಲ್ ಬಂಕ್ ಗೆ ಹೋಗುತಿದ್ದಾಗ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ನವಲಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು.
ಇನ್ನು ಮೇಲಿಂದ ಮೇಲೆ ಇದೇ ಪ್ರದೇಶದ ಹತ್ತಿರ ಅಪಘಾತ ಪ್ರಕರಣಗಳು ಹೆಚ್ಚಳದಿಂದ ಸ್ಥಳೀಯರಿ ಅಸಮಾಧಾನ ವ್ಯಕ್ತಪಡಿಸಿದರು
Check Also
ಗಾಂಜಾ ಮಾರುತ್ತಿದ್ದ 12 ಆರೋಪಿಗಳು ಬಂಧನ*. ಕಾರು, ಎರಡು ತಲ್ವಾರ್, ಡ್ರ್ಯಾಗರ್, 10 ಮೊಬೈಲ್ ಪೋನ್‌ಗಳು ವಶ. ಎನ್ ಶಶಿಕುಮಾರ್.
Spread the loveಹುಬ್ಬಳ್ಳಿ: ಇಂದು ನಗರದಲ್ಲಿ ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರ್ ಅವರು ಪತ್ರಿಕಾಗೋಷ್ಠಿ ನಡೆಸಿ ಗಾಂಜಾ ಮಾರಾಟ ಮಾಡುವ …