ಹುಬ್ಬಳ್ಳಿ: ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ವೋ ಅನ್ನೋದೇ ಗೊತ್ತಾಗುತ್ತಿಲ್ಲ ಎಂದು ಹುಬ್ಬಳ್ಳಿಯಲ್ಲಿ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಅಬ್ದುಲ್ ಜಬ್ಬಾರ್ ಹೇಳಿದರು.
ನಗರದ ಕಾರವಾರ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ್ಞಾನವ್ಯಾಪಿ ಮಸೀದಿಯಿಂದ ಹಿಡಿದು ಜಾಮೀಯಾ ಮಸೀದಿವರೆಗೆ ಬಂದು ವಿವಾದ ನಿಂತಿದೆ . ಇದು ಯಾವ ಪುರುಷಾರ್ಥಕ್ಕೆ ಎಂದು ಕಿಡಿಕಾರಿದ ಅವರು, ಅಣ್ಣ ತಮ್ಮಂದಿರ ಮಧ್ಯೆ ಜಗಳ ಹಚ್ಚಬೇಡಿ ಇದು ಒಳ್ಳೆಯ ಬೆಳವಣಿಗೆ ಅಲ್ಲಾ ಎಲೆಕ್ಷನ್ ಬರುತ್ತಿದೆ ಕಾರಣ ರಾಜಕಾರಣ ಮಾಡುವುದು ಬಿಡಬೇಕು. ಸಾಮಾದಲ್ಲಿ ಸಾಮರಸ್ಯ ಹಾಳುತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
*ಇಡೀ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇನೆ*
ನಾನು ಈಗಾಗಲೇ ರಾಜ್ಯಾದ್ಯಂತ ಸುತ್ತಾಡಿದ್ದೇನೆ. ಯಾರೇ ಧರ್ಮದ ವಿಷ ಬೀಜ ಬಿತ್ತುವರ ಕುರಿತು ಜಾಗೃತಿಯಿಂದ ಇರಬೇಕು ಎಂದು ಮನವಿ ಮಾಡಿದ್ದೇನೆ.
ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಸಹ ನಾನು ಮಾಡಿದ್ದೇನೆ ನಮ್ಮಲ್ಲಿರುವ ಒಗ್ಗಟ್ಟನ್ನ ಮುರಿಯುವ ಪ್ರಯತ್ನ ಮಾಡಬೇಡಿ ಎಂದು ಮನವಿ ಮಾಡಿದ ಅವರು,
ರಾಜಕೀಯಕ್ಕಾಗಿ ನಮ್ಮ ಮಧ್ಯೆಯೇ ಜಗಳ ಹಚ್ಚಬೇಡಿ ಇದು ತಾತ್ಕಾಲಿಕವಾಗಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
*ಅನಗತ್ತವಾಗಿ ಪಠ್ಯ ಪುಸ್ತಕದಿಂದ ವಿವಾದ ಸೃಷ್ಟಿ*
ಅನಗತ್ಯವಾಗಿ ಪಠ್ಯ ಪುಸ್ತಕ ವಿವಾದ ಮಾಡಲಾಗುತ್ತಿದೆ. ಸಿಎಂ ಇದರ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯ ಮಾಡಿದರು ಈಗಾಗಲೇ ಸಾಕಷ್ಟು ಶಿಕ್ಷಣ ವ್ಯವಸ್ಥೆ ಹಾಳಾಗುತ್ತದೆ ಇನ್ನಷ್ಟು ಹಾಳಾಗಲು ಬಿಡಬೇಡಿ ಎಂದರು.
*ನಾಲ್ಕು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವ ವಾತಾವರಣ ಇದೆ*
ಎಂಎಲ್‌ಸಿ ಚುನಾವಣೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ
ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಅಬ್ದುಲ್ ಜಬ್ಬಾರ್
ಕಾಂಗ್ರೆಸ್ ಬಗ್ಗೆ ಒಳ್ಳೆಯ ವಾತಾವರಣ ಇದ್ದು ನಾಲ್ಕು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವ ವಾತಾವರಣ ಇದೆ .ಇದರಲ್ಲಿ ಯಾವುದೇ ಅನುಮಾನ ಬೇಡಾ ಎಂದ ಅವರು ಪಶ್ಚಿಮ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ್ ಗುರಿಕಾರ್ ಗೆಲ್ಲುವ ನಿರೀಕ್ಷೆ ಇದೆ ಎಂದರು.
*ಶ್ರೀರಾಮ ಸೇನೆ ಸೇರಿದಂತೆ ಪ್ರಚೋದಿತ ಸಂಘಟನೆಯ ಯನ್ನ ಬ್ಯಾನ್ ಮಾಡಬೇಕು*
ಜಾಮೀಯಾ ಮಸೀದಿ ವಿಚಾರ ಕುರಿತು ಮಾತನಾಡಿದ ಅವರುಒಂದೆಡೆ ದೇವಸ್ಥಾನದಲ್ಲಿ ಪೂಜೆ ನಡೆಯುತ್ತಿದೆಮತ್ತೊಂದೆಡೆ ನಮಾಜ್ ಮಾಡಲಾಗುತ್ತಿದೆ ಇದು ಒಳ್ಳೆಯ ಬೆಳವಣಿಗೆ ಅಲ್ವಾ.
ಚುನಾವಣೆ ಬಂದಾಗ ಗೊಂದಲ ಸೃಷ್ಟಿ ಆಗುತ್ತಿದೆ ಮಾಡಲಾಗುತ್ತಿದೆ. ಕಾರಣಶ್ರೀರಾಮ ಸೇನೆ ಸೇರಿದಂತೆ ಪ್ರಚೋದಿತ ಸಂಘಟನೆಯ ಯನ್ನ ಬ್ಯಾನ್ ಮಾಡಬೇಕು ಎಂದರು.
ನಾವು ನಮ್ಮ ಜವಾಬ್ದಾರಿ ಯಿಂದ ನಡೆಯುತ್ತಿದ್ದೇವೆ. ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ಆದೇಶವನ್ನ ಪಾಲನೆ ಮಾಡಬೇಕು ಎಂದಿದ್ದೇನೆ. ನಮ್ಮಲ್ಲೆ ಕೇಲರಿಂದ ಗೊಂದಲ ಸೃಷ್ಟಿ ಆಗುತ್ತಿದೆ ಇದು ಮೊದಲು ಹೋಗಬೇಕು ಎಂದರು.
ನಮ್ಮ ಸಮಾಜದಲ್ಲಿನ ಕೆಲವು ಜನ ಧರ್ಮ ಧರ್ಮ ಮಧ್ಯೆ ಜಗಳ ಹಚ್ಚುವ ರೀತಿಯಲ್ಲಿ ಪ್ರಚೋದನೆ ಕೊಡುತ್ತಿದ್ದಾರೆ ಅಸಮಾಧಾನ ವ್ಯಕ್ತಪಡಿಸಿದರು
ನಮ್ಮ ನಾಯಕರು ಸೇರಿ ಬೇರೆ ಬೇರೆ ಪಕ್ಷದವರು ಪ್ರಚೋದನೆ ಕೊಡಬಾರದು ಅಂತಿದ್ದಾರೆ, ಸಿದ್ದರಾಮಯ್ಯ ಪ್ಯಾಂಟ್ ತಾವು ಹಾಕಿಕೊಂಡು ಚೆಡ್ಡಿ ಮಾತ್ರ ಅಲ್ಪಸಂಖ್ಯಾತ ರಿಗೆ ಕೊಟ್ಟಿದ್ದಾರೆ ಅನ್ನೋ ವಿಚಾರ ಕುರಿತು ಮಾತನಾಡಿದ ಅವರು,ಇಬ್ರಾಹಿಂಗೂ ಚೆಡ್ಡಿ ಹಾಕಿದ್ದೆ ಸಿದ್ದರಾಮಯ್ಯ. ಇಬ್ರಾಹಿಂ ಅದನ್ನ ನೆನಪು ಮಾಡಿಕೊಳ್ಳಲಿ ಇದು ಸರಿಯಲ್ಲ ಗಂಗಾವತಿಯಲ್ಲಿ ಸೋತು ಬಂದಾಗ ಇಬ್ರಾಹಿಂ ಅವರನ್ನ ಎಂಎಲ್ ಸಿ ಮಾಡಿದ್ದೇ ಸಿದ್ದರಾಮಯ್ಯನವರು
ಸಿ ಎಂ. ಇಬ್ರಾಹಿಂ ಅಧಿಕಾರ ಸಿಕ್ಕರೆ ಸಿದ್ದರಾಮಯ್ಯ ಅಂತಿದ್ರು.
ಅಧಿಕಾರ ಸಿಗದೇ ಸಿದ್ದರಾಮಯ್ಯ ಅಲ್ಲ ಅಂದಿದ್ದಾರೆ
ಸಿಎಂ ಇಬ್ರಾಹಿಂಗೆ ಎಂಎಲ್ ಸಿ ಅಬ್ದುಲ್ ಜಬ್ಬಾರ್ ಟಾಂಗ್ ನೀಡಿದರು.
