Breaking News

ಪಿಎಸ್ ಐ ಹುದ್ದೆ ವಂಚಿತರಾದ ಅಭ್ಯರ್ಥಿಗಳು ಮನವಿ ಕೊಡಲು ಬಂದಿಲ್ಲ, ರೌಡಿಸಂ ತರ ನಡೆದುಕೊಳ್ಳಲು ಬಂದವರು – ಮಾಜಿ ಮುಖ್ಯಮಂತ್ರಿ

Spread the love

ಧಾರವಾಡ; ಪಿಎಸ್ ಐ ಹುದ್ದೆಗೆ ವಂಚಿತರಾದ ಅಭ್ಯರ್ಥಿಗಳು ಮನವಿ ಕೊಡಲು ಬಂದಿಲ್ಲ, ಅವರು ರೌಡಿಸಂ ತರ ನಡೆದುಕೊಳ್ಳಲು ಬಂದವರು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕಿಡಿ ಆಕ್ರೋಶ ವ್ಯಕ್ತಪಡಿಸಿದರು. ‌
ತಮ್ಮ ಕಾರ್ ಗೆ ಮುತ್ತಿಗೆ ವಿಚಾರ ಪ್ರತಿಕ್ರಿಯೆ ನೀಡಿದ ಅವರು, ನೊಂದವರು
ಮನವಿ ಕೊಡಲಿಕ್ಕೆ ಹೀಗೆ ಬರ್ತಾರಾ..? ಎಂದು ಪ್ರಶ್ನೆ ಮಾಡಿದ ಅವರು,
ಯಾರೋ ಉದ್ದೇಶ ಪೂರ್ವಕವಾಗಿ ಕಳಿಸಿಕೊಟ್ಟಿದ್ದಾರೆ ನೋಡೋಣ
ನಾನು ಬಹಳ ದಿನದಿಂದ ನೋಡಿದ್ದೇನೆ, ಬಿಜೆಪಿ ನಾಯಕರಿಗೆ ಹೇಳಿದ್ದೇನೆ ಈ ಆಟ ನಡೆಯಲ್ಲ ಎಂದ ಅವರು,
ಅವರನ್ನ ಯಾರೋ ಉದ್ದೆಶಪೋರ್ವಕವಾಗಿ ಕಳಸಿದ್ದಾರೆ ಎಂದರು.
*ಯಾರೋ ಒಬ್ಬ ಬಂದು 56 ಸಾವಿರ ಜನ ಮಾನಸಿಕವಾಗಿದ್ದಾರೆ ಅಂತ ಹೇಳುತ್ತಾರೆ* ?
ಮೊದಲೇ ನಾನು ಇಬ್ಬರ ಮನವಿಯನ್ನ ಸ್ವೀಕರಿದ್ದೇನೆ ಆದರೆ ಯಾರೋ ಒಬ್ಬ ಬಂದು 56 ಸಾವಿರ ಜನ ಮಾನಸಿಕವಾಗಿದ್ದಾರೆ ಅಂತ ಹೇಳುತ್ತಾರೆಯೇ ತೀರಾ ನಂಬಲು ಅಸಾಧ್ಯವಾದ ಮಾತು. ಇನ್ನು ನನ್ನ ಕಾರ ಮೇಲೆ ಗಲಭೆ ಕೊರರಂತೆ ನುಗ್ಗಿದ್ದಾರೆ ಯಾರವರು ಎಂದು ಪ್ರಶ್ನೆ ಮಾಡಿದ ಕುಮಾರಸ್ವಾಮಿ ಅವರು ಸರ್ಕಾರ ಈಗಾಗಲೇ ಪರೀಕ್ಷೆ ರದ್ದು ಮಾಡಿದೆ ಈ ಬಗ್ಗೆ ನಾನು ಸಹ ಧ್ನನಿ ಎತ್ತಿದ್ದೇನೆ. ಆದರೆ ಸರ್ಕಾರ ನಂದಿಲ್ಲ ನಾನ್ ಹೇಗೆ ನ್ಯಾಯ ಕೊಡಲಿಕ್ಕೆ ಬರುತ್ತದೆ ಮನವಿ ಕೊಡಲಿಕೆ ಬರುವವರು ವಾಹನದ ಮೇಲೆ ಹೀಗೆ ನುಗ್ತಾರಾ ಇದು ಯಾವ ರೀತಿ ಮನವಿ ಎಂದ ಅವರು ಮೊದಲ ಗೃಹ ಸಚಿವರಿಗೆ ಸರಿಯಾಗಿ ಭದ್ರತೆ ಕೊಡಲಿಕ್ಕೆ ಹೇಳಿ‌‌ ಎಂದು ಖಾರವಾಗಿ ಒತ್ತಾಯ ಮಾಡಿದ ಅವರು,
ಪೊಲೀಸರು ನನಗೆ ಸರಿಯಾಗಿ ಭದ್ರತೆ ಕೊಟ್ಟಿಲ್ಲ‌ ಎಂದು ಗಂಭೀರ ಸ್ವರೂಪದ ಆರೋಪ ಮಾಡಿದ ಕುಮಾರಸ್ವಾಮಿ ಅವರುನನ್ನ ಕಾರಿಗೆ ಮುತ್ತಿಗೆ ಹಾಕಲು ಯಾರು ಕಳಿಸಿದ್ದಾರೆ ನೋಡೊಣ ಎಂದರು.
*ಮೋದಿ ಮೋದಿ ಅಂತ ಘೋಷಣೆ ಹಾಕ್ತಾರೆ, ಮೋದಿ ಹತ್ರ ಹೋಗಿ ನ್ಯಾಯ ಕೇಳಲಿ ಎಂದು ಆಕ್ರೊಶದಿಂದ ಹೇಳಿದ ಕುಮಾರಸ್ವಾಮಿ,*
ಮಾತು ಮಾತಿಗೆ ಇವರು ಮೋದಿ ಮೋದಿ ಅಂತ ಘೋಷಣೆ ಹಾಕ್ತಾರೆ, ಮೋದಿ ಹತ್ರ ಹೋಗಿ ನ್ಯಾಯ ಕೇಳಲಿ ಎಂದು ಆಕ್ರೊಶದಿಂದ ಹೇಳಿದ ಕುಮಾರಸ್ವಾಮಿ, ಯಾವ ದುರುದ್ದೇಶ ಇದೆ ಇದು ಪರಿಶೀಲನೆ ಮಾಡಬೇಕು ಎಂದರು.


Spread the love

About Karnataka Junction

    Check Also

    ನೇಹಾ ಕೊಲೆ‌ ಪ್ರಕಾರಣ: ಕೊಲೆ ಆರೋಪಿ ಫಯಾಜ್ ಕೊಲೆಯಾದ ಸ್ಥಳಕ್ಕೆ ಮಹಜರು

    Spread the loveಹುಬ್ಬಳ್ಳಿ: ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣ ವಿಚಾರವಾಗಿ ತನಿಖೆ ಚುರುಕು ಪಡೆದಿದ್ದು ನೇಹಾ ಕೊಲೆ ಆರೋಪಿ ಫಯಾಜ್ …

    Leave a Reply

    error: Content is protected !!