ಹುಬ್ಬಳ್ಳಿ: ಅಮೇರಿಕಾದ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಪ್ರತಿಷ್ಠಿತ ಸೇಂಟ್ ಮದರ್ ಥೆರೇಸಾ ವಿಶ್ವವಿದ್ಯಾಲಯ ದಿಂದ ಹುಬ್ಬಳ್ಳಿಯಎಸ್. ಎಸ್. ಕೆ ಸಮಾಜದ ಹಿರಿಯರು, ಸಮಾಜ ಸೇವಕರು, ಸಾಧಕರು, ಧರ್ಮಧರ್ಶಿಗಳಾದ ನೀಲಕಂಠಸಾ ಜಡಿ* ಅವರ ಸಮಾಜ ಸೇವೆಯಲ್ಲಿ ಗಣನೀಯ ಸೇವೆಯನ್ನು ಪರಿಗಣಿಸಿ ಗೌರವಡಾಕ್ಟರೇಟ್ ಪ್ರಶಸ್ತಿಯನ್ನು ನೀಡಿ ಗೌರವಿಸಿದ ಹಿನ್ನೆಲೆಯಲ್ಲಿ ನಗರದ ಶ್ರೀ ತುಳಜಾ ಭವಾನಿ ದೇವಸ್ಥಾದ ದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿಹುಬ್ಬಳ್ಳಿ ಧಾರವಾಡ ವಿಧಾನಸಭಾ ಕ್ಷೇತ್ರ ಸೆಂಟ್ರಲ್ 73 ಗ್ರಾಮೀಣ ಜೆಡಿಎಸ್ ಅಧ್ಯಕ್ಷರಾದ ರಾಜು ಅನಂತಸಾ ನಾಯಕವಾಡಿ ಅವರು ಶಾಲು ಹೊದಿಸಿ, ಹೂಮಾಲೆ ಹಾಕಿ, ಸಿಹಿ ತಿನ್ನಿಸುವ ಮೂಲಕ ಸನ್ಮಾನಿಸಿದರು.
ತಮಿಳುನಾಡು ರಾಜಧಾನಿ ಚೆನೈನ ಪಂಚರಾತಾ ಹೊಟೇಲ್ ಹಿಲ್ಟನ್ ನಲ್ಲಿ ದಿ. 29/05/2022 ರಂದು ಜರುಗಿದ ವೈಭಯುತ ಸಮಾರಂಭದಲ್ಲಿ ಎಸ್ ಎಂ ಟಿಯು ನ ವಿಜ್ಞಾನಿ – ಪ್ರಧಾನ ಶಿಕ್ಷಣಾಧಿಕಾರಿಗಳಾದ ಎನ್ ಪ್ರಭಾಕರನ್ ಹಾಗೂ ಚೇರ್ಮನ್ ಹುಮಾ ಆಸ್ಪತ್ರೆಯ ಕುಲಪತಿಗಳಾದ ಡಾ. ಹಿಸಾಮುದ್ಧೀನ ಪಾಪಾ ಅವರಿಂದ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಸ್ವಿಕರಿಸಿದ ನೀಲಕಂಠಸಾ ಜಡಿ* ಅವರು ಮತ್ತಷ್ಟು ಸಮಾಜ ಸೇವೆಯಲ್ಲಿ ಸಾಧನೆ ಗೈಯುವ ಶಕ್ತಿಯನ್ನು ದೇವರು ಕರುಣಿಸಲಿ. ಇನ್ನಷ್ಟು ಪ್ರಶಸ್ತಿಗಳು ಅವರ ಮುಡಿಗೇರಲಿ. SSK ಸಮಾಜದ ಕೀರ್ತಿ ದೇಶ ವಿದೇಶಗಳಲ್ಲಿ ಬೆಳಗಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಪಶ್ಚಿಮ ಪದವಿಧರರ ಕ್ಷೇತ್ರ ಚುನಾವಣೆ 2022 ಜೆಡಿಎಸ್ ಅಭ್ಯರ್ಥಿಯಾದ ಶ್ರೀಶೈಲ ಗಡದಿನ್ನಿ ಅವರು ನೀಲಕಂಠಸಾ ಜಡಿ ಅವರನ್ನು ಸನ್ಮಾನಿಸಿದರು.
ಸನ್ನಾನ ಸ್ವೀಕರಿಸಿದ ಶ
ನೀಲಕಂಠಸಾ ಜಡಿ ಅವರು, ಶ್ರೀಶೈಲ ಗಡದಿನ್ನಿ ಅವರ ಗೆಲುವಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಎಸ್ ಎಸ್ ಕೆ ಸಮಾಜದ ಮುಖಂಡರಾದ ಎನ್.ಎನ್. ಖೋಡೆ, ಭಾಸ್ಕರ್ ಜಿತೂರಿ, ಶ್ರೀಕಾಂತ ಹಬೀಬ, ಎನ್.ಎನ್.ಖೋಡೆ, ರಾಜು ಲದವಾ, ಜೆಡಿಎಸ್ ಮುಖಂಡರಾದ ಬಾಳು ದಾನಿ, ತುಳಸಿದಾಸ ಖೋಡೆ, ಶಂಕರಸಾ ಪವಾರ, ಹನಮಂತಸಾ ಬದ್ದಿ, ವಿಷ್ಣು ಸೊಳಂಕೆ, ರಾಜು ಮಾಮರಡಿ,
ಜಿಲ್ಲಾಧ್ಯಕ್ಷರಾದ ರೇಖಾ ನಾಯ್ಕರ, ರತ್ತಾ ಬದ್ದಿ, ಆರ್. ರಂಜನ್, ಸರಸ್ವತಿ ಕಟ್ಟಿಮನಿ, ಪರಶುರಾಮ ಲದವಾ, ಯಮುನಾ ಬದ್ದಿ, ಪೂಜಾ ಸಂತೋಷ ಕಾಟವೆ, ರೇಣುಕಾ ನಾರಾಯಣಸಾ ಜಿತೂರಿ, ಸಾವಿತ್ರಿಬಾಯಿ ಬಾಕಳೆ, ಅನ್ನಪೂರ್ಣ ಸಾಳೊಂಕೆ ಸೇರಿದಂತೆ ಜೆಡಿಎಸ್ ಪಕ್ಷದ ಮುಖಂಡರು, ಮಹಿಳೆಯರು ಹಾಗೂ ಎಸ್.ಎಸ್.ಕೆ ಸಮಾಜದ ಹಿರಿಯರು, ಮುಖಂಡರು, ಮಹಿಳೆಯರು ಸೇರಿದಂತೆ ನೂರಾರು ಯುವಕರು ಉಪಸ್ಥಿತರಿದ್ದರು.
Check Also
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಸಬಲೀಕರಣದ ಮುಖ್ಯ ಉದ್ದೇಶ – ರಾಜಣ್ಣ ಕೊರವಿ
Spread the loveಹುಬ್ಬಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಸಬಲೀಕರಣದ ಮುಖ್ಯ ಉದ್ದೇಶ ಆಗಿದೆ ಎಂದು ಶ್ರೀ …