ಹುಬ್ಬಳ್ಳಿ: ನಾನು ಎರಡನೇ ಪ್ರಯತ್ನದಲ್ಲಿ ಐಎಎಸ್ ಪಾಸಾಗಿದ್ದು ಸಂತಸ ತಂದಿದ್ದ ನನ್ನಕ್ಕಿಂತಲೂ ಟಾಲೆಂಟ್ ವಿದ್ಯಾರ್ಥಿಗಳು ಇದ್ದಾರೆ- ನಾನು ನಿಜಕ್ಕೋ ಲಕ್ಕಿ- ತಪ್ಸೀನಬಾನುಗೆ ಹೀಗೆ ಮಾತನಾಡುತ್ತಾ ಘಂಟಿಕೇರಿಯ ಪರಿಸರ ಹೊಸ ಆಯಾಮ ನೀಡಿತು ಯುಪಿಎಸ್ ಸಿ ಪರೀಕ್ಷೆಯಲ್ಲಿ 482ನೇ ರ‍್ಯಾಂಕ್ ಪಡೆದ ನಂತರ ಹುಟ್ಟರು ಹುಬ್ಬಳ್ಳಿಗೆ ಆಗಮಿಸಿದ್ದು ಹೊಸ ಪುಳಕ ನೀಡಿದೆ ಎಂದರು.
ಇನ್ನು ರಾಜ್ಯದ
ಏಕೈಕ ಮುಸ್ಲಿಂ ವಿದ್ಯಾರ್ಥಿನಿ ಎಂಬ ಹೆಮ್ಮೆಯ ಗರಿ ಇವಳಿಗೆ ಇದೆ.
ಘಂಟಿಕೇರಿ ದೊಡ್ಡಮನಿ ಕಾಲೋನಿ ನಿವಾಸಿ ತಪ್ಸೀನಬಾನು ದಾವಡಿ ಯುಪಿಎಸ್ ಸಿ ಪರೀಕ್ಷೆಯಲ್ಲಿ 482ನೇ ರ‍್ಯಾಂಕ್ ಪಡೆದು ಆಗಮಿಸುತಿದ್ದಂತೆ ಮನೆ ಮತ್ತು ಸುತ್ತಮುತ್ತ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಕೇಂದ್ರೀಯ ಲೋಕಸೇವಾ ಆಯೋಗವು ನಡೆಸುವ ದೇಶದ ಅತ್ಯುನ್ನತ ನಾಗರೀಕ ಸೇವೆಗಳ ನೇಮಕಕ್ಕೆ 2021ನೇ ಸಾಲಿನಲ್ಲಿ ನಡೆಸಿದ ಪರೀಕ್ಷೆಯ ಮೇನ್ ದಲ್ಲಿ ಮೊದಲ ಪ್ರಯತ್ನದಲ್ಲೇ ತಪ್ಸೀನ ಬಾನು 482ನೇ ರ‍್ಯಾಂಕ್ ಬಂದ ಕುರಿತು ಸಹ ತಮ್ಮ ಪ್ರಯತ್ನ ಕುರಿತು ಮಾತನಾಡಿದರು
ದೊಡ್ಡಮನಿ ಕಾಲೋನಿಯ ಖಾದರ ಬಾಷಾ ಹಾಗೂ ಹಸೀನ ಬೇಗಂ ದಂಪತಿಯ ಪುತ್ರಿ ತಪ್ಸೀನ ಬಾನು ಯುಪಿಎಸ್ಸಿಯಲ್ಲಿ ಉತ್ತೀರ್ಣರಾಗಿರುವ ರಾಜ್ಯದ ಏಕೈಕ ಮುಸ್ಲಿಂ ವಿದ್ಯಾರ್ಥಿನಿಯಾಗಿದ್ದಾರೆ.
ಪ್ರಾಥಮಿಕ ಶಿಕ್ಷಣವನ್ನು ರೈಲ್ವೆಯ ವುಮೆನ್ಸ್ ಆರ್ಗನೈಸೇಷನ್ ಸ್ಕೂಲ್ ನಲ್ಲಿ, ಪ್ರೌಢ ಶಿಕ್ಷಣವನ್ನು ಕೇಶ್ವಾಪುರದ ಫಾತಿಮಾ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪಿಯುಸಿ ಶಿಕ್ಷಣವನ್ನು ವಿದ್ಯಾನಗರದ ವಿದ್ಯಾನಿಕೇತನ ವಿಜ್ಞಾನ ಪಿಯು ಕಾಲೇಜ್ ನಲ್ಲಿ, ನಂತರ ಧಾರವಾಡ ಕೃಷಿ ವಿವಿಯಲ್ಲಿ ಬಿಎಸ್ಸಿ ಪದವಿ ಪಡೆದಿದ್ದಾರೆ.
ಜನರ ಸೇವೆ ಮಾಡಬೇಕೆಂಬ ಉದ್ದೇಶದಿಂದ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಿದ ಇವರು ಮೊದಲು ಮುಂಬಯಿಯ ಹಚ್ ಹೌಸ್ ನಲ್ಲಿ ಪ್ರಿಲಿಮ್ಸ್ ತರಬೇತಿ ಪಡೆದುಕೊಂಡರು. ನಂತರ ಮೇನ್ಸ್ ಗೆ ತಯಾರಿ ಮತ್ತು ಸಂದರ್ಶನ ತರಬೇತಿಯನ್ನು ದೆಹಲಿಯ ಜಾಮೀಯಾ ವಿಶ್ವವಿದ್ಯಾಲಯದಲ್ಲಿ ಪಡೆದುಕೊಂಡರು. ಪ್ರಥಮ ಬಾರಿಗೆ ಮೇನ್ಸ್ ಬರೆದು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದರು
Check Also
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ಶಶಿಕುಮಾರ್ ನೇಮಕ
Spread the loveಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. …