ಹುಬ್ಬಳ್ಳಿ; ಆಜಾನ್ ಕುರಿತು ಸರ್ಕಾರ ಗಂಭೀರ ಕ್ರಮಕೈಗೊಳ್ಳಬೇಕು ಎಂದು
ವಿಶ್ವ ಹಿಂದು ಪರಿಷದ್ ಕೇಂದ್ರ ಮಹಾಮಂತ್ರಿ ಮಿಲಿಂದ್ ಪರಾಂಡೆ ಅಭಿಪ್ರಾಯಪಟ್ಟರು.
ನಗರದ ವಿದ್ಯಾನಗರದಲ್ಲಿನ ಶಿರೂರ ಪಾರ್ಕ್ ಹಿಂದುಗಡೆ ಇರುವ ಪುರುಷೋತ್ತಮನಗರದಲ್ಲಿನ ವಿಶ್ವ ಹಿಂದು ಪರಿಷದ್ ಉತ್ತರ ಕರ್ನಾಟಕ ಟ್ರಸ್ಟ್ ನ ಪ್ರೇರಣಾ ಸೇವಾ ಸಂಸ್ಥೆ
ವತಿಯಿಂದ ಆಯೋಜಿಸಿದ್ದ ವಿಶ್ವ ಹಿಂದು ಪರಿಷದ್ ನ ನೂತನ ಕಟ್ಟಡದ ಧರ್ಮಸಿರಿ ಕಚೇರಿ ಉದ್ಘಾಟನೆ ಸಮಾರಂಭದ ನಂತರ ಅವರು ಮಾತನಾಡಿದರು .
ಇದೊಂದು ಅತ್ಯಂತ ಮಹತ್ವದ ವಿಷಯ ಇದನ್ನು ಸರ್ಕಾರ ಹಗರುವಾಗಿ ತೆಗೆದುಕೊಳ್ಳಬಾರದು ಎಂದರು.
ರಾಷ್ಟ್ರ ಹಾಗೂ ಹಿಂದೂ ಜಾಗೃತಿ ಕಾರ್ಯದಲ್ಲಿ ವಿಶ್ವ ಹಿಂದು ಪರಿಷದ್ ಕಾರ್ಯ ಮೆಚ್ಚುಗೆಗೆ ಪಡೆದಿದೆ ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ ತೀರ್ಥ ಮಹಾಸ್ವಾಮಿಗಳು ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು .
ವಿಶ್ವ ಹಿಂದು ಪರಿಷದ್
ಹಲವು ದಶಕಗಳಿಂದ ಮೌನ ತಪಸ್ಸಿನಂತೆ ಕಾರ್ಯ ನಿರತವಾಗಿದೆ. ರಾಷ್ಟ್ರ ಹಾಗೂ ಹಿಂದೂ ಜಾಗೃತಿ ಕಾರ್ಯದಲ್ಲಿ ವಿಎಚ್ ಪಿ ಹಲವು ದಶಕಗಳಿಂದ ತನ್ನದೇ ಆದ ಸಿದ್ಧಾಂತ ಮೂಲಕ ಕಾರ್ಯ ನಿರತವಾಗಿದೆ.
ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗಿಂದ್ರ ಮಹಾಸ್ವಾಮಿಗಳು, ಚಿತ್ರದುರ್ಗದ ಶಿವಶರಣ ಮಾದಾರ ಚೆನ್ನಯ್ಯಾ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯಾ ಸ್ವಾಮೀಜಿ, ಕನ್ನೇರಿಮಠದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಮಹಾಸ್ವಾಮಿಗಳು, ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು, ಗದಗ ಶಿವಾನಂದ ಮಠದ ಸದಡಶಿವಾನಂದ ಮಹಾಸ್ವಾಮಿಗಳು, ವಿಜಯಪುರದ ಬಂಜಾರ ಶಂಕರಲಿಂಗ ಗುರುಪೀಠದ ಶ್ರೀ ಸೋಮಲಿಂಗ ಮಹಾಸ್ವಾಮಿಗಳು ಸಮ್ಮುಖ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರ ಸಂಘ ಚಾಲಕರಾದ ವಿ.ನಾಗರಾಜ್, , ವಿಶ್ವ ಹಿಂದು ಪರಿಷದ್ ಪ್ರಾಂತ್ ಅಧ್ಯಕ್ಷ ಡಾ.ಎಸ್ ಆರ್.ರಾಮನ ಗೌಡರ, ಪ್ರೇರಣಾ ಸಂಸ್ಥೆ ಅಧ್ಯಕ್ಷ ಸಂಜು ಬಡಸ್ಕರ್, ವಿಶ್ವ ಹಿಂದು ಪರಿಷದ್ ಪ್ರಾಂತೀಯ ಕಾರ್ಯದರ್ಶಿ ಗೋವರ್ಧನರಾವ್, ರವಿ ನಾಯಕ,ಉಮೇಶ ದೋಶಿ, ಮುಂತಾದವರಿದ್ದರು.
ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ್, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್,
ಪಶು ಸಂಗೋಪನಾ ಸಚಿವ ಪ್ರಭು ಚಹ್ವಾನ,ಮಾಜಿ ಸಚಿವ ರಮೇಶ ಜಾರಕಿಹೊಳಿ, ಅನೇಕ ಶಾಸಕರು ಮುಖಂಡರು, ಧಾರ್ಮಿಕ ಕ್ಷೇತ್ರದ ಸಾಧಕರು, ವಿಶ್ವ ಹಿಂದು ಪರಿಷದ್ ಪ್ರಮುಖರು ಮುಂತಾದವರು ಭಾಗವಹಿಸಿದ್ದರು.
*ಚೈತನ್ಯ ಸಿಂಧು’ ಸ್ಮರಣ ಸಂಚಿಕೆ ಬಿಡುಗಡೆ* ಇದೇ ಸಂದರ್ಭದಲ್ಲಿ
ವಿಶ್ವ ಹಿಂದೂ ಪರಿಷದ್ 1964ರಲ್ಲಿ ಆರಂಭವಾಗಿ ಇಲ್ಲಿಯವರೆಗೆ ಅನೇಕ ಸೇವಾ ಹಾಗೂ ಧರ್ಮ ರಕ್ಷಣೆ ಕಾರ್ಯದಲ್ಲಿ ತೊಡಗಿದೆ. ಹೀಗೆ ಸರಿಸುಮಾರು 58 ವರ್ಷಗಳ ಸೇವಾ ಕಾರ್ಯದಲ್ಲಿ ತೊಡಗಿಕೊಂಡ ಪ್ರಮುಖರು ಹಾಗೂ ಕಾರ್ಯಕರ್ತರ ಸೇವೆ ಸ್ಮರಿಸಲು, ಹೊಸಬರಿಗೆ ಪ್ರೇರಣಾ ಶಕ್ತಿ ತುಂಬಲು ಇದೇ ವೇಳೆ “ಚೈತನ್ಯ ಸಿಂಧು’ ಸ್ಮರಣ ಸಂಚಿಕೆಯನ್ನೂ ಬಿಡುಗಡೆ ಮಾಡಲಾಯಿತು. ಸುಮಾರು 80-85 ಪುಟಗಳ ಈ ಸಂಚಿಕೆಯಲ್ಲಿ ಸಂಘಟನೆ ಬೆಳೆಯಲು ಶಕ್ತಿಯಾದವರು, ಜನರ ಸಂಕಷ್ಟ, ನೋವುಗಳಿಗೆ ಸ್ಪಂದಿಸಿ ನೆರವಾಗಿ ಸೇವಾ ಪರಂಪರೆಯನ್ನು ಕೊಡುಗೆಯಾಗಿ ನೀಡಿದ ಹಿರಿಯ ಕಾರ್ಯಕರ್ತರು, ಪ್ರಮುಖರನ್ನು ಇದರಲ್ಲಿ ಸ್ಮರಿಸಲಾಗಿದೆ.
ಉತ್ತರ ಪ್ರಾಂತದ ಕಚೇರಿ ನಿರ್ವಹಣೆಗೆ ಅನುಕೂಲವಾಗಲು ಹಾಗೂ ಇನ್ನಷ್ಟು ಸೇವಾ ಕಾರ್ಯ ವಿಸ್ತರಿಸುವ ಉದ್ದೇಶದಿಂದ “ಧರ್ಮಸಿರಿ’ ನೂತನ ಕಟ್ಟಡ ನಿರ್ಮಿಸಲಾಗಿದೆ.
*ವಿಶ್ವಹಿಂದೂ ಪರಿಷದ್ ಪ್ರಾಂತ ಕಚೇರಿ ಮಹತ್ವ*
ವಿಶ್ವಹಿಂದೂ ಪರಿಷದ್ ಪ್ರಾಂತ ಕಚೇರಿ ಹುಬ್ಬಳ್ಳಿಯಲ್ಲಿದ್ದ, “ಹಿಂದೂ ಭವನ’ದಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದರು ಸಹ ಇದರ ಸೇವಾಕಾರ್ಯ, ಕಾರ್ಯಕರ್ತರ ಸಂಖ್ಯೆ ಹೆಚ್ಚಳವಾಗಿದ್ದರಿಂದ ಜತೆಗೆ ಇನ್ನಷ್ಟು ಸೇವಾ ಕಾರ್ಯಕ್ಕೆ ಪೂರಕವಾಗುವ, ಹೆಚ್ಚಿನ ಸೌಲಭ್ಯಗಳನ್ನೊಳಗೊಂಡ ಭವನ ನಿರ್ಮಾಣವಾಗಿದೆ.
ವಿಶ್ವ ಹಿಂದೂ ಪರಿಷದ್ ಉತ್ತರ ಕರ್ನಾಟಕ ಟ್ರಸ್ಟ್, ಪ್ರೇರಣಾ ಸೇವಾ ಸಂಸ್ಥೆ ಕಾರ್ಯಕ್ಕೆ ಅನೇಕ ದೇಶಪ್ರೇಮಿ, ದಾನಿಗಳು ಕೈಜೋಡಿಸಿದ್ದರಿಂದ “ಧರ್ಮಸಿರಿ’ ಭವನ ತಲೆಎತ್ತಿದೆ. ಹುಬ್ಬಳ್ಳಿಯ ಪ್ರಾಂತ ಕಚೇರಿ ಉತ್ತರ ಕರ್ನಾಟಕದಲ್ಲಿ ವಿಎಚ್ ಪಿಯಿಂದ ನಡೆಯುವ ರಾಷ್ಟ್ರರಕ್ಷಣೆ, ಧರ್ಮರಕ್ಷಣೆ, ಶಿಕ್ಷಣ, ಆರೋಗ್ಯ ಇನ್ನಿತರೆ ಸೇವಾಕಾರ್ಯಗಳ ಬಗ್ಗೆ ಮಾರ್ಗದರ್ಶನ, ಯೋಜನೆ, ಅನುಷ್ಠಾನದ ನಿಟ್ಟಿನಲ್ಲಿ ಮಾರ್ಗದರ್ಶಿಯಾಗಿ ಕಾರ್ಯ ನಿರ್ವಹಿಸುತ್ತದೆ
ಈ ವಿಶ್ವ ಹಿಂದೂ ಪರಿಷದ್ ರಾಷ್ಟ್ರಮಟ್ಟದಲ್ಲಿ ಧಾರ್ಮಿಕ, ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡು ಬಂದಿದೆ. ನಂದಗೋಕುಲ ಹೆಸರಿನಲ್ಲಿ ಶಾಲೆಗಳಿಗೆ ಪ್ರೇರಣೆ ಹಾಗೂ ಮಾರ್ಗದರ್ಶನ ಕಾರ್ಯದಲ್ಲಿ ತೊಡಗಿದೆ. ಬೀದರ ಜಿಲ್ಲೆಯಲ್ಲಿ ಮೂರು ಕಡೆ ಶಾಲೆ ಹೊಂದಿದ್ದು, ಕಲಬುರಗಿಯಲ್ಲೂ ಶಾಲೆ ಇದೆ.
ಕಂಪ್ಯೂಟರ್, ಹೊಲಿಗೆ ತರಬೇತಿ ಸೇರಿದಂತೆ ವಿವಿಧ ಸೇವಾ ಕಾರ್ಯ ಕೈಗೊಳ್ಳುತ್ತಿದೆ. ಇಂತಹ ಸೇವಾ ಕಾರ್ಯಗಳಿಗೆ ಇನ್ನಷ್ಟು ಪ್ರೇರಣೆ ನೀಡಲು ವಿವಿಧ ಸೌಲಭ್ಯಗಳ ಭವನವನ್ನು ಹುಬ್ಬಳ್ಳಿಯಲ್ಲಿ ನಿರ್ಮಿಸಲಾಗಿದೆ.
ಬೆಂಗಳೂರಿನಲ್ಲಿ ವಿಎಚ್‌ಪಿ ಪ್ರಾಂತ ಕಚೇರಿ “ಧರ್ಮಶ್ರೀ’ ಸುಮಾರು 40 ವರ್ಷಗಳ ಹಿಂದೆಯೇ ನಿರ್ಮಾಣವಾಗಿದ್ದರೂ ಹುಬ್ಬಳ್ಳಿಯ “ಧರ್ಮಸಿರಿ’ ಕಟ್ಟಡ ರಾಜ್ಯದಲ್ಲಿಯೇ ಅತಿ ದೊಡ್ಡದಾಗಿದೆ. ನೆಲಮಹಡಿ ಸೇರಿದಂತೆ ಒಟ್ಟು ಮೂರು ಮಹಡಿಯ ಕಟ್ಟಡ ಇದಾಗಿದೆ. ಕೆಳ ಮಹಡಿ ಪೂರ್ಣ ಪ್ರಮಾಣದಲ್ಲಿ ಸೇವಾ ಚಟುವಟಿಕೆಗಳಿಗೆಂದು ಇರಿಸಲಾಗುತ್ತಿದೆ. ಇದರಲ್ಲಿ ವಿಎಚ್‌ಪಿಯ ವಿವಿಧ ಚಟುವಟಿಕೆ ಹಾಗೂ ಸೇವಾ ಕಾರ್ಯಗಳಿಗೆ ಪೂರಕ ಕೆಲಸಗಳು ನಡೆಯಲಿವೆ.
ಗ್ರಂಥಾಲಯ, ಕಂಪ್ಯೂಟರ್ ತರಬೇತಿ ಇದ್ದು, ಹೊಲಿಗೆ ತರಬೇತಿ ಆರಂಭಿಸಲು ಯೋಜಿಸಲಾಗಿದೆ. ಉಳಿದ ಎರಡು ಮಹಡಿಗಳ ಪೈಕಿ ಒಂದರಲ್ಲಿ ಪಿಯು, ಪದವಿ ಹಾಗೂ ಉನ್ನತ ಶಿಕ್ಷಣ ಪಡೆಯುವ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಸತಿ-ಊಟದ ವ್ಯವಸ್ಥೆ ಮಾಡಲಾಗುತ್ತದೆ. ಸುಮಾರು 15-20 ಬಡ ವಿದ್ಯಾರ್ಥಿಗಳಿಗೆ ಆಸರೆ ನೀಡಲಾಗುತ್ತಿದೆ. ಇನ್ನುಳಿದಂತೆ ವಿಎಚ್‌ಪಿ ಪೂರ್ಣಾವಧಿ ಕಾರ್ಯಕರ್ತರು, ಪ್ರಮುಖರ ವಾಸ್ತವ್ಯ, ಹೊರಗಡೆಯಿಂದ ಬರುವ ಕಾರ್ಯಕರ್ತರು ತಂಗಲು, ತರಬೇತಿಗೆ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
Check Also
ಹುಬ್ಬಳ್ಳಿಯಲ್ಲಿನಾಮದೇವ ಮಹಾರಾಜರ ಪುಣ್ಯತಿಥಿ ಆಚರಣೆ
Spread the loveಹುಬ್ಬಳ್ಳಿ : ಇಲ್ಲಿನ ಹುಬ್ಬಳ್ಳಿಯ ನಾಮದೇವ ದೈವಕಿ ಸಮಾಜದ ವತಿಯಿಂದ ಸಿಂಪಿಗಲ್ಲಿ ಹರಿ ಮಂದಿರದಲ್ಲಿ ಶ್ರೀ ಸಂತ …