ಹುಬ್ಬಳ್ಳಿ; ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಮತ್ತಷ್ಟು ಪರಿಣಾಮಕಾರಿಗೊಳಿಸಲು ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಬಿಜೆಪಿ ಅಬ್ಯರ್ಥಿ ಬಸವರಾಜ ಹೊರಟ್ಟಿಯವರಿಗೆ ಮತ ನೀಡುವಂತೆ ಹಾಗೂ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಮತ್ತು ಮಹಾವಿದ್ಯಾಲಯ ಶಿಕ್ಷಕ ಸಂಘ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿತು.
ಹುಬ್ಬಳ್ಳಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಮತ್ತು ಮಹಾವಿದ್ಯಾಲಯ ಶಿಕ್ಷಕ ಸಂಘದ ಮುಖಂಡ ರಘು ಅಕ್ಮಂಚಿ ಅವರು,
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗೆ ಮುಂದಾಗಿದ್ದಾರೆ. ಈ ಮೂಲಕ ಭಾರತ ವಿಶ್ವಗುರು ಆಗಲಿದೆ. ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿಶೇಷ ಪ್ರಯತ್ನದಿಂದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಪ್ರಾರಂಭವಾಗಿದ್ದು ಈ ಭಾಗದಲ್ಲಿ ಇನ್ನೂ ಅನೇಕ ಶೈಕ್ಷಣಿಕ ಚಟುವಟಿಕೆಗಳನ್ನು ಹೆಚ್ಚಾಗುವ ಬರವಡೆಯ ಪ್ರಯತ್ನ ನಡೆದಿದೆ.
ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪ ಅವರು ಮೊದಲ ಬಾರಿ ಮುಖ್ಯ ಮಂತ್ರಿಯಾಗಿದ್ದ ವೇಳೆ 1765 ಶಾಲಾ-ಕಾಲೇಜುಗಳಿಗೆ ಅನುದಾನ ನೀಡಿದರು. ಇದರಿಂದ 2500 ಕ್ಕೂ ಅಧಿಕ ಶಿಕ್ಷಕರಿಗೂ ಅನುಕೂಲವಾಯಿತು. ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದ ವೇಳೆ 5 ಮತ್ತು 6ನೇ ವೇತನ ಆಯೋಗ ಜಾರಿಗೊಳಿಸಿದರು. ಈ ಮೂಲಕ 4575ರೂ ಇದ್ದ ಶಿಕ್ಷಕರ ಮೂಲ ವೇತನ 17650=00 ಏರಿಕೆಯಾಯಿತು. ಹೀಗೆ ಶಿಕ್ಷಕರ ಅಭ್ಯುದಯಕ್ಕಾಗಿ ಬಿಜೆಪಿ ಬದ್ಧವಾಗಿದೆ ಎಂದರು.
ಇನ್ನು ಕುಮಾರ ನಾಯಕ್ ವರದಿಯನ್ವಯ ಶಾಲಾ-ಕಾಲೇಜುಗಳ ಶಿಕ್ಷಕರಿಗೆ ಒಂದು ಹೆಚ್ಚುವರಿ ವೇತನ ಬಡ್ತಿಯನ್ನು ನೀಡಿದ್ದು, ಜೆ.ಓ.ಸಿ ಸಿಬ್ಬಂದಿಗಳನ್ನು ಸರಕಾರಿ ನೌಕರರನ್ನಾಗಿ ಕಾಯಂಗೊಳಿಸಿದ್ದು ದೈಹಿಕ ಶಿಕ್ಷಣ ಶಿಕ್ಷಕರನ್ನು ಉಪನ್ಯಾಸರಾಗಿ ಮೇಲ್ದರ್ಜೆಗೇರಿಸಿದ್ದು, ಅನುದಾನಿತ ಶಿಕ್ಷಣ ಸಂಸ್ಥೆಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡಿರುವುದು ಒಳ್ಳೆಯ ಸಂಗತಿ. ದ್ವಿತೀಯ ಪಿಯುಸಿ ಮೌಲ್ಯಮಾಪಕರ ಸಂಭಾವನೆಯನ್ನು ಹೆಚ್ಚಳ ಮಾಡುವಂತಹ ಅನೇಕ ಕ್ರಮಗಳನ್ನು ಜಾರಿಗೆ ಮಾಡಿದ್ದು ಈಗಿನ ಭಾಜಪಾ ಸರಕಾರ ಆಗಿದೆ ಎಂದರು.
ಪ್ರಸ್ತುತ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು 7ನೇ ವೇತನ ಆಯೋಗದ ಸಮಿತಿಯನ್ನು ರಚಿಸಲು ಕಾರ್ಯಪ್ರವೃತ್ತರಾಗಿರುವುದು. ಕೋವಿಡ್ ಸಂದರ್ಭದಲ್ಲಿ ಅನುದಾನರಹಿತ ಶಿಕ್ಷಕರಿಗೆ ಸಹಾಯ ಧನ ಒದಗಿಸಿದ್ದು, ವಿಶೇಷವಾಗಿ ಸರಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರು ಅತಿಥಿ ಉಪನ್ಯಾಸಕರ ವೇತನವನ್ನು ಹೆಚ್ಚಳ ಮಾಡಿದೆ ಎಂದರು. ಬಾಕಿ ಉಳಿದಿರುವ ಶಿಕ್ಷಕರ ಸಮಸ್ಯಗಳ ಪರಿಹಾರಕ್ಕಾಗಿ ನಮ್ಮ ಸಂಘಟನೆ ಬಸವರಾಜ ಹೊರಟ್ಟಿಯವರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದರು.
ಮುಖಂಡರಾದ ಸಂದೀಪ ಬೂದಿಹಾಳ ಮುಂತಾದವರಿದ್ದರು.
