Breaking News

ಚಿನ್ನಿಪನ್ನಿ ದಾಂಡು ಆಟಕ್ಕೆ‌ ಓರ್ವ ಬಲಿ

Spread the love

ಹಾವೇರಿ: ಜಿಲ್ಲೆಯ ಶಿಗ್ಗಾವಿ ಪಟ್ಟಣದ ಎಪಿಎಂಸಿ ಮಾರುಕಟ್ಟೆ ಬಳಿ ಚಿನ್ನಿದಾಂಡು ಆಡುತ್ತಿದ್ದ ಐವರು ಹಾಗೂ ವಾಹನ ಮಾಲೀಕನ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ. ಉಮೇಶ್ ಶಿವಜೋಗಿ ಮಠ (40) ಮೃತ ವ್ಯಕ್ತಿ.
ಎಪಿಎಂಸಿ ಬಳಿಯ ವೇ ಬ್ರಿಡ್ಜ್ ಹತ್ತಿರ ಕೆಲವು ಹುಡುಗರು ಚಿನ್ನಿದಾಂಡು ಆಡುತ್ತಿದ್ದರು. ಈ ವೇಳೆ ಚಿನ್ನಿ, ಉಮೇಶನ ಟಿಪ್ಪರ್​ಗೆ ಬಂದು ಬಡಿದಿದ್ದು, ಜಗಳ ಶುರುವಾಗಿದೆ. ಕೋಪಗೊಂಡು ಐದಾರು ಜನ ಉಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಪರಿಣಾಮ ಉಮೇಶ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಆತನನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿಯೇ ಮೃತಪಟ್ಟಿದ್ದಾನೆ.
ಘಟನಾ ಸ್ಥಳಕ್ಕೆ ಹಾವೇರಿ ಎಸ್​ಪಿ ಹನುಮಂತರಾಯ ಹಾಗೂ ಶಿಗ್ಗಾವಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಈ ಕುರಿತು ಶಿಗ್ಗಾವಿ ಪೊಲೀಸ್​ ಠಾಣೆಯಲ್ಲಿ ಪ್ರಕರಣದಲ್ಲಿ ದಾಖಲಾಗಿದೆ.


Spread the love

About Karnataka Junction

[ajax_load_more]

Check Also

ಭವಾನಿಮಠ ಬಂಧನ

Spread the loveಹುಬ್ಬಳ್ಳಿ: ಶಾಸಕ ಪ್ರಸಾದ ಅಬ್ಬಯ್ಯ ಅವರ ಮೊಬೈಲ್ ಫೋನ್‌ಗೆ ಕರೆ ಮಾಡಿದ ವ್ಯಕ್ತಿಯೊಬ್ಬರು, ಶಾಸಕ ಹಾಗೂ ಅವರ …

Leave a Reply

error: Content is protected !!