ಹುಬ್ಬಳ್ಳಿ: ಪಠ್ಯ ಪುಸ್ತಕದಲ್ಲಿ ಶ್ರೀ
ಬಸವಣ್ಣನ ವಿಚಾರ ಕೈ ಬಿಟ್ಟ ಕುರಿತು ಮಾಹಿತಿ ಪಡೆಯುತ್ತೇನೆ ಈ ಕುರಿತು ಸಹ ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ಮಾಡುತ್ತೇನೆ ಎಂದು
ಮಾಜಿ ಸಿಎಂ ಜಗದೀಶ್ ಶೆಟ್ಟರ್
ಹೇಳಿದರು
ನಗರದ ಕುಸುಗಲ್ ರಸ್ತೆ ಶ್ರೀನಿವಾಸ ಗಾರ್ಡನ್ ಬಳಿ ಮಾತನಾಡಿದ ಅವರುಯಾವುದನ್ನು ಮಕ್ಕಳು ಓದುತ್ತಾರೆಯೋ ಅದೇ ಪಠ್ಯದಲ್ಲಿ ಇರಬೇಕು ಹೊರತು ಯಾವುದೇ ಸಿದ್ದಾಂತವನ್ನು ಪಠ್ಯದಲ್ಲಿ ಅಳವಡಿಸುವುದು ತಪ್ಪು ಎಂಬುದೇ ನಮ್ಮ ನಿಲುವು ಇದು ನಾನು ಸಹ ಹೇಳುತ್ತೇನೆ ಶಿಕ್ಷಣ ಸಚಿವರು ಹೇಳುತ್ತಾರೆ. ಆದರೆ ಪಠ್ಯದಲ್ಲಿ ಯಾವ ಕಾರಣಕ್ಕೆ ಬಸವಣ್ಣನವರ ಅ ವಿಚಾರ ಕೈ ಬಿಟ್ಟ ಕುರಿತು ಸರಿಯಾದ ಮಾಹಿತಿ ನನಗೆ ಇಲ್ಲ ಶೀಘ್ರದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆಗೆ ಮಾತನಾಡುತ್ತೇನೆ ಎಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ನನಗೆ ಯಾವ ಕಾರಣಕ್ಕೆ ಮತ್ತು ಎಲ್ಲಿ ಲೋಪವಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲಾ.ಈಗಾಗಲೇಈ ಬಗ್ಗೆ ಮಾಹಿತಿ ಕೇಳಿದ್ದೇನೆ. ಇನ್ನು ಹೆಚ್ಚಿನ ಮಾಹಿತಿಯನ್ನು ತರಲು ಸಹ ಹೇಳಿದ್ದೇನೆ ಲಿಂಗಾಯತ ಮಠಾಧೀಶರರು ಯಾವ ಕಾರಣಕ್ಕೆ ಪತ್ರ ಬರೆದಿದ್ದಾರೆ ಎಂಬ ಸಂಪೂರ್ಣ ಮಾಹಿತಿ ನನಗೆ ಇಲ್ಲಾ ಎಂದರು.
*ಭಾರೀ ವಿವಾದ*
ನಾಡಗೀತೆ ಬಗ್ಗೆ ಕೆಟ್ಟದಾಗಿ 2017ರಲ್ಲಿ ಬರೆದ ಮೆಸೇಜ್ ಅನ್ನು ರೋಹಿತ್ ಚಕ್ರತೀರ್ಥ ಪಾರ್ವರ್ಡ್ ಮಾಡಿದ್ದಾರೆ. ಫಾರ್ವರ್ಡ್ ಮಾಡುವಾಗಲೇ ಅದು ಫಾರ್ವರ್ಡ್ ಮೆಸೇಜ್ ಅಂತ ಉಲ್ಲೇಖಿಸಿದ್ದರು. ಆದರೆ, ಅಂದಿನ ಸರ್ಕಾರ ಅವರ ಮೇಲೆ ಕೇಸ್ ಬುಕ್ ಮಾಡಿತ್ತು. ಆದರೆ, ಬಿ ರಿಪೋರ್ಟ್ ಕೂಡಾ ಹಾಕಲಾಗಿತ್ತು. ನಾನು ಬರೆದಿದ್ದು ಅಲ್ಲ ಫಾರ್ವರ್ಡ್ ಮಾಡಿದ್ದು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಈಗಲೂ ಅವರು ಸ್ಪಷ್ಟನೆ ನೀಡುತ್ತಿದ್ದಾರೆ. ಆದರೂ ಅವರು ಅವಮಾನಿಸಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ ಇದು ಸಹ ಈಗ ಸುದೀರ್ಘವಾಗಿ ಚರ್ಚೆ ನಡೆಯಬೇಕಾಗಿದೆ.
ಶಿಕ್ಷಣ ಕ್ಷೇತ್ರವನ್ನು ರಾಜಕೀಯ ಮಾಡುವುದು ತಪ್ಪು. ವಿರೋಧ ಮಾಡುವವರು ಕಳೆದ ಒಂದು ತಿಂಗಳ ಹಿಂದಿನಿಂದಲೇ ವಿರೋಧ ಮಾಡುತ್ತಿದ್ದಾರೆ. ಹಾಗೂ ದಿನಕ್ಕೊಂದು ವಿಚಾರ ಇಟ್ಟು ವಿರೋಧ ಮಾಡುತ್ತಿದ್ದಾರೆ. ಮೊದಲಿಗೆ ಟಿಪ್ಪು, ಬಳಿಕ ಕೇಸರೀಕರಣ, ಭಗತ್ ಸಿಂಗ್ ಪಠ್ಯ ತೆಗೆದರು. ಹೀಗೆ ಪ್ರತಿದಿನ ಒಂದೊಂದು ವಿಚಾರ ಇಟ್ಟು ವಿವಾದ ಮಾಡುತ್ತಿದ್ದಾರೆ ಕುರಿತು ಜಗದೀಶ್ ಶೆಟ್ಟರ್ ಅವರಿಂದ ಸಮಪೃಕವಾದ ಮಾಹಿತಿ ಬರೆಲಿಲ್ಲ.
ʻಯಾರೇ ಅಕ್ರಮವಾಗಿ ಆಸ್ತಿ ಅಥವಾ ಏನೇ ಮಾಡಲಿ ಅದಕ್ಕಾಗಿ ಐಟಿ-ಇಡಿ ಇವೆ.ಯಾರ ಅದೊಂದು ಸ್ವತಂತ್ರ ಸಂಸ್ಥೆ. ಈಗ ಆಗಿರುವ ದಾಳಿಯು ರಾಜಕೀಯ ಪ್ರೇರಿತ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟರು.
ಹಲವಾರ ಮೇಲೆ ಐಟಿ ಇಡಿ ದಾಳಿ ನಡೆದಿರುವ ಗೊತ್ತಿದ್ದ ವಿಷಯ. ಯಾವುದೇ ಪಕ್ಷ ಪಂಗಡವನ್ನು ಗುರಿಯಾಗಿಸಿಕೊಂಡು ದಾಳಿ ನಡೆದರೆ ರಾಜಕೀಯ ಪ್ರೇರಿತ ಅನ್ನುತ್ತಾರೆ. ಯಾರ ಬಳಿ ಅಕ್ರಮವಾಗಿ ಸಂಪಾದಿಸಿದ ಹಣ ಇರುತ್ತದೆಯೋ ಅವರ ಮೇಲೆ ದಾಳಿ ನಡೆಯುವುದು ಸಹಜವೇ ಆಗಿದೆ ಎಂದರು.
