Breaking News

ಕೇಂದ್ರದಿಂದ ಕರ್ನಾಟಕಕ್ಕೆ ₹ 8,633 ಕೋಟಿ ರೂ. ಜಿಎಸ್ ಟಿ ಪರಿಹಾರ ಮಂಜೂರು

Spread the love

ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯಕ್ಕೆ 2022ರ ಮೇ 31ರ ವರೆಗಿನ 8,633 ಕೋಟಿ ರೂ ಜಿಎಸ್​​ಟಿ ಪರಿಹಾರ ಮಂಜೂರು ಮಾಡಿದೆ. ಇದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೃತಜ್ಞತೆ ಸಲ್ಲಿಸಿದ್ದಾರೆ.
ಕೇಂದ್ರ ರಾಜ್ಯಗಳಿಗೆ ನೀಡಬೇಕಾದ 86,912 ಕೋಟಿ ರೂ. ಜಿಎಸ್​​ಟಿ ಪರಿಹಾರ ನೀಡಿದೆ. ಈ ಪೈಕಿ 8,633 ಕೋಟಿ ರೂ.ಪರಿಹಾರ ರಾಜ್ಯಕ್ಕೆ ಮಂಜೂರು ಮಾಡಿದೆ. ಈ ಜೂನ್​​ವರೆಗೆ ಜಿಎಸ್​​ಟಿ ಪರಿಹಾರ ನೀಡಲಾಗುತ್ತದೆ.‌ ಬಳಿಕ ಪರಿಹಾರ ಸ್ಥಗಿತಗೊಳ್ಳಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭೆ ಚುನಾವಣಾ ಅಭ್ಯರ್ಥಿಯಾಗಿ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಅದರ ಬೆನ್ನಲ್ಲೇ ರಾಜ್ಯಕ್ಕೆ ಜಿಎಸ್​​ಟಿ ಪರಿಹಾರ ಹಣ ಬಿಡುಗಡೆ ಮಾಡಿದ್ದಾರೆ

.


Spread the love

About Karnataka Junction

[ajax_load_more]

Check Also

ನನಗಿಂತ ಭರತ್ ಗೆ ಹೆಚ್ಚು ಮತ ನೀಡಿ ಗೆಲ್ಲಸಿ- ಸಂಸದ ಬಸವರಾಜ ಬೊಮ್ಮಾಯಿ ಮನವಿ

Spread the loveಹುಬ್ಬಳ್ಳಿ: ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದಿದ್ದ ಶಿಗ್ಗಾಂವಿ- ಸವಣೂರ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವಲ್ಲಿ ಭಾರತೀಯ ಜನತಾ …

Leave a Reply

error: Content is protected !!