ಕೋಲ್ಕತ್ತಾ: ಕನ್ನಡ, ಹಿಂದಿ, ತಮಿಳು ಸೇರಿದಂತೆ ವಿವಿಧ ಭಾಷೆಯ ಸಿನಿಮಾಗಳಲ್ಲಿ ಹಿನ್ನೆಲೆ ಗಾಯಕರಾಗಿ ಅತಿದೊಡ್ಡ ಹೆಸರು ಮಾಡಿದ್ದ ಕೃಷ್ಣಕುಮಾರ್ ಕುನ್ನತ್(53) ವಿಧಿವಶರಾಗಿದ್ದಾರೆ. ತಡ ರಾತ್ರಿ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಕೋಲ್ಕತ್ತಾದಲ್ಲಿ ಆಯೋಜನೆ ಮಾಡಲಾಗಿದ್ದ ಸಂಗೀತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು, ತದನಂತರ ಹೋಟೆಲ್ ತಲುಪಿದಾಗ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಂಡು ಬಂದಿದೆ.
ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆಸ್ಪತ್ರೆಗೆ ತಲುಪುವ ಮೊದಲೇ ವಿಧಿವಶರಾಗಿದ್ದರು ಎಂದು ವರದಿಯಾಗಿದೆ. ಮೂಲಗಳ ಪ್ರಕಾರ ಅವರಿಗೆ ಹೃದಯಾಘಾತವಾಗಿದೆ ಎಂದು ಹೇಳಲಾಗ್ತಿದೆ. ಕೋಲ್ಕತ್ತಾದಲ್ಲಿ ಆಯೋಜನೆ ಮಾಡಲಾಗಿದ್ದ ಕಾನ್ಸರ್ಟ್‌ನಲ್ಲಿ ಪಾಲ್ಗೊಂಡಿದ್ದ ಕೃಷ್ಣಕುಮಾರ್ ಕುನ್ನತ್ ಸುಮಾರು ಒಂದೂವರೆ ಗಂಟೆ ಕಾಲ ಹಾಡಿದ್ದರು. ಕೃಷ್ಣಕುಮಾರ್ ಕುನ್ನತ್ ತಮಿಳು, ಮಲಯಾಳಂ, ಮರಾಠಿ, ಬೆಂಗಾಲಿ ಭಾಷೆಗಳಲ್ಲೂ ಹಾಡಿದ್ದಾರೆ. 1968ರ ಆಗಸ್ಟ್ 23ರಂದು ದೆಹಲಿಯಲ್ಲಿ ಜನಸಿದ್ದ ಕೃಷ್ಣ ಕುಮಾರ್ ಕುನ್ನತ್ ಅವರು ಕೆಕೆ ಎಂದು ಪ್ರಸಿದ್ಧರಾಗಿದ್ದರು. ಖ್ಯಾತ ಗಾಯಕ ಎ.ಆರ್ ರೆಹಮಾನ್ ಅವರು ಕುನ್ನತ್ ಅವರನ್ನ ಚಿತ್ರರಂಗಕ್ಕೆ ಪರಿಚಯ ಮಾಡಿಸಿದ್ದರು.ಇದನ್ನೂ ಓದಿ: ಕನ್ನಡದಲ್ಲಿ ಮಾತನಾಡಿದ ಬಾಲಿವುಡ್ ಸುಂದರಿ ರಕ್ಕಮ್ಮ: ವಿಡಿಯೋಪ್ರಧಾನಿ ಮೋದಿ ಸಂತಾಪ: ಕೃಷ್ಣಕುಮಾರ್ ಕುನ್ನತ್ ದಿಢೀರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ಕೃಷ್ಣಕುಮಾರ್ ಕುನ್ನತ್ ಅವರ ಅಕಾಲಿಕ ಸಾವು ಮನಸ್ಸಿಗೆ ನೋವು ತರಿಸಿದೆ. ಕೆಕೆ ಅವರ ಹಾಡುಗಳಲ್ಲಿ ಎಲ್ಲ ರೀತಿಯ ಭಾವನೆ ಇರುತ್ತಿದ್ದವು. ಎಲ್ಲ ವಯೋಮಾನದವರನ್ನ ತಮ್ಮ ಹಾಡುಗಳ ಮೂಲಕ ರಂಜಿಸಿದ್ದರು. ಅವರ ಹಾಡುಗಳ ಮೂಲಕ ಸದಾ ನೆನಪಿನಲ್ಲಿ ಉಳಿದುಕೊಳ್ಳಲಿದ್ದಾರೆ ಎಂದಿದ್ದಾರೆ.
Check Also
ವಿಧಾನ ಪರಿಷತ್ ಮಾಜಿ ಸದಸ್ಯೆ ಸಾವಿತ್ರಮ್ಮ ಗುಂಡಿ ನಿಧನ
Spread the loveಹುಬ್ಬಳ್ಳಿ : ಕರ್ನಾಟಕ ರಾಜ್ಯ ಸಂಯುಕ್ತ ಜನತಾ ದಳ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ , ವಕೀಲರು ಹಾಗೂ …