https://youtu.be/wrFTVRFgk0I
ಹುಬ್ಬಳ್ಳಿ; ನಿಯಮ ಮೀರಿ ಮದ್ಯ ಮಾರಾಟ ಮಾಡುತಿದ್ದ ವೈನ್ಸ ಒಂದರ ಮೇಲೆ ಅಬಕಾರಿ ಇಲಾಖೆಯ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ. ನಗರದ ಘಂಟಿಕೇರಿ ಪೊಲೀಸ ಠಾಣೆಯ ಕೊಗಳತ್ತೆಯ ಹತ್ತಿರ ವೈನ್ಸನಲ್ಲಿ ನಿಯಮ ಮೀರಿ ಮದ್ಯ ಮಾರಾಟ ಮಾಡುತಿದ್ದರು ಕೂಡಾ ಘಂಟಿಕೇರಿ ಪೊಲೀಸರು ಕಣ್ಣು ಮುಚ್ಚಿ ಕುಳಿದ್ದಿದ್ದರು. ಅಬಕಾರಿ ಇಲಾಖೆಯ ಸಿಬ್ಬಂದಿಗಳು ಸಿಂಪಿಗಲ್ಲಿ ಯಲ್ಲಿರುವ ಗುರುದತ್ತ ವೈನ್ಸ ಮೇಲೆ ದಾಳಿ ಮಾಡಿ ಲಕ್ಷಾಂತರ ಮೌಲ್ಯದ ಮದ್ಯದ ಬಾಟಲಿಗಳನ್ನು ವಶಪಡಿಸಿ ಕೊಂಡಿದ್ದಾರೆ ಇನ್ನು ಜಿಲ್ಲೆಯಾದ್ಯಂತ ಮದ್ಯ ಮಾರಾಟ ಮಾಡುವ ಆದೇಶ ಜಾರಿಯಲ್ಲಿ ಇದ್ದರು ಕೂಡಾ ಆದೇಶ ಉಲಂಘಿಸಿ ಬೆಳಿಗ್ಗೆ 4-45 ಗಂಟೆಗೆ ಶಿಂಪಿಗಲ್ಲಿಯ್ಲಲಿರುವ ರುಕ್ಮಿಣಿ ಕೆ. ಶೆಟ್ಟಿ ಇವರ ಗುರುದತ್ತ ವೈನ್ಸ್, ಸಿಎಲ್ 2 ಸನ್ನದುವನ್ನು ತೆರೆದು KA. 25.D. 5891 ನೋ. ಸಂ ಯ ಒಂದು ಆಟೋ ರಿಕ್ಷಾಕ್ಕೆ ಮದ್ಯದ ಪೆಟ್ಟಿಗೆ ಗಳನ್ನು ಇಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆದರಿಸಿ ಅಬಕಾರಿ ನಿರೀಕ್ಷಕರಾದ ನೇತ್ರಾ ಉಪ್ಪಾರ ನೇತೃತ್ವದಲ್ಲಿ ದಾಳಿ ಮಾಡಿ ಆಟೋ ರಿಕ್ಷಾ ದಲ್ಲಿಯ ವಿವಿಧ ಬ್ರಾಂಡಿನ ಮದ್ಯ ಜಪ್ತಿ ಮಾಡಲಾಗಿದೆ.
ಇನ್ನು ದಾಳಿ ವೇಳೆ ಆಟೋ ಮಾಲೀಕ ಸ್ಥಳದಲ್ಲಿ ಆಟೊ ಬಿಟ್ಟು ಪರಾರಿ ಆಗಿದ್ದು ಆತನ ವಿರುದ್ಧ ಪ್ರಕರಣವನ್ನ ಒಟ್ಟು.ರೂ 1,834174 ಮೌಲ್ಯ ದ ಮದ್ಯವನ್ನು ಹಾಗು 1 ಆಟೋ ರಿಕ್ಷಾ ವನ್ನು ವಶಪಡಿಸಿಕೊಳ್ಳಲಾಗಿದೆ ನೇತ್ರಾ ಉಪ್ಪಾರ, ಇವರ ನೇತ್ರತ್ವದಲ್ಲಿ ಸಿಬ್ಬಂದಿಗಳಾದ ಪ್ರಕಾಶ ಮುಳುಗುಂದ, ಜಾನ್ ವರ್ಗಿಸ್ , ಶೇಕ್ ಹಾಗೂ ವಾಹನ ಚಾಲಕ ಜ್ಯೋತಿ ರವರು ಭಾಗವಹಿಸಿದ್ದರು.