ಬೆಂಗಳೂರು : ಹೊಟೇಲ್‌ನಲ್ಲಿ ತರಕಾರಿ ಕತ್ತರಿಸುವ ವಿಚಾರವಾಗಿ ಇಬ್ಬರು ಕಾರ್ಮಿಕರ ಮಧ್ಯೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಿಇಎಂಎಲ್ ಲೇಔಟ್ 5ನೇ ಹಂತದ ಆಂಧ್ರ ಸ್ಟೈಲ್ ರೆಸ್ಟೋರೆಂಟ್‌ನಲ್ಲಿ ಈ ಕೃತ್ಯ ನಡೆದಿದ್ದು, ನೇಪಾಳ ಮೂಲದ ಮಿಲನ್ ಬಿರಾಲ್ ಹತ್ಯೆಗೀಡಾದ ದುರ್ದೈವಿ. ಕೃತ್ಯ ಸಂಬಂಧ ಮೃತನ ಸ್ನೇಹಿತ ಆರ್ಯನ್ ಪುಷ್ಕರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಹೋಟೆಲ್‌ನಲ್ಲಿ ನಿನ್ನೆ ಸೋಮವಾರ ಮಧ್ಯಾಹ್ನ ಈ ಇಬ್ಬರ ಮಧ್ಯೆ ತರಕಾರಿ ಹೆಚ್ಚುವ ವಿಚಾರವಾಗಿ ಜಗಳವಾಗಿದೆ. ಈ ಹಂತದಲ್ಲಿ ಕೋಪಗೊಂಡ ಮಿಲನ್, ಆರ್ಯನ್ ಹೊಟ್ಟೆಗೆ ತರಕಾರಿ ಕತ್ತರಿಸುವ ಚಾಕುವಿನಿಂದ ಇರಿದಿದ್ದಾನೆ.
ನೇಪಾಳ ಮೂಲದ ಮಿಲನ್ ಹಾಗೂ ಆರ್ಯನ್, ಕೆಲ ತಿಂಗಳಿಂದ ಈ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದು, ಹೋಟೆಲ್‌ನ ಕೊಠಡಿಯಲ್ಲೇ ಇಬ್ಬರು ತಂಗಿದ್ದರು. ತರಕಾರಿ ಕತ್ತರಿಸುವುದು ಸೇರಿದಂತೆ ಅಡುಗೆ ಕೆಲಸಕ್ಕೆ ಸಹಾಯಕರಾಗಿದ್ದರು.