Breaking News

ಇಬ್ಬರು ಭಯೋತ್ಪಾದಕರ ಹತ್ಯೆ

Spread the love

ಜಮ್ಮು ಮತ್ತು ಕಾಶ್ಮೀರ: ಆವಂತಿಪುರ ಪ್ರದೇಶ ವ್ಯಾಪ್ತಿಯ ರಾಜ್‌ಪೊರಾ ಎಂಬಲ್ಲಿ ಭದ್ರತಾ ಪಡೆಗಳು ಇಬ್ಬರು ಭಯೋತ್ಪಾ ದಕರನ್ನು ಹತ್ಯೆ ಮಾಡಿವೆ. ಉಗ್ರರಿಂದ 2 ಎಕೆ 47 ಬಂದೂಕು ವಶಕ್ಕೆ ಪಡೆಯಲಾಗಿದೆ. ಹತರಾದ ಉಗ್ರರನ್ನು ತ್ರಾಲ್ ಎಂಬಲ್ಲಿನ ಶಹೀದ್ ರಾಥರ್‌ ಮತ್ತು ಶೋಪಿಯಾನ್‌ನ ಉಮರ್ ಯೂಸುಫ್‌ ಎಂದು ಗುರುತಿಸಲಾಗಿದೆ.
ಭಯೋತ್ಪಾದಕ ಕೃತ್ಯಗಳನ್ನು ಹೊರತುಪಡಿಸಿ, ಶಹೀದ್‌ ರಾಥರ್‌ ಎಂಬಾತ ಈ ಹಿಂದೆ, ಅರಿಪಾಲ ನಿವಾಸಿ ಹಾಗು ಸರ್ಕಾರಿ ಉದ್ಯೋಗಿ ಶಕೀಲಾ ಹಾಗು ಲುರ್ಗಮ್ ತ್ರಾಲ್‌ನ ಸರ್ಕಾರಿ ಕಚೇರಿಯ ಜವಾನ ಜಾವಿದ್ ಅಹಮದ್‌ ಎಂಬಿಬ್ಬರನ್ನು ಹತ್ಯೆ ಮಾಡಿದ್ದ ಎಂದು ಕಾಶ್ಮೀರ ಐಜಿಪಿ ವಿಜಯ್‌ ಕುಮಾರ್ ಮಾಹಿತಿ ನೀಡಿದರು.ಆವಂತಿಪೊರಾದ ರಾಜಪೊರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಎನ್‌ಕೌಂಟರ್‌ ಮುಂದುವರೆಸಿವೆ.


Spread the love

About Karnataka Junction

[ajax_load_more]

Check Also

ಹುಬ್ಬಳ್ಳಿ-ವಾರಣಾಸಿ ನಿಲ್ದಾಣಗಳ ನಡುವೆ ವಿಶೇಷ ರೈಲು

Spread the loveಹುಬ್ಬಳ್ಳಿ: ಕುಂಭಮೇಳದ ಸಮಯದಲ್ಲಿ ಪ್ರಯಾಣಿಕರ ಹೆ” ದಟ್ಟಣೆ ನಿವಾರಿಸಲು ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬ ಉತ್ತರ ಪ್ರದೇಶದ …

Leave a Reply

error: Content is protected !!