Breaking News

ಯುಪಿಎಸ್ ಸಿಯಲ್ಲಿ ದೃಷ್ಟಿ ವಿಶೇಷ ಚೇತನೆಯ ಅದ್ಭುತ ಸಾಧನೆ

Spread the love

ಮೈಸೂರು : ಕೇಂದ್ರ ಲೋಕಸೇವಾ ಆಯೋಗ 2021 ನೇ ಸಾಲಿನ ಸಿವಿಲ್ ಸರ್ವೀಸ್ ಪರೀಕ್ಷೆ ಫಲಿತಾಂಶವನ್ನು ಇಂದು ಬಿಡುಗಡೆಯಾಗಿದೆ. ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಕುಡುಕೂರು ಗ್ರಾಮದ ಮೇಘನಾ ಕೆ.ಟಿ. ಯುಪಿಎಸ್ ಸಿ ಟಾಪರ್ ಆಗಿ ಹೊರಹೊಮ್ಮಿದ್ದಾಳೆ.

2021ರ ಯುಪಿಎಸ್ಸಿಯಲ್ಲಿ ದೇಶಕ್ಕೆ 425 ನೇ ರ್ಯಾಂಕ್ ಪಡೆದಿರೋ ಮೇಘನಾ. ಕೆ.ಟಿ ದೃಷ್ಟಿ ವಿಶೇಷ ಚೇತನೆ. 2020 ರಲ್ಲೂ ಯುಪಿಎಸ್ಸಿಯಲ್ಲಿ 465 ನೇ ರ್ಯಾಂಕ್ ಪಡೆದಿದ್ದ ಮೇಘನಾ. 2015 ರಲ್ಲಿ ಕೆಎಎಸ್ ನಲ್ಲಿ 11 ನೇ ರ್ಯಾಂಕ್ ಪಡೆದು ವಾಣಿಜ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ರು. ಬಳಿಕ ಖಜಾನೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕುಡಕೂಡಿನ ತಾಂಡವ ಮೂರ್ತಿ ನವನೀತ ದಂಪತಿಯ ಪುತ್ರಿಯಾಗಿರುವ ಮೇಘನಾ. ಕೆ.ಟಿ. ಸದ್ಯ ಬೆಂಗಳೂರಿನ ಕೆಂಗೇರಿಯಲ್ಲಿ ವಾಸ ಮಾಡುತ್ತಿದ್ದಾರೆ. 10ನೇ ತರಗತಿಯಲ್ಲಿದ್ದ ವೇಳೆ ರೆಟಿನಾ ಸಮಸ್ಯೆ ಎದುರಾಗಿ 70 ರಷ್ಟು ದೃಷ್ಟಿ ಕಳೆದುಕೊಂಡಿದ್ದ ಮೇಘನಾ. ಸಮಸ್ಯೆ ಮೆಟ್ಟಿನಿಂತು ಯುಪಿಎಸ್ ಸಿ ಯಲ್ಲಿ ಸಾಧನೆ ಮಾಡಿ ಛಲಬಿಡದ ಸಾಧಕಿಯಾಗಿದ್ದಾರೆ.


Spread the love

About gcsteam

    Check Also

    ಎಸ್ ಎಮ್ ಅಕ್ಕಿ ಸೇವಾ ನಿವೃತ್ತಿ

    Spread the loveಹುಬ್ಬಳ್ಳಿ: ಕಲಘಟಗಿ ಪಟ್ಟಣ ಪಂಚಾಯತಿ ಪ್ರಥಮ ದರ್ಜೆ ಸಹಾಯಕರಾದ ಎಸ್ಎಂ ಅಕ್ಕಿ ( 41) ವರ್ಷ ಸುದೀರ್ಘ …

    Leave a Reply