ಹುಬ್ಬಳ್ಳಿ; ನವಲಗುಂದ ತಾಲೂಕಿನ ಗುಡಿಸಾಗರ ಕ್ರಾಸ್ ಬಳಿ ಆಟೋ ವಾಲಕ ವೇಗವಾಗಿ ಚಾಲನೆ ಮಾಡಿಕೊಂಡು ಬರುತಿದ್ದಾ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಯಾದ ಘಟನೆ ನಡೆದಿದೆ. ಘಟನೆಯಿಂದ ಓರ್ವ ಸ್ಥಳದಲ್ಲೇ ಮೃತ ಪಟ್ಟಿದ್ದು, ವೃದ್ದೆಗೆ ಗಾಯಗಳಾಗಿವೆ.
ಇನ್ನು ಭಕ್ತರು ಯಮನೂರ ಚಾಂಗದೇವ ನ ದರ್ಶನಕ್ಕೆ ಬಂದಿದ್ದರು ಎನ್ನಲಾಗಿದೆ. ದರ್ಶನ ಪಡೆದು ಮರಳಿ ರೋಣ ತಾಲ್ಲೂಕಿನ ತಮ್ಮೂರಿಗೆ ಹೋಗುವ ವೇಳೆ ನವಲಗುಂದ ತಾಲೂಕಿನ ಗುಡಿಸಾಗರ ಕ್ರಾಸ್ ಬಳಿ ದುರ್ಘಟನೆ ಸಂಭವಿಸಿದೆ.
ಘಟನೆಯಿಂದ ಚಾಲಕ ಮೌಲಾಸಾಬ್ ರಂಜಾನ್ ಸಾಬ್ ಮುಲ್ಲಾನವರ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ ಎನ್ನಲಾಗಿದ್ದು, ಬಿಬಿಜಾನ್ ರಂಜಾನ್ ಸಾಬ್ ಮುಲ್ಲಾನವರ ಎಂಬ ವೃದ್ದೆಗೆ ಗಾಯಗಳಾಗಿದೆ.
