ಸಂಘದ ರಾಜ್ಯ ಘಟಕದ ಅಧ್ಯಕ್ಷ ಪಾಂಡುರಂಗ ಪಮ್ಮಾರ ಹೇಳಿದರು.
ಹುಬ್ಬಳ್ಳಿ: ನಗರದ ಗೋಕುಲ ರಸ್ತೆ ವಿಮಾನ ನಿಲ್ದಾಣದ ಬಳಿ ಅಖಿಲ ಭಾರತ ಬಂಜಾರ ಸಂಘದಿಂದ ಜೂನ್ 1ರವರೆಗೆ ಸೇವಾಲಾಲ್ ಮತ್ತು ಮಾರಿಕಾಂಬ ಜಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಪಾಂಡುರಂಗ ಪಮ್ಮಾರ ಹೇಳಿದರು.
ಬಂಜಾರ ಸಮುದಾಯದ ಕಲೆ ಮತ್ತು ಸಂಸ್ಕೃತಿ ಉಳಿಸಿ ಬೆಳೆಸುವ ದೃಷ್ಟಿಯಿಂದ ಜಾತ್ರೆಯನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಮೂರು ದಿನಗಳ ಈ ಜಾತ್ರೆಯು ಮೇ 30ರಿಂದ ಆರಂಭವಾಗಿದ್ದು, ವಿವಿಧ ಜಿಲ್ಲೆಗಳ ಜನರು ಭಾಗವಹಿಸಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೇ 31ರಂದು ಬೆಳಿಗ್ಗೆ 8 ಗಂಟೆಗೆ ಕಾಲೊನಿಯ ಪ್ರತಿ ಮನೆಗಳಲ್ಲಿ ದೇವಿಯ ಕಾಟಿ ಫೇರಿ ರಾಮಸಿಂಗ್ ಮಹರಾಜರಿಂದ ಪೂಜೆ ನಡೆಯಲಿದೆ. ಸಂಜೆ ದೇವಿಗೆ ವಿಶೇಷ ಪೂಜೆ ಸಮರ್ಪಿಸಿಲಾಗುತ್ತದೆ. ಮಹಿಳೆಯರಿಂದ ನೃತ್ಯ ಹಾಗೂ ಲಂಬಾಣಿ ಭಜನೆ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಸಂಘದ ಶಂಕರ ಕಟ್ಟಿಮನಿ, ರಾಮಸಿಂಗ್ ಕಾರಭಾರಿ, ಅಶೋಕ ಠಾಕೊರ, ಸಕ್ರಪ್ಪ ಪೂಜಾರಿ ಹಾಗೂ ಯಮನೂರ ನಾಯಕ ಇದ್ದರು.
