Breaking News

ಪಿಎಸ್ಐ ನೇಮಕಾತಿ ಹಗರಣ- 2 ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಆರೋಪಿ ದಂಪತಿ ಅಂಧರ

Spread the love

ಕಲಬುರಗಿ : ಎರಡು ತಿಂಗಳಿಂದ ತಲೆಮರೆಸಿಕೊಂಡಿದ್ದ ಪಿಎಸ್ಐ ಅಕ್ರಮ ಪ್ರಕರಣದ ಆರೋಪಿಗಳಾದ ಶಾಂತಿಬಾಯಿ ಹಾಗೂ ಆಕೆಯ ಪತಿ ಬಸಯ್ಯ ನಾಯಕನನ್ನು ಕೊನೆಗೂ ಸಿಐಡಿ ಪೊಲೀಸರು ತೆಲಂಗಾಣದಲ್ಲಿ ಬಂಧಿಸಿದ್ದಾರೆ. ರಾಜ್ಯದಲ್ಲಿ ಸಂಚಲನಕ್ಕೆ ಕಾರಣವಾದ ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ತನಿಖೆ ಮತ್ತೆ ಚುರುಕುಗೊಳಿಸಿದ ಸಿಐಡಿ ತಂಡ, ಆರೋಪಿಗಳನ್ನು ಒಬ್ಬೊಬ್ಬರಾಗಿ ಬಲೆಗೆ ಕೆಡುವುತ್ತಿದ್ದಾರೆ.
ಪರೀಕ್ಷೆ ಬರೆದು ಪಾಸಾಗಿದ್ದ ಅಭ್ಯರ್ಥಿ ಹಾಗೂ ಅಕ್ರಮಕ್ಕೆ ಸಹಕರಿಸಿದ ಆಕೆಯ ಪತಿ ಬಸಯ್ಯ ನಾಯಕನನ್ನು ತೆಲಂಗಾಣದ ಹೈದ್ರಾಬಾದ್​ನಲ್ಲಿ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಅಭ್ಯರ್ಥಿ ಶಾಂತಿಬಾಯಿ ಪ್ರಕಣದ ಕಿಂಗ್​ಪಿನ್​ಗಳಾದ ಮಂಜುನಾಥ ಮೇಳಕುಂದಿಗೆ ಹಣ ನೀಡಿ ಪರೀಕ್ಷೆ ಬರೆದಿದ್ದಳು.ಪ್ರಕರಣ ಹೊರಬೀಳುತ್ತಿದ್ದಂತೆ ಹೈದ್ರಾಬಾದ್​ನಲ್ಲಿ ತೆಲೆ ಮರೆಸಿಕೊಂಡಿದ್ದರು. ಇವರ ಪತ್ತೆಗೆ ಕಳೆದ ಎರಡು ತಿಂಗಳಿನಿಂದ ಸಿಐಡಿ ಪೊಲೀಸರು ಶೋಧ ನಡೆಸುತ್ತಿದ್ದರು. ಕೊನೆಗೂ ದಂಪತಿ ಹೈದರಾಬಾದ್​ನಲ್ಲಿ ಸೆರೆ ಸಿಕ್ಕಿದ್ದಾರೆ.


Spread the love

About gcsteam

    Check Also

    ರಾಜ್ಯಸಭಾ ಕಾಂಗ್ರೆಸ್ ವಿಜಯೋತ್ಸವದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ; ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ

    Spread the loveಹುಬ್ಬಳ್ಳಿ; ರಾಜ್ಯಸಭಾ ಚುನಾವಣೆಯ ಬಳಿಕ ನಡೆದ ಕಾಂಗ್ರೆಸ್ ವಿಜಯೋತ್ಸದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿ ಘಟನೆಯನ್ನು ಖಂಡಿಸಿ …

    Leave a Reply