ಧಾರವಾಡ; ಧಾರವಾಡ ಜಿಲ್ಲೆಯ ಕಾಂಗ್ರೆಸ್ ಸತ್ಯಾನಾಶ ಮಾಡಿದವರೇ ಬಸವರಾಜ ಹೊರಟ್ಟಿ ಎಂದು ಎಐಸಿಸಿ ಸದಸ್ಯ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಾಜಿ ಉಪಮೇಯರ್ ದೀಪಕ್ ಚಿಂಚೋರೆ ಗಂಭೀರ ಆರೋಪ ಮಾಡಿದರು .
ನಗರದಲ್ಲಿಂದು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವೊಬ್ಬ
ಸೆಕ್ಯುಲರ್ ಲೀಡರ್ ಎಂದು ಹೇಳಿ ನಮ್ಮ ಕಡೆ ಇದ್ದವರಿಂದ ಹೆಲ್ಪ್ ಪಡೆದರು. ನಮಗೂ ಸೇರಿದಂತೆ ಎಲ್ಲರಲ್ಲಿಯೂ ಬಸವರಾಜ ಹೊರಟ್ಟಿ ಅವರು ಸೆಕ್ಯುಲರ್ ಎಂಬ ಭಾವನೆಯಲ್ಲಿದ್ದೆವು.
ಯಾವ ಪಕ್ಷದ ಸಿಎಂ ಇದ್ದರೂ ಇವರಿಗೆ ಕ್ಲೋಸ್. ಕಾಂಗ್ರೆಸ್ ಸೋಲುವಂತ ಅಭ್ಯರ್ಥಿಗೆ ಇವರು ಟಿಕೆಟ್ ಕೊಡಿಸುತ್ತಿದ್ದರು ಎಂದು ಆರೋಪಿಸಿರು.
ಸೆಕ್ಯುಲರ್ ಎಂದು ಹೇಳಿ ಮನುವಾದಿ ಪಾರ್ಟಿಗೆ ಹೋಗುವ ಅವಶ್ಯಕತೆ ಇವರಿಗೇನಿತ್ತು ಈಗಾಗಲೇ 78 ವರ್ಷ ವಯಸ್ಸು ಹೊರಟ್ಟಿ ಅವರಿಗೆ ಲಾಲ್ ಕೃಷ್ಣ ಅಡ್ವಾನಿ, ಮುರಳಿ ಮನೋಹರ ಜೋಶಿ ಹಾಗೂ ಬಿ.ಎಸ್ ಯಡಿಯೂರಪ್ಪನವರನ್ನು ರಿಟೈರ್ ಮಾಡಿದ ಪಾರ್ಟಿ ಈಗ
ಇಂತಹ ಪಾರ್ಟಿಯಲ್ಲಿ ಬಸವರಾಜ ಹೊರಟ್ಟಿ ಗೋಲ್ ಮಾಲ್ ಮಾಡಿ ಹೋಗಿದ್ದಾರೆ. ಗಿನ್ನಿಸ್ ದಾಖಲೆ ಮಾಡುವ ಸಂಬಂಧ ಟೀಚರ್ ಹಿತಾಸಕ್ತಿ ತುಳಿದು ಸೆಕ್ಯುಲರ್ ಗೌನ್ ತೆಳಗಿಳಿಸಿ ಬಿಜೆಪಿ ಗೌನ್ ಹಾಕಿದ್ದಾರೆ ಎಂದು ಕಿಡಿ ಕಾರಿದರು.
ಎಲ್ಲಾ ಪಾರ್ಟಿ ಸತ್ಯಾನಾಶ ಮಾಡುವ ವ್ಯಕ್ತಿ ಬಸವರಾಜ ಹೊರಟ್ಟಿ. ಬಿಜೆಪಿಯನ್ನೂ ಹಾಗೇ ಮಾಡುತ್ತಾರೆ.
ಆರ್‌ಎಸ್‌ಎಸ್ ಕೇಶವ ಕುಂಜದವರು ಬಸವರಾಜ ಹೊರಟ್ಟಿ ಅವರಿಗೆ 78 ವರ್ಷ ವಾದರೂ ಟಿಕೆಟ್ ಹೇಗೆ ಕೊಟ್ಟರು ಎಂದು ದೀಪಕ್ ಚಿಂಚೂರೆ ಪ್ರಶ್ನೆ ಮಾಡಿದರು. ಸೋಲಿನ ಭೀತಿಯಲ್ಲಿ ಬಿಜೆಪಿ ಸೇರಿದ್ದಾರೆ. ಭಾರತೀಯ ಜನತಾ ಪಕ್ಷಕ್ಕೆ ಯಾವಾಗ ಕೈಗೊಡುತ್ತಾರೋ ಗೊತ್ತಿಲ್ಲ. ಅಷ್ಟೇ ಅಲ್ಲಾ ನಾಳೆ ಕಾಂಗ್ರೆಸ್ ಗೆದ್ದ ಮೇಲೆ ಕಾಂಗ್ರೆಸ್ ಗೆ ಬರುತ್ತಾರೆ ಎಂದು ಟೀಕಿಸಿದರು.
*ಶಿಕ್ಷಕರಿಗೆ ಹೊರಟ್ಟಿ ಕೊಡುಗೆ ಶೂನ್ಯ*
ನಾನು ಶಿಕ್ಷಕರ ಸಲುವಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ ಎಂದು ಕೊಚ್ಚಿಕೊಳ್ಳುವ ಬಸವರಾಜ ಹೊರಟ್ಟಿ
ಶಿಕ್ಷಕರಿಗೆ ಇವರ ಕೊಡುಗೆ ಏನು ಇಲ್ಲ.ಕೇವಲ ನನ್ನ ಕೊಡುಗೆ ಶಿಕ್ಷಕರಿಗೆ ಬಹಳಷ್ಟಿದೆ ಎಂದು ಸುಳ್ಳು ಬಿಂಬಿಸುತ್ತಾರೆ.
ಸತತವಾಗಿ ಎಂಟು ಸಲ ಸರ್ಕಾರಿ ಮನೆ ಕೊಡಬೇಕು ಎಂದು ಸರ್ಕಾರಕ್ಕೆ ಲೆಟರ್ ಹಾಕಿದ್ದಾರೆ ಆದರೆ
ಟೀಚರ್ಸ್ ಸಲುವಾಗಿ ಒಂದೂ ಲೆಟರ್ ಬರೆದಿಲ್ಲ ಎಂದರು.
*ಬ್ರಾಹ್ಮಣ ವಿರೋಧಿ ಹೊರಟ್ಟಿ*
ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಬ್ರಾಹ್ಮಣರ ವಿರೋಧಿಯಾಗಿದ್ದು
ಇಂದು ಅದೇ ಪಾರ್ಟಿ ಸೇರಿದ್ದಾರೆ. ಲಿಂಗಾಯತ ಧರ್ಮ ಸ್ಥಾಪನೆಗೆ ಇವರು ಮುಂಚೂಣಿಯಲ್ಲಿದ್ದರು ಎಂದ ಅವರು ಕ್ರಿಶ್ಚಿಯನ್ ಇನ್ಸಿಟ್ಯೂಟ್, ಮುಸ್ಲಿಂ ಇನ್ಸಿಟ್ಯೂಟ್ ಹಾಗೂ ಸೆಕ್ಯುಲರ್ ಮತದಾರರು ವಿಚಾರ ಮಾಡಿ ಮತ ಹಾಕಬೇಕು
ಬಸವರಾಜಹೊರಟ್ಟಿ ಅವರಿಗೆ 78 ವರ್ಷ ವಯಸ್ಸು ಈ ವರ್ಷ ಶಿಕ್ಷಕರೇ ಅವರಿಗೆ ನಿವೃತ್ತಿ ನೀಡುತ್ತಾರೆ ಎಂದ ದೀಪಕ್ ಬಸವರಾಜ ಗುರಿಕಾರ ಪರವಾಗಿ ಗುಂಡೂರಾವ್ ಸೇರಿದಂತೆ ಇತರರು ಪ್ರಚಾರಕ್ಕೆ ಬರುತ್ತಾರೆ.
ಬಿಜೆಪಿಗೆ ಬೈದಾರೋ ಇಲ್ಲವೋ ಬಸವರಾಜ ಹೊರಟ್ಟಿ ಆತ್ಮಸಾಕ್ಷಿಯಾಗಿ ಹೇಳಲಿ ಎಂದರು.