Breaking News

ನೀನು ಹೇಗೆ ಪಿಎಸ್ಐ ಆಗ್ತೀಯಾ ನಾವು ನೋಡುತ್ತೇವೆ

Spread the love

ಹುಬ್ಬಳ್ಳಿ: ಪಿಎಸ್​​ಐ ಪರೀಕ್ಷೆ ಅಕ್ರಮದ ವಿರುದ್ಧ ಧ್ವನಿ ಎತ್ತಿದ ಅಭ್ಯರ್ಥಿಗೆ ಕಿಡಿಗೇಡಿಗಳು ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಯಾದಗಿರಿಯ ರವಿಶಂಕರ್​ ಎನ್ನುವವರು ಧಾರವಾಡದಲ್ಲಿ ಪಿಎಸ್​ಐ ಪರೀಕ್ಷೆ ಬರೆದಿದ್ದು, ಪರೀಕ್ಷೆ ಹಗರಣ ಬಯಲಾಗುತ್ತಿದ್ದಂತೆ ಹೋರಾಟ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಣ್ಣೂರಿನ ಅಸ್ಲಂ ಎನ್ನುವಾತ ವಾಟ್ಸಾಪ್​​ನಲ್ಲಿ ರವಿಶಂಕರ್​ಗೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಪ್ರಕರಣದ ಆರೋಪಿ ಆರ್​ಡಿ ಪಾಟೀಲ್​ ಪರ ಮಾತನಾಡಿರುವ ಅಸ್ಲಂ, ಆರ್​ಡಿ ಪಾಟೀಲ್ ಹೊರಗೆ ಬಂದ ಮೇಲೆ ನೀನು ಹೇಗೆ ಪಿಎಸ್​ಐ ಆಗ್ತೀಯಾ ನೋಡುತ್ತೇವೆ. ಗೌಡ್ರು ನಿನ್ನಿಂದಲೇ ಜೈಲಿಗೆ ಹೋಗಿದ್ದು. ಅಫಜಲಪುರ ಮಂದಿ‌ ಪವರ್​ ಏನು ಅಂತಾ ತೋರಿಸುತ್ತೇವೆ ಎಂದು ಬೆದರಿಕೆ ಮೆಸೇಜ್​ ಮಾಡಲಾಗಿದೆ.
ಈ ಬಗ್ಗೆ ರವಿಶಂಕರ್​​ ಧಾರವಾಡದ ವಿದ್ಯಾಗಿರಿ ಪೊಲೀಸ್​ ಠಾಣೆಯಲ್ಲಿ ಅಸ್ಲಂ ವಿರುದ್ಧ ‌ ದೂರು ನೀಡಿದ್ದಾರೆ.


Spread the love

About Karnataka Junction

[ajax_load_more]

Check Also

ಭವಾನಿಮಠ ಬಂಧನ

Spread the loveಹುಬ್ಬಳ್ಳಿ: ಶಾಸಕ ಪ್ರಸಾದ ಅಬ್ಬಯ್ಯ ಅವರ ಮೊಬೈಲ್ ಫೋನ್‌ಗೆ ಕರೆ ಮಾಡಿದ ವ್ಯಕ್ತಿಯೊಬ್ಬರು, ಶಾಸಕ ಹಾಗೂ ಅವರ …

Leave a Reply

error: Content is protected !!