ಶಾಲೆಯ ಸರ್ವಾಂಗೀಣ ಅಭಿವೃದ್ಧಿ ಜೊತೆಗೆ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾದರೇ ಗ್ರಾಮಸ್ಥರ ಪ್ರೀತಿಯ ಪ್ರಧಾನ ಗುರು

Spread the love

ಹುಬ್ಬಳ್ಳಿ: ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ಶಾಲೆ ಜೊತೆಗೆ ಆ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಹೇಗೆ ಕಾರಣಿಭೂತರಾಗುತ್ತಾರೆ ಎಂಬುದಕ್ಕೆ ಶಿಕ್ಷಕ ಎಫ್ .ಪಿ. ತೆಗ್ಗಿನಕೇರಿ ಅವರೇ ಉತ್ತಮ ಉದಾಹರಣೆ. ಇವರು
ಶಿಕ್ಷಕ ವೃತ್ರಿ ಜೊತೆಗೆ ಉತ್ತಮ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಅವಿರತವಾಗಿ ಶ್ರಮಿಸಿದವರು. ಧಾರವಾಡ ಜಿಲ್ಲೆಯ
ಕುಂದಗೋಳ ತಾಲೂಕಿನ ಗುಡೇಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾ ಧ್ಯಾಯರಾದ ಎಫ್ .ಪಿ. ತೆಗ್ಗಿನಕೇರಿ ಅವರೇ ನಾಳೆ ಸೇವಾ ನಿವೃತ್ತಿ ಹೊಂದಲಿದ್ದಾರೆ.
ಶಿಕ್ಷಕ ತನ್ನ ಕಾಯಕ ನಿಷ್ಠೆಯಿಂದಲೇ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕನಾಗಿ, ಆ ಮೂಲಕ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಬಹುಮುಖ ಪಾತ್ರ ವಹಿಸಿದ್ದಾರೆ. ಶಿಕ್ಷಕ ವೃತ್ತಿಗೆ ಗೌರವ ತರುವ ಮೂಲಕ
ಉತ್ತಮ ಶಿಕ್ಷಕನಾಗಿ
ಶಾಲೆಯ ಎಲ್ಲ ಕೆಲಸ ಕಾರ್ಯಗಳಲ್ಲಿ ಹೆಚ್ಚು ಗಮನಹರಿ ಸುವುದರೊಮದಿಗೆ , ಎಲೆ ಮರೆ ಕಾಯಿಯಂತೆ ತನ್ನ ಕಾಯಕ ವೃತ್ತಿಯನ್ನು ಮಾಡುತ್ತಾ ಬಂದಿದ್ದಾರೆ. ಅಷ್ಟೆಯಲ್ಲದೇ ಅವರ ಸೇವೆ ಸಲ್ಲಿಸುತ್ತಿರುವ ಗ್ರಾಮದ ಜನತೆಗೆ ಇವರನ್ನು ಕಂಡರೆ ಎಲ್ಲಿಲ್ಲದ ಗೌರವ ಮತ್ತು ಪ್ರೀತಿಯನ್ನು ತೊರಿಸುತ್ತಾರೆ.
ಗ್ರಾಮಕ್ಕೆ 2020 ರಲ್ಲಿ ಗುಡೇನಕಟ್ಟಿ ಗ್ರಾಮಕ್ಕೆ ಈ ಶಿಕ್ಷಕರು ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನವನ್ನು ಕಲಿಸಿ ಅಪಾರ ವಿದ್ಯಾರ್ಥಿ ಬಳಗವನ್ನು ಸಂಪಾದಿಸಿ, ಉತ್ತಮ ಶಿಕ್ಷಕರಾಗಿ ಗುರ್ತಿಸಿಕೊಂಡರು. ಗ್ರಾಮ ಶಾಲೆಯ ಪ್ರತಿಯೊಂದು ಅಭಿವೃದ್ಧಿಯಲ್ಲಿ ಎಫ್ .ಪಿ. ತೆಗ್ಗಿನಕೇರಿ ಅವರ ಪಾತ್ರ ಬಹು ಮುಖ್ಯವಾಗಿದೆ.
ಅತ್ಯಂತ ಉತ್ಸಾಹದಿಂದಲೇ ಮಕ್ಕಳಿಗೆ ಪಾಠ ಮಾಡಿ ಮಕ್ಕಳ ಖುಷಿಯಲ್ಲಿ ತಾವು ಸಂತಸ ಪಡುತ್ತಾ ಶಾಲೆಯ ಅಭಿವೃದ್ದಿಗೆ ಶ್ರಮಿಸುವ ಶಿಕ್ಷಕರು ಇವರು. ಶಿಕ್ಷಕನು ಕಲ್ಲನ್ನು ಶಿಲೆಯಾಗಿ ಮಾಡುವ ಶಿಲ್ಪಕಾರನಾಗಿದ್ದಾನೆ ಅಂತಹ ಶಿಲ್ಪಕಾರನ ಕೈಯಲ್ಲಿ ಏನುಬೇಕಾದರೂ ಸಿದ್ದವಾಗಿ ಹೊರಹೊಮ್ಮಬಹುದು ಎಂಬುದನ್ನು ಎಫ್. ಪಿ. ತೆಗ್ಗಿನಕೇರಿ ತೋರಿಸಿಕೊಟ್ಟಿದ್ದಾರೆ. ಎಫ್..ಪಿ. ತೆಗ್ಗಿನಕೇರಿ ಅವರು
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಮಂಟೂರು ಗ್ರಾಮದಲ್ಲಿ ಜೂನ್ 1, ರ 1962 ರಲ್ಲಿ ಜನಿಸಿದರು. ಇವರ ತಂದೆ ಫರಪ್ಪ ಅವರು ಸಹ ಶಿಕ್ಷಕ ವೃತ್ತಿಯಲ್ಲಿದ್ದು ಅನೇಕ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ತಾಯಿ ಈರಮ್ಮ ತಮ್ಮ ಪತಿ ಫರಪ್ಪ ಅವರ ಶಿಕ್ಚಕ ವೃತ್ತಿಗೆ ಪೂರಕವಾಗಿ ಸಹಾಯ ಮಾಡಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಶ್ರಮವಹಿಸಿದ್ದಾರೆ. ತುಂಬು ಸಂಸಾರದಲ್ಲೇ ಬಂದವರು
ಫಕೀರಪ್ಪ ಅವರು ಮುಗ್ದ ಸ್ವಭಾವದಿಂದ ಅಪಾರ ಸ್ನೇಹ ಬಳಗವನ್ನು ಸಂಪಾದಿಸಿ ಪದವಿ ಶಿಕ್ಷಣವನ್ನು ಪಡೆದು ಶಿಕ್ಷಕ ವೃತ್ತಿಗೆ ಬರಬೇಕು ಎನ್ನುವ ಆಸೆಯಿಂದ ಟಿಸಿಎಚ್ ನಂತರ ಬಿ.ಎ ಇಎಡ್ ಪದವಿ ಪಡೆದರು.
ಹುಬ್ಬಳ್ಳಿ ಬಾಷಲ್ ಮಿಸನ್ ಶಾಲೆಯಲ್ಲಿ ಶಿಕ್ಷಕರಾಗಿ ಎರಡು ವರ್ಷಗಳ ಕಾಲ ಗುತ್ತಿಗೆ ಆಧಾರ ಮೇಲೆ ಸೇವೆ ಸಲ್ಲಿಸಿದರು. ನಂತರ 1993 ರಲ್ಲಿ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ನಲವಡಿ ಸರ್ಕಾರಿ ಹಿರಿಯ ಹೆಣ್ಣು ಮಕ್ಕಳ ಶಾಲೆಯಲ್ಲಿ ಶಿಕ್ಷಕರಾಗಿ ನೇಮಕಗೊಂಡು ಸುದೀರ್ಘವಾಗಿ ಒಂದೇ ಶಾಲೆಯಲ್ಲಿ 27 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಇಷ್ಟೊಂದು ವರ್ಷಗಳ ಕಾಲ ಒಂದೇ ಗ್ರಾಮದಲ್ಲಿ ಸೇವೆ ಮಾಡುವುದು ದಾಖಲೆಯೇ ಸರಿ‌‌‌. ಗ್ರಾಮದ ಜನರ ಸಹಕಾರದಿಂದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಕನಾಗಿ ಅನನ್ಯ ಸೇವೆ ನೀಡಿದ್ದಾರೆ. ನಂತರ ಗುಡೇನಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪದನ್ಯೋತಿ ಪಡೆದು ಮುಖ್ಯೋಪಾಧ್ಯಾಯರಾಗಿ ಬಂದ ನಂತರ ಗ್ರಾಮ ಹಿರಿಯರು,ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷರು, ಸದಸ್ಯರು, ಎಸ್ ಡಿಎಂಸಿ ಸಮಿತಿ ಹಾಗೂ ಶಿಕ್ಷಕರು, ಶಿಕ್ಷಕಿಯರು, ಸಿಬ್ಬಂದಿ ವರ್ಗದ ಸಹಕಾರ ಹಾಗೂ ಕುಂದಗೋಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಠಪತಿ ಅವರ ಮಾರ್ಗದರ್ಶನದಿಂದ ಮರೆಯಲಾರದ ಸಾಧನೆ ಮಾಡಿದ್ದಾರೆ.
ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 5000 ದತ್ತಿ ದಾನವನ್ನು ಶಾಲೆ ಬಂದ ದಿನವೇ ನೀಡಿ ಮಕ್ಕಳಲ್ಲಿ ಪ್ರತಿಭೆ ಹೊರಹೊಮ್ಮಲು ಮಾದರಿಯಾದರು. ಈಗ ಗ್ರಾಮಸ್ಥರ ಮನವೊಲಿಸಿ ಒಂದೂವರೆ ಲಕ್ಷ ಹಣ ಸಂಗ್ರಹ ಮಾಡಿ ಪ್ರತಿ ವರ್ಷ ಠೇವಣಿ ಹಣದಲ್ಲಿ ಪ್ರತಿಭಾನ್ವಿತ ಮಕ್ಕಳಿಗೆ ಪ್ರೋತ್ಸಾಹ ಹಣ ನೀಡಲಾಗುತ್ತದೆ. ಇನ್ಜು ಶಾಲೆಯ ಅಂದ ಚೆಂದ ಕಾಣಲು, ಶಾಲೆಯ ಸೌಂದರ್ಯಕ್ಕಾಗಿ , ಪ್ರತಿ ವರ್ಗದ ಕೋಣೆಯಲ್ಲಿ ಮಕ್ಕಳಿಗೆ ಉಪಯುಕ್ತವಾಗುವ ಶೈಕ್ಷಣಿಕ ಭಾವಚಿತ್ರ, ಮಾಹಿತಿ ಬರೆಯಲಾಗಿದೆ. ಇನ್ನು ಇವರ ಸೇವೆ ಇಷ್ಟಕ್ಕೆ ನಿಲಲ್ಲ. ಈ ಶಾಲೆಯ ಹಳೆಯ ವಿದ್ಯಾರ್ಥಿಗಳ ಮನವೊಲಿಸಿ ಹಳೆ ವಿದ್ಯಾರ್ಥಿಗಳಿಂದ ದೇಣಿಗೆ ಸಂಗ್ರಹಿಸಿ ಶಾಲಾ‌ ಕಮಾನು ನಿರ್ಮಾಣ ಮಾಡಲಾಯಿತು.
ಮಕ್ಕಳಲ್ಲಿ ಯೋಗದ ಜ್ಞಾನ ಮಾಡಿಸಲು ಅಂತಾರಾಷ್ಟ್ರೀಯ ಯೋಗ ಗುರು ಕೋನಣ್ಣವರ ಅವರನ್ನ ಶಾಲೆಗೆ ಆಹ್ವಾನಿಸಿ ಯೋಗದ ಕುರಿತು ಯೋಗ ತರಬೇತಿ ನೀಡಿ ಯೋಗ ಕುರಿತು ಜಾಗೃತಿ ಮೂಡಿಸಲಾಯಿತು. ಇನ್ನೂ ಮಕ್ಕಳಿಗೆ ವಿಜ್ಞಾನದ‌ ವಿಸ್ಮಯವನ್ನು ತಿಳಿಯಲು ವಿಜ್ಞಾನ ವಿಷಯದ ಸಂಪನ್ಮೂಲ ವ್ಯಕ್ತಿ ಬಾರಕೇರ ಅವರನ್ನು ಕರೆಯಿಸಿ ವಿಜ್ಞಾನದ ವಿವಿಧ ಆಯಾಮಗಳ ಕುರಿತು ಮಾಹಿತಿ ನೀಡಲಾಯಿತು.
ನೆರೆವಹಾವಳಿ ಸುಮಾರು 10 ಅನುದಾನಲ್ಲಿ ಶಾಲೆಯ ಪೇವರ್ಸ್ ನ್ಮು ಅಳವಡಿಕೆ ಮಾಡಲಾಯಿತು. ಇನ್ನು ಗ್ರಾಮ ಪಂಚಾಯತಿ ವತಿಯಿಂದ ಶಾಲಾ ಮೈದಾನ ಸಮತಟ್ಟು,‌ಶಾಲೆಯ ಆವರಣದಲ್ಲಿ ೨೪ ಗಂಟೆಗಳ ಕಾಲ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ,‌ಮಳೆ ಕೊಯ್ಲು ಸಹ ಮಾಡುವಲ್ಲಿ ಶ್ರಮಿಸಿದರು ಇವರ ನಿಶ್ವಾಸರ್ಥ ಸೇವೆ ಗ್ರಾಮದ ಹಿರಿಯರಾದ ಬಸವರಾಜ ಯೋಗಪ್ಪನವರ ಹಾಗೂ ಕುಸುಗಲ್ ಸಂತಸ ವ್ಯಕ್ತಪಡಿಸಿದ್ದಾರೆ.
ಶಾಲೆಯ ಸುತ್ತಲೂ ಗಿಡ ಮರಗಳನ್ನು ನೆಟ್ಟು ಶಾಲೆಯನ್ನು ಇನ್ನು ಸುಂದರವಾಗಿ ಕಾಣಲು ಪಣ ತೊಟ್ಟು ಯಶಸ್ವಿಯಾಗಿದ್ದಾರೆ. ಇಡೀ ಶಾಲೆಯ ಸರ್ವಾಂಗೀಣ ಅಭಿವೃದ್ಧಿ ಮೆಚ್ಚಿ ಸಾರ್ವಜನಿಕ ಶಿಕ್ಷಣ ಇಲಾಖೆಯು
ಅಜಾದಿ ಕಾ ಅಮೃತ ಮಹೋತ್ಸವ ಅನುದಾನದಲ್ಲಿ 10 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ. ಈ ಅನುದಾನದಲ್ಲಿ ಸ್ಮಾರ್ಟ್ ಕ್ಲಾಸ್, ಕ್ರೀಡಾ ಸಾಮಾಗ್ರಿ, ಪ್ರಯೋಗಾಲಯ ಸಾಮಾಗ್ರಿಗಳು, ನಾಲ್ಕು ಕಂಪ್ಯೂಟರ್, ಪೀಠೋಪಕರಣಗಳನ್ನು ತರಲಾಯಿತು.ಯಾವುದೇ ಪ್ರಶಸ್ತಿ ಪ್ರಚಾರದ ಬೆನ್ನು ಹತ್ತದ ಈ ಶಿಕ್ಷಕರು ಶಾಲೆಯ ವಿದ್ಯಾರ್ಥಿಗಳ ಪ್ರೀತಿ ಮತ್ತು ಗ್ರಾಮಸ್ಥರ ಸಹಕಾರದ ಬಹುಮಾನವೇ ನಂಬಿಕೆಯಲ್ಲಿಯೇ ತೃಪ್ತಿ ಪಟ್ಟವರು. ಯಾವುದೇ ಲಾಭಿ ಮಾಡದೇ ಪ್ರಚಾರ ಪಡೆಯದೇ ಸರಳವಾಗಿ ಸೇವೆ ಸಲ್ಲಿಸಿದ ಇಂತಹ ಶಿಕ್ಷಕರನ್ನು ಗುರುತಿಸಿ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಬಹುಮಾನ ನೀಡಿ ಪ್ರೋತ್ಸಾಹ ನೀಡಬೇಕಾಗಿದೆ..
ಶಾಲಾ ಆರಂಭದ ಸಮಯಕ್ಕೋ ಮುನ್ನ ಬೆಳಿಗ್ಯೆ ೧೦ ಕ್ಕೆ ಹೋಗಿ ಶಾಲೆಯ ಅವಧಿ ಮುಗಿದ ಎರಡು ಗಂಟೆಗಳ ಬಳಿಕ ಶಾಲೆಯಿಂದ ಬರುತ್ತಾರೆ. ಯಾವ ಪ್ರಚಾರಕ್ಕೂ ಜೊತು ಬೀಳದೇ ತಮ್ಮ ಶಾಲೆಯಾಯಿತು ತಾವಾಯಿತು ಎಂದು ಕಾಯಕ ನಿಷ್ಟೆ ಮಾಡಿಕೊಂಡು ಮಕ್ಕಳೆ ನನಗೆ ಪ್ರಶಸ್ತಿ ಅವರಿಗಿಂತ ಯಾವ ಮೀಗಿಲಾದ ಪ್ರಶಸ್ತಿಯಿಲ್ಲ ಎನ್ನುತ್ತಾರೆ. ಇಂತಹ ಅನೇಕ ಶಿಕ್ಷಕರು ನಮ್ಮ ಮಧ್ಯಯೇ ಇದ್ದು ಅವರುಗಳು ಎಲ್ಲೂ ಗುರ್ತಿಸಿಕೊಳ್ಳದೇ ಇನ್ನು ಎಲೆ ಮರೆಕಾಯಿಯಂತೆ ಸೇವೆ ಸಲ್ಲಿಸುತ್ತಲೇ ಬಂದಿದ್ದಾರೆ. ನಮ್ಮ ಕೈಯಲ್ಲಿ ಕಲಿತ ಮಕ್ಕಳು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಲಿ ಎನ್ನುವುದು ಅವರ ಆಶಯವಾಗಿದೆ. ಇಂತಹ ನಿಸ್ವಾರ್ಥ ಸೇವೆಯ ಶಿಕ್ಷಕರನ್ನು ಗುರ್ತಿಸಿ ರಾಜ್ಯ ಸರ್ಕಾರ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಿ ಎನ್ನುವುದು ನಮ್ಮ ಆಶಯವಾಗಿದೆ.
ಯಾವುದೇ ಪ್ರತಿಪಾಲಪೇಕ್ಷೇ ಇಲ್ಲದೇ ದುಡಿದ ದುಡಿಯುತ್ತಿರುವ ಇತಂಹ ಶಿಕ್ಷಕರನ್ನ ಸಮಾಜ, ಸಂಘ ಸಂಸ್ಥೆಗಳು ಸರ್ಕಾರ ಗುರುತಿಸಬೇಕಾಗಿದೆ.


Spread the love

Leave a Reply

error: Content is protected !!