ಬಸವರಾಜ ಹೊರಟ್ಟಿಯವರಿಂದ ಐತಿಹಾಸಿಕ ದಾಖಲೆ ವಿಜಯ ನಿಶ್ಚಿತ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಧೃಡ ವಿಶ್ವಾಸ.

Spread the love

ಹುಬ್ಬಳ್ಳಿ: ನಿರಂತರ ಸಂಘರ್ಷ, ಅವಿರತ ಪರಿಶ್ರಮ ಹಾಗೂ ಅಸಂಖ್ಯಾತ ಹೋರಾಟಗಳ ಮೂಲಕ ರಾಜ್ಯದ ಶೈಕ್ಷಣಿಕ ಕ್ಷೇತ್ರದ ಬೆಳವಣಿಗೆಗೆ ತಮ್ಮದೆಯಾದ ವಿಶಿಷ್ಟ ಕೊಡುಗೆ ನೀಡಿರುವ ಬಸವರಾಜ ಹೊರಟ್ಟಿಯವರು ೮ ಬಾರಿ ಐತಿಹಾಸಿಕ ದಾಖಲೆ ನಿರ್ಮಿಸುವ ಮೂಲಕ ಅಭೂತಪೂರ್ವ ವಿಜಯ ಸಾಸಲಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿಯ ದೇಶಪಾಂಡೆನಗರ ರೋಟರಿ ಪ್ರೌಢಶಾಲೆಯಲ್ಲಿ ಇಂದು ಜರುಗಿದ ಶಿಕ್ಷಕರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ದಶಕಗಳಿಂದ ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಹಗಲಿರುಳು ಶ್ರಮಿಸುತ್ತಾ ಏಳು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಶಿಕ್ಷಣ ಸಚಿವರಾಗಿ, ಸಭಾಪತಿಗಳಾಗಿ ಸುರ್ಘ ಕಾರ್ಯನಿರ್ವಹಿಸುವ ಮೂಲಕ ಶಿಕ್ಷಕ ಸಮುದಾಯದ ಏಕೈಕ ಆಶಾಕಿರಣವಾಗಿ ಬಸವರಾಜ ಹೊರಟ್ಟಿಯವರು ಹೊರಹೊಮ್ಮಿದ್ದು, ಈ ಬಾರಿಯು ಅವರ ಗೆಲುವು ದಾಖಲೆ ಸೃಷ್ಟಿಸಲಿದ್ದು, ಗಿನ್ನಿಸ್ ದಾಖಲೆ ನಿರ್ಮಿಸುವಲ್ಲಿ ತಮ್ಮ ಮತವು ಸೇರಿದೆ ಎಂಬ ಆತ್ಮ ತೃಪ್ತಿ ಹೊಂದಲು ಮತದಾರರಾಗಿರುವ ಎಲ್ಲ ಶಿಕ್ಷಕರು ಕ್ರೀಯಾಶೀಲವಾಗಿ ಚುನಾವಣೆಯಲ್ಲಿ ಸಕ್ರೀಯರಾಗುವಂತೆ ಮನವಿ ಮಾಡಿದರು. ಶಿಕ್ಷಕರ ಹಾಗೂ ಶಿಕ್ಷಣ ಕ್ಷೇತ್ರದ ಅಮೂಲಾಗ್ರ ಸುಧಾರಣೆಗೆ ಹಾಗೂ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಹಾಗೂ ಶಿಕ್ಷಕರ ಹಕ್ಕುಗಳ ರಕ್ಷಣೆಗೆ ಸತತವಾಗಿ ಮುಂಚೂಣಿಯಲ್ಲಿರುವ ಬಸವರಾಜ ಹೊರಟ್ಟಿಯವರು ಇಂದಿಗೂ ಶಿಕ್ಷಕರ ಬಗೆಗೆ ಪ್ರೀತಿ, ಕಳಕಳಿ ಹಾಗೂ ಅವರ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ಮಾಡುವ ದಿಟ್ಟ ಛಲವನ್ನು ಹೊಂದಿರುವದು ಶ್ಲಾಘನೀಯ ಎಂದರು.
ದಿ:೦೧-೦೪-೨೦೦೬ರಿಂದ ರಾಜ್ಯದಲ್ಲಿ ಜಾರಿಗೆ ಬಂದಿರುವ ನೂತನ ಪಿಂಚಣಿ ಯೋಜನೆಯು ಶಿಕ್ಷಕ ಸಮುದಾಯಕ್ಕೆ ಮಾರಕವಾಗಿದ್ದು, ಹಳೆ ಪಿಂಚಣಿ ಯೋಜನೆಯನ್ನು ರಾಜ್ಯದಲ್ಲಿ ಪುನಃ ಜಾರಿಗೊಳಿಸಲು ಬಸವರಾಜ ಹೊರಟ್ಟಿಯವರ ಒತ್ತಾಯದಂತೆ ಚುನಾವಣೆ ನಂತರ ಇಬ್ಬರು ಸೇರಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಕಾರಾತ್ಮಕ ಕ್ರಮ ಜರುಗಿಸಲು ಪ್ರಯತ್ನಿಸಲಾಗುವದು ಎಂದು ಪ್ರಹ್ಲಾದ ಜೋಶಿ ಭರವಸೆ ನೀಡಿದರು.
ದೇಶದಲ್ಲಿ ಕಳೆದ ಎಂಟು ವರ್ಷಗಳಿಂದ ಸುಭದ್ರ, ಸುರಕ್ಷೆ, ಸುಭಿಕ್ಷೆ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನಡೆಸುವ ಮೂಲಕ ಇಡೀ ಜಗತ್ತಿನ ಗಮನ ಸೆಳೆದಿರುವ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡ್ಯೊಯುತ್ತಿದೆ, ಮೂಲಕ ಸೌಕರ್ಯ ಅಭಿವೃದ್ಧಿ ಹಾಗೂ ಆರ್ಥಿಕ ಸ್ಥಿತಿ ಸುಧಾರಣೆಯಲ್ಲಿ ಕೇಂದ್ರ ದಾಪುಗಾಲು ಇಡುತ್ತಿದ್ದು, ಎಂತಹ ಪರಿಸ್ಥಿತಿಯನ್ನು ಸಹ ಸಮರ್ಥವಾಗಿ ಎದುರಿಸುವ ಮೂಲಕ ಭಾರತ ಜಗತ್ತಿನ ನಿರ್ಣಾಯಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಕೋವಿಡ್ ನಂತರ ಭಾರತ ಜಗತ್ತಿನಲ್ಲಿಯೇ ಆರ್ಥಿಕವಾಗಿ ಬಲಿಷ್ಠವಾಗಿದ್ದು, ಮುಂದಿನ ನಾಲ್ಕು ವರ್ಷಗಳಲ್ಲಿ ಭಾರತ ಆರ್ಥಿಕವಾಗಿ ಜಗತ್ತಿನಲ್ಲಿಯೇ ಎರಡನೇ ಸ್ಥಾನ ಪಡೆಯುವಷ್ಟು ಬಲಿಷ್ಟವಾಗಲಿದೆ ಎಂದು ಜೋಶಿ ತಿಳಿಸಿದರು.
ಅಭ್ಯರ್ಥಿ ಬಸವರಾಜ ಹೊರಟ್ಟಿ ಮಾತನಾಡಿ, ಏಳು ಬಾರಿ ಶಿಕ್ಷಕರ ಪ್ರತಿನಿಯಾಗಿ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಬಹುವಾಗಿ ಶ್ರಮಿಸಿದ್ದು, ಈ ಕ್ಷೇತ್ರದಲ್ಲಿರುವ ಎಲ್ಲರ ಮನೆಮಾತಾಗಿದೆ. ಈ ಕ್ಷೇತ್ರದ ಸಮಸ್ಯೆಗಳ ಸುಧಾರಣೆಗಾಗಿ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದು, ಅದಕ್ಕೆ ಶಿಕ್ಷಕರೆಲ್ಲರೂ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಬೆಂಬಲಿಸಿದ್ದಾರೆ. ಈ ಬಾರಿ ಚುನಾವಣೆಯಲ್ಲಿಯೂ ಸಹ ಈಗಾಗಲೇ ಎರಡು ಬಾರಿ ಎಲ್ಲ ಶಿಕ್ಷಕರನ್ನು ಭೇಟಿ ಮಾಡಿ ಚರ್ಚೆ ನಡೆಸಿ ಮತಯಾಚನೆ ಮಾಡಿದ್ದಾಗಿ ತಿಳಿಸಿದರು. ಈ ಬಾರಿ ಚುನಾವಣಾ ಪ್ರಚಾರವನ್ನು ವಿಶೇಷವಾಗಿ ನಡೆಸುತ್ತಿದ್ದು, ಬಿ.ಜೆ.ಪಿ. ಕಾರ್ಯಕರ್ತರು ಹಾಗೂ ಶಿಕ್ಷಕರ ಪಡೆಯೊಂದಿಗೆ ಹಲವು ಸಮಾಲೋಚನಾ ಸಭೆ, ಸಮಾವೇಶಗಳನ್ನು ನಡೆಸಲಾಗಿದೆ. ಈ ಬಾರಿ ಕನಿಷ್ಠ ಶೇಕಡಾ ೮೦ ರಿಂದ ೯೦ರಷ್ಟು ಶಿಕ್ಷಕರು ನನಗೆ ಪ್ರಥಮ ಪ್ರಾಶಸ್ತ್ಯದ ಮತಚಲಾಯಿಸುವ ಮೂಲಕ ನನ್ನ ಕೈಬಲ ಪಡಿಸುವ ವಿಶ್ವಾಸ ಇದೆ. ಬಿ.ಜೆ.ಪಿ. ಸೇರಿರುವುದರಿಂದ ಯಾವುದೇ ಸಮಸ್ಯೆ ಇಲ್ಲ ಹಾಗೂ ಯಾವುದೇ ಭಿನ್ನಾಬಿಪ್ರಾಯೂ ಇಲ್ಲ ಎಂದು ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದರು.
ದಿ:೦೧-೦೪-೨೦೦೬ರಿಂದ ರಾಜ್ಯದಲ್ಲಿ ಜಾರಿಗೆ ಬಂದಿರುವ ನೂತನ ಪಿಂಚಣಿ ಯೋಜನೆಯ ರದ್ದತಿ ಕುರುತಂತೆ ವಿಧಾನ ಮಂಡಲದ ಅವೇಶನದ ಸಂದರ್ಭದಲ್ಲಿ ಸಭೆ ನಡೆಸಿದ್ದು, ಮುಖ್ಯಮಂತ್ರಿಗಳು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ. ರಾಜಸ್ಥಾನ ಸೇರಿದಂತೆ ಕೆಲ ರಾಜ್ಯಗಳಲ್ಲಿ ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಮಾದರಿಯಲ್ಲಿಯೇ ನಮ್ಮ ರಾಜ್ಯದಲ್ಲಿಯೂ ಈ ಕುರಿತು ಸಕಾರಾತ್ಮಕ ಕ್ರಮಕೈಗೊಂಡು ಈ ಸಮಸ್ಯೆಗೆ ತಾರ್ಕಿಕ ಅಂತ್ಯ ಹಾಡಲು ಚುನಾವಣೆ ನಂತರ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರೊಂದಿಗೆ ಸೇರಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವದು ಎಂದು ಹೊರಟ್ಟಿ ತಿಳಿಸಿದರು.
ಗ್ಲೋಬಲ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ವಿಶ್ವನಾಥ ಕೊರವಿ ಮಾತನಾಡಿ, ಬಸವರಾಜ ಹೊರಟ್ಟಿಯವರು ಏಳು ಬಾರಿ ಸತತವಾಗಿ ಶಿಕ್ಷಕರ ಕ್ಷೇತ್ರದಿಂದ ಗೆಲವು ಸಾಸಿದ್ದಾರೆ. ಶಿಕ್ಷಕರ ಕಲ್ಯಾಣಕ್ಕಾಗಿ ಹಗಲಿರುಳು ದುಡಿಯುತ್ತಿರುವ ಹೊರಟ್ಟಿಯವರನ್ನು ಎಂಟನೇ ಬಾರಿಯೂ ಸಹ ಗೆಲ್ಲಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಲು ಎಲ್ಲ ಶಿಕ್ಷಕರು ಕಡ್ಡಾಯವಾಗಿ ಮತ ಚಲಾಯಿಸುವಂತೆ ಮನವಿ ಮಾಡಿದರು.
ಕನಕದಾಸ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯರಾದ ವಿ.ಎಸ್. ಬೆಳಗಲಿ ಮಾತನಾಡಿ, ಬಸವರಾಜ ಹೊರಟ್ಟಿಯವರು ಏಳು ಬಾರಿ ಶಿಕ್ಷಕರ ಕ್ಷೇತ್ರದಿಂದ ವಿಜಯ ಸಾಸಿದ್ದು, ಎಂಟನೇ ಬಾರಿಯೂ ಎಲ್ಲ ಶಿಕ್ಷಕರ ವಿಶೇಷ, ಪ್ರೀತಿ, ಕಾಳಜಿ ಹಾಗೂ ಸಾಮಥ್ರ್ಯದಿಂದ ಕೇವಲ ವಿಜಯವಲ್ಲ, ದಿಗ್ವಿಜಯ ಸಾಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜಾತಿ, ಮತ, ಪಂಥವಿಲ್ಲದೇ ಸಮಸ್ತ ಶಿಕ್ಷಕ ಸಮುದಾಯ ಹೊರಟ್ಟಿಯವರನ್ನು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸಲಿದ್ದಾರೆ ಎಂದು ಬೆಳಗಲಿ ತಿಳಿಸಿದರು.
ಸಭೆಯಲ್ಲಿ ಹುಬ್ಬಳ್ಳಿಯ ಪ್ರಮುಖ ಶಾಲೆಗಳ ೫೦೦ಕ್ಕೂ ಹೆಚ್ಚು ಶಿಕ್ಷಕರು ಪಾಲ್ಗೊಂಡಿದ್ದು, ಶಿಕ್ಷಕ ಸಂಘಟನೆಗಳ ಪ್ರಮುಖರಾದ ಜಗದೀಶ ಕಲ್ಯಾಣಶೆಟ್ಟರ, ಜಗದೀಶ ದ್ಯಾವಪ್ಪನವರ, ಎಂ.ಎಸ್. ಪಾಟೀಲ, ಎಂ.ಬಿ.ಕುಂಬಾರಗೇರಿ, ಶಿವರಾಂ ಹೆಗಡೆ, ಅಬ್ದುಲ್ ಮೆಣಸಗಿ, ಆರ್.ವಿ. ಬದ್ದಿ, ಬಿ.ಎಸ್. ಗೌಡರ, ಸಿ.ಜಿ. ಹುಣಸ್ಯಾಳ, ವಿ.ಎಸ್. ಹುದ್ದಾರ, ಆರ್.ಬಿ. ಕೊಣ್ಣೂರ, ಜ್ಯೋತಿ ಪಾಟೀಲ, ಶಾಂತಾ ಕಲಾದಗಿ, ದಾನಪ್ಪಗೌಡರ, ಬಿ.ಕೆ. ಮಳಗಿ, ಡಿ.ಡಿ. ಮೇಚಣ್ಣವರ ಮತ್ತಿತರರು ಉಪಸ್ಥಿತರಿದ್ದರು.


Spread the love

Leave a Reply

error: Content is protected !!